ಲೇಖಕ: admin

ಸೋಮವಾರಪೇಟೆ ಏ.4 NEWS DESK : ರೋಟರಿ ಹಿಲ್ಸ್ ಸೋಮವಾರಪೇಟೆ ಮತ್ತು ರೋಟರಿ ಕುಶಾಲನಗರ ವತಿಯಿಂದ ಹಾರಂಗಿ ಡ್ಯಾಂ ಸಮೀಪದ ಹುಲುಗುಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕರ ತಂಗುದಾಣವನ್ನು ರೋಟರಿ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಉದ್ಘಾಟಿಸಿರು. ನಂತರ ಅವರು ಮಾತನಾಡಿ, ರೋಟರಿ ಸಂಸ್ಥೆಯೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ರೋಟರಿ ಸದಸ್ಯರು ಪ್ರತಿಫಲಾಫೇಕ್ಷೆಯಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದ ಪ್ರತಿಯೊಬ್ಬರೂ ತಾವು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜಸೇವೆಗೆ ಉಪಯೋಗಿಸಿದರೆ ಅದು ಪುಣ್ಯ ಕಾರ್ಯ ಎಂದು ಹೇಳಿದರು. ರೋಟರಿ ಸಹಾಯಕ ಪ್ರಾಂತಪಾಲ ಡಾ. ಹರಿ ಎ.ಶೆಟ್ಟಿ. ವಲಯ ಸೇನಾನಿ ಎಂ.ಎಂ.ಪ್ರಕಾಶ್ ಕುಮಾರ್, ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ರೋಟರಿ ಕುಶಾಲನಗರ ಅಧ್ಯಕ್ಷ ಸಿ.ಬಿ.ಹರೀಶ್, ಕಾರ್ಯದರ್ಶಿ ಡಿ.ಡಿ. ಕಿರಣ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಇದ್ದರು.

Read More

ಗೋಣಿಕೊಪ್ಪ ಏ.4 NEWS DESK : ಭಗತ್‍ಸಿಂಗ್ ಯುವಕ ಸಂಘ ಅಯೋಜಿಸಿದ ಜಿಸಿಎಲ್ ಐದನೇ ಅವೃತಿಗೆ ಗೋಣಿಕೊಪ್ಪ ದಸರಾ ಮೈದಾನದಲ್ಲಿ ಚಾಲನೆ ದೊರೆತಿದೆ. ಪೊನ್ನಂಪೇಟೆ ರಾಮಕೃಷ್ಣ ಶಾರದ ಆಶ್ರಮದ ಅಧ್ಯಕ್ಷ ಪರಹಿತ ನಂದಾಜಿ ಮಹಾರಾಜ್ ಮತ್ತು ಗೋಣಿಕೊಪ್ಪ ಸಂಥ ಥೋಮಸ್ ಶಾಲೆಯ ಪ್ರಾಂಶುಪಾಲ ಆಂಟೋನಿ ಪಯ್ಯಪಲ್ಲಿ ಮತ್ತು ಇತರ ಅತಿಥಿಗಳು ಪಂದ್ಯಾವಳಿಗೆ ಚಾಲನೆ ನೀಡಿದರು. ಇಪ್ಪತ್ತು ತಂಡಗಳು ನಾಲ್ಕು ದಿನಗಳು ಗೋಣಿಕೊಪ್ಪಲು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ನಂತರ ಮಾತನಾಡಿದ ಸ್ವಾಮಿ ಪರಾಹಿತಾನಂದ ಮಹರಾಜ್, ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯುತ್ತಮವಾಗಿದೆ. ದೇವರ ಪ್ರಾರ್ಥನೆಯಿಂದ ಏಕಾಗ್ರತೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾದರೂ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಸಿಗಲಿದೆ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಈ ಭಾರತ ದೇಶ ಕಟ್ಟಲು ಬಲಿಷ್ಠ ಯುವಕರ ಶಕ್ತಿ ಬೇಕು ಎಂದು ಹೇಳುತ್ತಿದ್ದರು, ಅಂತಹ ಶಕ್ತಿ ಕ್ರೀಡೆಯಿಂದ ಯುವಕರು ಪಡೆದುಕೊಳ್ಳಬಹುದು. ನಮ್ಮ ಶಕ್ತಿ ಬಗ್ಗೆ ನಂಬಿಕೆ ಇರಬೇಕು. ಧ್ಯಾನ ಮತ್ತು ಕ್ರೀಡೆಗಳು ಪರಿಣಾಮಕಾರಿ ಜೀವನವನ್ನು ರೂಪಿಸುತ್ತದೆ ಎಂದು…

Read More

ಮಡಿಕೇರಿ ಏ.4 NEWS DESK : ಕೊಡಗು ಗೌಡ ಸಮಾಜಗಳಲ್ಲಿ ಸಕ್ರಿಯರಾಗಿದ್ದ ಗೌಡ ಜನಾಂಗದ ಹಿತೈಷಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಕಾರಣಕರ್ತರಾದ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಅವರು ಸೋಮವಾರಪೇಟೆ ಗೋಣಿಮರೂರು ಗ್ರಾಮದ ನಿವಾಸಿಯಾಗಿರುವ ಪ್ರಸ್ತುತ ವೃತ್ತಿ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ ವಿನಯ್ ಸೋಮಯ್ಯ ಗೌಡ ಸಮಾಜಗಳಲ್ಲಿ ಸಕ್ರಿಯರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರ ಆತ್ಮಹತ್ಯೆ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಕನ ಸಾವಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಂತಾಪ ಸೂಚಿಸುತ್ತದೆ. ವಿನಯ್ ನ ಆತ್ಮಹತ್ಯೆಗೆ ಕಾರಣವಾದ ಬೆಳವಣಿಗೆಗಳನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ವಿನಯ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕುರಿತು ಕೀಳು ಮಟ್ಟದ ಸಂದೇಶ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಇದನ್ನು ಪ್ರಚಾರ ಕೂಡ…

Read More

ಮಡಿಕೇರಿ ಏ.4 NEWS DESK : ಕೊಡಗು ಜಿಲ್ಲಾ ಬಂಟರ ಸಂಘ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಮೇ 10 ಮತ್ತು 11 ರಂದು ಮಡಿಕೇರಿಯಲ್ಲಿ “ಬಂಟೆರೆನ ವಾರ್ಷಿಕ ಸಮ್ಮಿಲನ-2025” ನಡೆಯಲಿದ್ದು, ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ಯುವ ಬಂಟ್ಸ್ ಅಸೋಸಿಯೇಷನ್ ನಿರ್ದೇಶಕ ಕೆ.ಶರತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ ಕಾಂಪೌಂಡ್) ನಲ್ಲಿ ಬೆಳಿಗ್ಗೆ 9 ಗಂಟೆಗೆ ಸಭಾ ಕಾರ್ಯಕ್ರಮದ ಹಾಗೂ ವಿವಿಧ ಕ್ರೀಡಾಕೂಟಗಳಿಗೆ ಚಾಲನೆ ದೊರೆಯಲಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಕ್ರಿಕೆಟ್ ಮತ್ತು ವಾಲಿಬಾಲ್ ತಂಡಗಳು ಏ.20ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು. ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ನಿಂಬೆ ಚಮಚ ಹಾಗೂ ಇತರೆ ಆಕರ್ಷಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಕ್ಕಳಿಗೆ 100 ಮೀ ಓಟ ಹಾಗೂ ಮನೋರಂಜನಾ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.…

Read More

ಮಡಿಕೇರಿ ಏ.4 NEWS DESK : ಮಡಿಕೇರಿ -ನ್ಯೂ ಫ್ರೆಂಡ್ಸ್ ಅಭ್ಯತ್ ಮಂಗಲ ವತಿಯಿಂದ ನಾಲ್ಕನೇ ವರ್ಷದ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಏ.4,5,6, ರಂದು ಚೆಟ್ಟಳ್ಳಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ. ಒಟ್ಟು 9 ಮಾಲೀಕತ್ವದ 9 ತಂಡಗಳು ಪಾಲ್ಗೊಳ್ಳಲಿದ್ದು, ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ, ಜೆ.ಪಿ.ಫ್ರೆಂಡ್ಸ್, ಎಂ. ಜೆ. ಬ್ರದರ್ಸ್, ಸಗಮ್ ಜ್ಯೋತಿನಗರ, ಟೀಮ್ ಕೊಂಬನ್, ಎಂ, ಎಸ್, ಡಿ, ಅರೆಕಾಡ್, ಪೋಶಿತ್ ಫ್ರೆಂಡ್ಸ್, ಕೆ,ಯು, ಫ್ರೆಂಡ್ಸ್, ವಿಕ್ಟರಿ ಹಂಟರ್ಸ್, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 28,000, ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ದ್ವಿತೀಯ ಬಹುಮಾನವಾಗಿ 17,000 ನಗದು ಹಾಗೂ ಆಕರ್ಷಕ ಟ್ರೊಫಿ, ತೃತೀಯ ಬಹುಮಾನ ವಾಗಿ ಆಕರ್ಷಕ ಟ್ರೊಫಿ, ಚತುರ್ಥ ಬಹುಮಾನವಾಗಿ ಆಕರ್ಷಕ ಟ್ರೊಫಿ, ಉತ್ತಮ ತಂಡಕ್ಕೆ ಆಕರ್ಷಕ ಟ್ರೊಫಿ, ಹಾಗೂ ಕ್ರೀಡಾ ಪಟುಗಳಿಗೆ ವ್ಯಯಕ್ತಿಕ ಬಹುಮಾನಗಳು ಕೂಡ ಸಿಗಲಿವೆ ಅರೆಕಾಡು, ವಾಲ್ನ್ ರು, ಚೆಟ್ಟಳ್ಳಿ, ಮರಗೋಡು, ಭೂತನಕಾಡು,…

Read More

ಸೋಮವಾರಪೇಟೆ ಏ.4 NEWS DESK : ಶ್ರೀ ರಾಮನವಮಿ ಉತ್ಸವ ಸಮಿತಿ ವತಿಯಿಂದ ಏ.6 ರಂದು ಆಂಜನೇಯ ದೇವಾಲಯದಲ್ಲಿ ಶ್ರೀ ರಾಮನವಮಿ ಹಾಗೂ ಸಂಜೆ ಪಟ್ಟಣದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ಹೇಳಿದರು. ಏ.6 ರಂದು ಬೆಳಿಗ್ಗೆಯಿಂದಲೇ ಶ್ರೀ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಮಧ್ಯಾಹ್ನ ಜ್ಞಾನವಿಕಾಸ ಶಾಲೆಯ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಶೋಭ ಯಾತ್ರೆ ದೇವಾಲಯ ಆವರಣದಿಂದ ಪ್ರಾರಂಭವಾಗಲಿದೆ. ಶೋಭಾ ಯಾತ್ರೆಯಲ್ಲಿ 8 ಟ್ಯಾಬ್ಲೊಗಳೊಂದಿಗೆ ಅಲಂಕೃತ ಮಂಟಪದಲ್ಲಿ ಶ್ರೀರಾಮನ ವಿಗ್ರಹವನ್ನು ಕುಳ್ಳಿರಿಸಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಸ್ಥಳೀಯ ವಾದ್ಯ ತಂಡಗಳು, ಮೈಸೂರು ತಮಟೆ, ನಾಸಿಕ್ ಬ್ಯಾಂಡ್, ವೀರಗಾಸೆ ನೃತ್ಯ, ವಿವಿಧ ವೇಷ ಕುಣಿತಗಳು ನೋಡಗರನ್ನು ರಂಜಿಸಲಿವೆ ಎಂದರು. ಕಕ್ಕೆಹೊಳೆ ಮಾರ್ಗವಾಗಿ, ಕ್ಲಬ್ ರಸ್ತೆ, ಖಾಸಗಿ ಬಸ್ ನಿಲ್ದಾಣ, ಮಡಿಕೇರಿ ರಸ್ತೆ, ಬಾಣವಾರ ರಸ್ತೆ ನಂತರ ಅದೇ ಮಾರ್ಗವಾಗಿ ಅಂಜನೇಯ ದೇವಾಲಯಕ್ಕೆ ರಾತ್ರಿ ತಲುಪಲಿದೆ ಎಂದು ಮಾಹಿತಿ…

Read More

ಸೋಮವಾರಪೇಟೆ ಏ.4 NEWS DESK : ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳಿಗೆ ಶಾಲಾಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದಿಂದ ಬೀಳ್ಕೊಡಲಾಯಿತು. ಶಾಲೆಯ ಪ್ರಗತಿಗೆ ಸಹಕಾರ ನೀಡುತ್ತಿರುವ ದಾನಿಗಳಾದ ಅರೆಯೂರಿನ ಕೆ.ಎನ್. ಪಾಪಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಪಯ್ಯ, ಗ್ರಾಮೀಣ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಶಿಕ್ಷಕರು ಕೂಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಗೆ ದಾನಿಗಳ ಸಹಕಾರ ಅವಶ್ಯಕತೆಯಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿಲೀಪ್, ಉಪಾಧ್ಯಕ್ಷೆ ದೇಚಮ್ಮ, ನವೀನ್‍ಕುಮಾರ್, ಶಂಷುದ್ದೀನ್, ರಮೇಶ್, ಚೇತನ್, ಮುಖ್ಯ ಶಿಕ್ಷಕಿ ಎಸ್ತೆಲಾ ಡಿಸಿಲ್ವಾ, ಶಿಕ್ಷಕರಾದ ರಮೇಶ್, ಶಶಿಕಲಾ, ಗಣೇಶ್, ಹೇಮಲತಾ, ಪೋಷಕರು ಇದ್ದರು.

Read More

ಮಡಿಕೇರಿ NEWS DESK ಏ.4 : ಕೊಡಗಿನ ಬಿಜೆಪಿ ಕಾರ್ಯಕರ್ತ ಸೋಮವಾರಪೇಟೆಯ ಗೋಣಿಮರೂರು ಮೂಲದ ವಿನಯ್ ಸೋಮಯ್ಯ(39) ಎಂಬುವವರು ಬೆಂಗಳೂರಿನ ನಾಗವಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮೊದಲು ವಿನಯ್ ಡೆತ್ ನೋಟ್ ಬರೆದಿಟ್ಟಿದ್ದು, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರೊಬ್ಬರ ಹೆಸರನ್ನು ಉಲ್ಲೇಖಿಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿನಾಕಾರಣ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಇದರಿಂದ ಮನನೊಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ವಿನಯ್ ಸೋಮಯ್ಯ ಅವರು ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಕೊಡಗು ಜಿಲ್ಲಾ ಬಿಜೆಪಿ ಆತ್ಮಹತ್ಯೆಗೆ ಕಾರಣಕರ್ತರಾದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದೆ.

Read More

ಮಡಿಕೇರಿ ಏ.4 NEWS DESK : ನಗರದ ಕನ್ನಿಕಾ ಬಡಾವಣೆಯಲ್ಲಿರುವ ಲಿಟ್ಲ ಪ್ಲವರ್ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಮೇಳ/ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆಯಿತು. ಲಿಟ್ಲ ಪ್ಲವರ್ ಸಂಸ್ಥೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಮತ್ತು ಸೃಜನಶೀಲತೆಗೆ ಒತ್ತು ನೀಡಲಾಗುತ್ತಿದೆ ಎಂದು ಪ್ರಾಂಶುಪಾಲರಾದ ಸುನಿತಾ ಪ್ರೀತು ತಿಳಿಸಿದ್ದಾರೆ. ಬೇಸಿಗೆ ಅವಧಿಯಲ್ಲಿ ಮಕ್ಕಳಿಗೆ ಒಂದರಿಂದ ಎರಡು ತಿಂಗಳ ಕಾಲ ರಜೆ ಇದ್ದು, ಮಕ್ಕಳು ಓದಿನ ಜೊತೆಗೆ ಕ್ರೀಯಾಶೀಲತೆ ಮತ್ತು ಸೃಜನಶೀಲತೆಗೆ ಒತ್ತು ನೀಡುವಲ್ಲಿ ಲಟ್ಲ ಪ್ಲವರ್ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು. ಮಕ್ಕಳಿಗೆ ಚಿತ್ರಕಲೆಯ ಮೂಲಕ ಕಲಿಕಾ ಅಭಿವೃದ್ಧಿ ಹೆಚ್ಚಿಸುವುದು ಅತೀ ಮುಖ್ಯವಾಗಿದೆ. ಜೊತೆಗೆ ಆಟದ ಮೂಲಕ ಪಾಠವನ್ನು ಕಲಿಯಲು ಸಲಹೆ, ಮಾರ್ಗದರ್ಶನ ಮಾಡಲಾಗುತ್ತದೆ ಎಂದು ವಿವರಿಸಿದರು. ಲಿಟ್ಲ ಪ್ಲವರ್ ಸಂಸ್ಥೆಯಲ್ಲಿ 7ನೇ ತರಗತಿವರೆಗೆ ನಿರಂತರ ಕಲಿಕೆಯ ಮಕ್ಕಳ ಪ್ರಗತಿಗೆ ಪ್ರೇರೇಪಣೆ ನೀಡಲಾಗುತ್ತಿದೆ ಎಂದು ಸುನಿತಾ ಪ್ರೀತು ತಿಳಿಸಿದರು.ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಅವರು ಮಾತನಾಡಿ ಮಕ್ಕಳ ಜೊತೆ ಬೆರೆಯುವುದು ಹೂವಿನ ಜೊತೆ ಆಟವಾಡಿದಂತಾಗುತ್ತದೆ. ಆದ್ದರಿಂದ ಮಕ್ಕಳ ಕ್ರೀಯಾಶೀಲತೆ…

Read More

ಮಡಿಕೇರಿ NEWS DESK ಏ.3 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 2 ರ 3ನೇ ದಿನದ ಪಂದ್ಯದಲ್ಲಿ ಟೀಮ್ ಲಿವರೇಜ್ ತಂಡ ಗೆಲುವು ಸಾಧಿಸಿತು. ಮಳೆಯ ಕಾರಣದಿಂದ ಒಂದು ಪಂದ್ಯವನ್ನು ಮುಂದೂಡಲಾಯಿತು. ಟೀಮ್ ಲಿವರೇಜ್ ಮತ್ತು ಕೂರ್ಗ್ ಬ್ಲಾಸ್ಟರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೀಮ್ ಲಿವರೇಜ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಭರ್ಜರಿ 171 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 16.4 ಓವರ್ ಗಳಲ್ಲಿ 76 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು ಮತ್ತು ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲು ಅನುಭವಿಸಿತು. ಕೂರ್ಗ್ ಬ್ಲಾಸ್ಟರ್ಸ್ ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ದುಕೊಂಡಿತು. ಟೀಮ್ ಲಿವರೇಜ್ ತಂಡದ ಚೇತನ್ ಚಿಣ್ಣಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಟೀಮ್ ಕೊಡವ ರೈಸಿಂಗ್ ಮತ್ತು ಟೀಮ್ ಎಂಟಿಬಿ ರಾಯಲ್ಸ್…

Read More