ಮಡಿಕೇರಿ ಜ.1 : ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಿತ್ರಕ್ಕೆ ಸೌತ್ ಇಂಡಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತ್ತಿದೆ. ಈ ಚಿತ್ರದ ನಟನೆಗಾಗಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರುಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಫಿಲಂ ಫೆಸ್ಟಿವಲ್ ಗೆ 11,520 ಚಿತ್ರಗಳು ಬಂದಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ 630 ಚಿತ್ರಗಳಲ್ಲಿ “ನಾಡ ಪೆದ ಆಶಾ” ಕೂಡ ಒಂದು. ಚಿತ್ರ ಪ್ರದರ್ಶನಗೊಳ್ಳುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸ್ತ್ರೀ ಪ್ರಧಾನ ಕಥಾವಸ್ತುವಿನ “ನಾಡ ಪೆದ ಆಶಾ” 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡು ಕೊಡಗು ಜಿಲ್ಲೆಯಾದ್ಯಂತ 123 ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ನಡೆದ ಅಂತರರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ “ನಾಡ ಪೆದ ಆಶಾ” ಕೊಡವ ಚಿತ್ರ ಇಲ್ಲಿಯವರೆಗೆ ಒಟ್ಟು 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.…
Breaking News
- *ಮೂರ್ನಾಡಿನಲ್ಲಿ 102ನೇ ವಾರ್ಷಿಕ ಕೈಲ್ ಪೊಳ್ದ್ ಆಚರಣೆ : ವಿವಿಧ ಆಟೋಟಗಳು*
- *ಸೆ.5 ರಂದು ಶಿಕ್ಷಕರ ದಿನಾಚರಣೆ*
- *ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ*
- *ಟೈಲರಿಂಗ್ ಯಂತ್ರೋಪಕರಣ ವಿತರಣೆ*
- *ಹೊನ್ನಮ್ಮನ ಕೆರೆ ಆವರಣದಲ್ಲಿ ಸ್ವಚ್ಛತಾ ಶ್ರಮದಾನ*
- *ಪೊಲೀಸ್ ಪೇದೆ ಹುದ್ದೆ : ನೇರ ನೇಮಕಾತಿ ಪರೀಕ್ಷೆ ಸುಸೂತ್ರವಾಗಿ ನಡೆಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
- *31 ನೇ ವರ್ಷದ ಕೈಲ್ ಪೊವ್ದ್ ನ್ನು ಸಂಭ್ರಮದಿಂದ ಆಚರಿಸಿದ CNC*
- *ಮಡಿಕೇರಿಯಲ್ಲಿ ಬೀದಿನಾಯಿ ಉಪಟಳ ತಡೆಗೆ ಕ್ರಮ*
- *ಕೊಡಗು ವಿದ್ಯಾಲಯದಲ್ಲಿ ಈದ್ ಮಿಲಾದ್ ಆಚರಣೆ*
- *ಸುಂಟಿಕೊಪ್ಪ : ಯುವಶಕ್ತಿ ದಾರಿ ತಪ್ಪದಂತೆ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು: ಬಿ.ಸಿ. ದಿನೇಶ್*






