ಮಡಿಕೇರಿ ಮಾ.7 NEWS DESK : ತನ್ನ ಉಪಟಳದ ಮೂಲಕವೇ ಸೋಮವಾರಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ “ಕಾಜೂರು ಕರ್ಣ”ನೆಂದೇ ಹೆಸರುವಾಸಿಯಾಗಿದ್ದ ಕಾಡಾನೆಗೆ ಈಗ ನೋವಿನಿಂದ ನರಳುವ ಮತ್ತು ಕಣ್ಣೀರಿನಲ್ಲೇ ಕಾಲ ಕಳೆಯುವ ದುಸ್ಥಿತಿ ಬಂದೊದಗಿದೆ. ಅರಣ್ಯದಲ್ಲಿ ಅರಸನಂತೆ ಮೆರೆದು ಸೋಮವಾರಪೇಟೆಯ ಕಾಜೂರು ಗ್ರಾಮಸ್ಥರಲ್ಲಿ ನಿತ್ಯ ಆತಂಕ ಮೂಡಿಸುತ್ತಿದ್ದ ಒಂಟಿಸಲಗ ಕಳೆದ ಒಂದು ತಿಂಗಳಿನಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾನೆ. ಬಲಾಢ್ಯ ದೇಹವನ್ನು ಹೊಕ್ಕಿರುವ ಮದ್ದುಗುಂಡುಗಳೇ ಕರ್ಣನ ಕಣ್ಣೀರಿಗೆ ಪ್ರಮುಖ ಕಾರಣವಾಗಿದೆ. ಇದೇ ಫೆ.1 ರಂದು ಬಂಧಿಯಾದ ಕರ್ಣ ದುಬಾರೆ ಸಾಕಾನೆ ಶಿಬಿರದ ಕ್ರಾಲ್ ನಲ್ಲಿ ರೋಧಿಸುತ್ತಿದ್ದ. ಈತನನ್ನು ಪರೀಕ್ಷೆಗೆ ಒಳಪಡಿಸಿದಾಗ ಕಾಲುಗಳಲ್ಲಿ ಗುಂಡು ಇರುವುದು ಗೋಚರಿಸಿದೆ. ನಂತರದ ದಿನಗಳಲ್ಲಿ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತಾ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯರು ಸಾಕಾನೆ ಶಿಬಿರದ ಕ್ರಾಲ್ ಒಳಗೆಯೇ ಕರ್ಣನಿಗೆ ಚಿಕಿತ್ಸೆ ಆರಂಭಿಸಿದರು. ಗುಂಡೇಟಿನಿಂದ ಹಿಂಬದಿಯ ಕಾಲಿನಲ್ಲಿ ದೊಡ್ಡ ಗಾಯವಾಗಿ ಆ ಭಾಗ ಕೊಳೆಯುತ್ತಿತ್ತು.…
ಲೇಖಕ: admin
ನಾಪೋಕ್ಲು ಮಾ.7 NEWS DESK : ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ ಎಂದು ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಸೀರ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಮಡಿಕೇರಿ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮಡಿಕೇರಿ ವಲಯ, ಜಿಲ್ಲಾ ಪಂಚಾಯತ್ ಕೊಡಗು, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಕಡಗದಾಳು ಸಂಯುಕ್ತ ಆಶ್ರಯದಲ್ಲಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರೌಢಾವಸ್ಥೆ ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ. ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ವ ನಿಗ್ರಹದೊಂದಿಗೆ ಹತೋಟಿಗೆ ತಂದುಕೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಶಿಬಿರಾಧಿಕಾರಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪಿ.ಪಿ.ನಂದಕುಮಾರ್ ಮಾತನಾಡಿ ಇದುವರೆಗೆ ಕರ್ನಾಟಕ ರಾಜ್ಯದ 19,500…
ಕುಶಾಲನಗರ ಮಾ.7 NEWS DESK : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿದ್ದು, ಶಿಸ್ತಿನ ಬದುಕು ಪ್ರತಿಯೊಬ್ಬರನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಮತ್ತು ಸೋಮವಾರಪೇಟೆ ಪೊಲೀಸ್ ಉಪವಿಭಾಗ ಹಾಗೂ ಕುಶಾಲನಗರ ಟೌನ್ ಪೊಲೀಸ್ ಇಲಾಖೆ ಸ0ಯುಕ್ತ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸತತ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹಾಗೂ ತಡೆಗಟ್ಟಲು ಯುವ ಪೀಳಿಗೆಯ ಪಾತ್ರ ಕಾನೂನಿನ ಅರಿವಿನ ಸಮಗ್ರ ಮಾಹಿತಿಯನ್ನು ಒದಗಿಸಿದರು. ತಮ್ಮ ಬೆಳವಣಿಗೆಗೆ ತಾವೇ ಎಲ್ಲಾ ರೀತಿಯಲ್ಲಿಯೂ ಕಾರಣಕರ್ತರಾಗುತ್ತೇವೆ. ಯಾವುದೇ ಸಂದರ್ಭ ಯುವ ಪೀಳಿಗೆ ಹಾದಿ ತಪ್ಪಬಾರದು ಇಂದು ಕಿವಿಮಾತು ಹೇಳಿದ ಕೆ.ರಾಮರಾಜನ್ ವಿದ್ಯಾರ್ಥಿಗಳ ಸುಮಾರು 60ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸಂಪನ್ಮೂಲ ಅಧಿಕಾರಿ…
ಬೆಂಗಳೂರು NEWS DESK ಮಾ.7 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಯ ವಿವಿಧ ಆಸ್ಪತ್ರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು. ಕುಶಾಲನಗರ ತಾಲ್ಲೂಕು ಆಸ್ಪತ್ರೆಯನ್ನು ನವೀಕರಣಗೊಳಿಸಲಾಗುವುದು. ರಾಜ್ಯದ ವಿವಿಧ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಒಟ್ಟು 650 ಕೋಟಿ ರೂ. ಗಳನ್ನು ಘೋಷಿಸಲಾಗಿದೆ. ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ತಿಳಿಸಿದ್ದಾರೆ. ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು ಎಂದು ವಿವರಿಸಿದ್ದಾರೆ.
ಸೋಮವಾರಪೇಟೆ ಮಾ.7 NEWS DESK : ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತ್ವರಿತವಾಗಿ ತಯಾರು ಮಾಡುವ ಉದ್ದೇಶದಿಂದ ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಮಾ.20 ರಿಂದ ಏ.17ರ ವರಗೆ ಬೇಸಿಗೆ ರಜದಿನದ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು, ಜಿಲ್ಲೆ ಮತ್ತು ಹೊರಜಿಲ್ಲೆಯ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು. ನುರಿತ ಹಾಗೂ ಪ್ರತಿಭಾವಂತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. ಹೊರಗಿನ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅವಶ್ಯಕತೆವಿರುವವರಿಗೆ ವಸತಿ ಸೌಲಭ್ಯ ಒದಗಿಸಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂದು ಉದ್ದೇಶದಿಂದ ಕುವೆಂಪು ವಿದ್ಯಾಸಂಸ್ಥೆಯನ್ನು 2003ರಲ್ಲಿ ಸ್ಥಾಪಿಸಲಾಯಿತು. ಪ್ರಸಕ್ತ ಶೇ.95 ರಷ್ಟು ವಿದ್ಯಾರ್ಥಿಗಳು ಕೃಷಿಕ ಕುಟುಂಬದ ಗ್ರಾಮೀಣ ಭಾಗದವರಾಗಿದ್ದಾರೆ. ಎಸ್‍ಎಸ್‍ಎಲ್‍ಸಿ ವಿಭಾಗದಲ್ಲಿ ಕಳೆದ 10 ವರ್ಷಗಳಿಂದ…
ನಾಪೋಕ್ಲು ಮಾ.7 NEWS DESK : ನೆಲಜಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ವಾರ್ಷಿಕ ಕಲಾಡ್ಚ ಉತ್ಸವವು ಮಾ.13 ರಂದು ನಡೆಯಲಿದೆ. ಉತ್ಸವದ ಪ್ರಯುಕ್ತ ತುಲಾಭಾರ ಸೇವೆ, ಎತ್ತು ಪೋರಾಟ, ಮಹಾಪೂಜೆ, ದೇವರ ನೃತ್ಯ ಬಲಿ ಹಾಗೂ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕೋರಿದ್ದಾರೆ. ತುಲಾಭಾರ ಸೇವೆ ಮಾಡಲಿಚ್ಚಿಸುವವರು ಮುಂಚಿತವಾಗಿ ದೇವಸ್ಥಾನದ ಕಾರ್ಯದರ್ಶಿ ಮುಕ್ಕಾಟ್ಟಿರ ವಿನಯ್ – 94495 54997 ಗೆ ಸಂಪರ್ಕಿಸಿ ಹೆಸರು ನೊಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ವರದಿ – ದುಗ್ಗಳ ಸದಾನಂದ.
ಮಡಿಕೇರಿ ಮಾ.7 NEWS DESK : ಕೊಡಗು ಪತ್ರಕರ್ತರ ಸಂಘದಿಂದ ಅತ್ಯುತ್ತಮ ವರದಿಗಳಿಗೆ ನೀಡಲಾಗುವ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಏಳು ಮಂದಿ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಘದಿಂದ ನೀಡಲಾಗುವ ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ‘ಪ್ರಜಾಪ್ರಭುತ್ವದ ದೇಗುಲದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ದುಷ್ಕರ್ಮಿಗಳು’ ಎಂಬ ವರದಿಗೆ ಅನಿಲ್ .ಹೆಚ್.ಟಿ.ಪಡೆದು ಕೊಂಡಿದ್ದಾರೆ. ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ‘ಸೌಲಭ್ಯ ವಂಚಿತ ನಾಗರ ಹೊಳೆ ಆಶ್ರಮ ಶಾಲೆ’ ಎಂಬ ವರದಿಗೆ ವಿನೋದ್ ಮೂಡಗದ್ದೆ ಭಾಜನರಾಗಿದ್ದಾರೆ. ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ‘ಏಲಕ್ಕಿ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ’ ಎಂಬ ವರದಿಗೆ ಡಿ.ಪಿ.ಲೋಕೇಶ್ ಅವರಿಗೆ ಲಭಿಸಿದೆ. ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ವಿಘ್ನೇಶ್ ಭೂತನಕಾಡು ಅವರ ‘ಏಷ್ಯನ್ ಗೇಮ್ಸ್ ಗೆ ಪುಟ್ಟ ಜಿಲ್ಲೆ ಕೊಡಗಿನ ಕ್ರೀಡಪಟುಗಳು’ ಎಂಬ ವರದಿಗೆ ದೊರೆತಿದೆ. ಸಂಘದ ಸಲಹೆಗಾರರು ಹಾಗೂ ಶಕ್ತಿ ಪತ್ರಿಕೆಯ ಸಲಹಾ…
ಮಡಿಕೇರಿ ಮಾ.7 NEWS DESK : ಮಡಿಕೇರಿ-ಪಾಣತ್ತೂರು (ಕೇರಳ ಗಡಿ) ಮಾರ್ಗದಲ್ಲಿ ಬಾಕಿ ಉಳಿದಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ಕುಂದಚೇರಿ, ಭಾಗಮಂಡಲ ಹೋಬಳಿ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ವಿಳಂಬ ವಾಗುತ್ತಿರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಅದನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ್ ಗಡ್ಕರಿ ಅವರಿಗೆ ಸಂಸದ ಯದುವೀರ್ ಮನವಿ ಸಲ್ಲಿಸಿದ್ದಾರೆ.
ಕುಶಾಲನಗರ ಮಾ.6 NEWS DESK : ಕುಶಾಲನಗರ ಸಂಸ್ಕೃತ ಭಾರತಿ ಮತ್ತು ರಂಗಭಾರತಿ ಕಲಾಮಂದಿರಂ ಸಹಯೋಗದೊಂದಿಗೆ ಕುಶಾಲನಗರದ ರಂಗಭಾರತಿ ಕಲಾಮಂದಿರಂನಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯಾವುದೇ ಅಧ್ಯಯನಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಹುಟ್ಟಿನಿಂದ ಸಾಯುವ ತನಕ ನಿರಂತರ ಕಲಿಕೆಯ ಅಗತ್ಯತೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಉದ್ಯಮಿ ಹಾಗೂ ಸಂಸ್ಕೃತ ವಿದ್ವಾಂಸರಾಗಿರುವ ವೇದ ವಿಜ್ಞಾನ ಗುರುಕುಲದ ಶಶಾಂಕ್ ಹತ್ವಾರ್ ಸಂಸ್ಕೃತ ಪದಗಳನ್ನು ಬಳಸುವ ಮೂಲಕ ಶಿಬಿರಾರ್ಥಿಗಳ ಪರಿಚಯ ಮಾತುಗಳೊಂದಿಗೆ ಹತ್ತು ದಿನಗಳ ಕಾಲ ನಡೆಯುವ ಉಚಿತ ತರಗತಿ ಆರಂಭಿಸಿದರು. ಸಂಸ್ಕೃತ ಭಾರತಿ ಮಂಗಳೂರು ವಿಭಾಗ ಸಂಯೋಜಕ ಮಧುಸೂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಭಾರತಿಯ ಕಾರ್ಯದರ್ಶಿ ದೀಪ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಸಂಜಯ್ ಪ್ರಾರ್ಥಿಸಿದರು. ಶಿಕ್ಷಕಿ ಕೃತಿಕ ಸ್ವಾಗತಿಸಿದರು. ಮಧುಸೂದನ್ ವಂದಿಸಿದರು.
ಮಡಿಕೇರಿ ಮಾ.6 NEWS DESK : ಕೋದಂಡ ರಾಮ ದೇವಾಲಯದಲ್ಲಿ 35ನೇ ವರ್ಷದ ರಾಮೋತ್ಸವವನ್ನು ಅದ್ದೂರಿಯಾಗಿ ನಡೆಸುವ ಪ್ರಯುಕ್ತ ರಾಮೋತ್ಸವ ಮಹಿಳಾ ಸಮಿತಿಯ ಸಭೆ ನಡೆಯಿತು. ಕೋದಂಡ ರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷತೆ ಭಾರತಿ ರಮೇಶ್ ರಾಮೋತ್ಸವದಲ್ಲಿ ಮಹಿಳಾ ಸಮಿತಿಯ ಪಾತ್ರದ ಕುರಿತು ವಿವರಿಸಿದರು. ಉದ್ಯಮಿ ಜಯಂತಿ ಶೆಟ್ಟಿ ಮಾತನಾಡಿ, ರಾಮೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಕಡೆಯಿಂದಲೂ ಮಹಿಳೆಯರು ಬರಬೇಕು, ಮಡಿಕೇರಿಯ ಕೋದಂಡ ರಾಮ ದೇವಾಲಯದಲ್ಲಿ ಈ ರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಜಾತಿಗಳನ್ನು ಮೀರಿ ನಡೆಯುತ್ತಿದೆ. ಇಲ್ಲಿ ಎಲ್ಲರೂ ಸಮಾನರು ಎಂದರು.ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್, ಈ ಉತ್ಸವ ಸಂಪೂರ್ಣವಾಗಿ ಯಶಸ್ವಿಯಾಗಬೇಕು. ಯಶಸ್ವಿಯಾಗಲು ಮಹಿಳಾ ಸಮಿತಿಯ ಪಾತ್ರ ಬಹಳಾ ಮುಖ್ಯವಾಗಿರುತ್ತದೆ. ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪ್ರಾತಿನಿಧ್ಯ ನಮಗೆ ಶಕ್ತಿ ನೀಡುತ್ತದೆ ಎಂದರು. ಅಲ್ಲದೆ ಉತ್ಸವದ ಸಂಪೂರ್ಣ ತಯಾರಿಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ರಾಮೋತ್ಸವ ಸಮಿತಿಯ ಮಹಿಳಾ ಸಮಿತಿಯ ಉಪಾಧ್ಯಕ್ಷರಾದ…






