ಲೇಖಕ: admin

*ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು… ಬೇವು ಬೆಲ್ಲದಂತೆ ನೋವು ನಲಿವು ಬೆರೆಯಲಿ, ಶಾಂತಿ, ಸಮೃದ್ಧಿ, ಸಂತೋಷದ ಬದುಕು ನಿಮ್ಮದಾಗಲಿ*

Read More

*ಯುಗಾದಿ ಹಬ್ಬ ಸರ್ವರಿಗೂ ಒಳಿತು ಮಾಡಲಿ, ನಾಡು ಸಮೃದ್ಧಿಯಾಗಲಿ, ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು*

Read More

*ಹೊಸ ಭರವಸೆ, ಹೊಸ ಚಿಂತನೆ… ಆತ್ಮ ವಿಶ್ವಾಸದ ಬದುಕು… ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು*

Read More

*ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರ್ಷ ಸರ್ವರಿಗೂ ಹರುಷವನ್ನು ತರಲಿ, ನಾಡಿಗೆ ಒಳಿತಾಗಲಿ (ತೇಲಪಂಡ ಶಿವಕುಮಾರ್ ನಾಣಯ್ಯ, ಪ್ರಧಾನ ಸಂಚಾಲಕರು, ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲಾ ಬಿಜೆಪಿ)*

Read More

ಮಡಿಕೇರಿ ಮಾ.29 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 2 ಕ್ರಿಕೆಟ್ ಪಂದ್ಯಾವಳಿ ಏ.1 ರಿಂದ ಏ.13 ರವರೆಗೆ ಪಾಲಿಬೆಟ್ಟದಲ್ಲಿ ನಡೆಯಲಿದೆ. ಪಾಲಿಬೆಟ್ಟದ ಟಾಟಾ ಕಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.30 ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಟಾಟಾ ಕಾಫಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಮಂದಣ್ಣ, ಕೂರ್ಗ್ ಎಜುಕೇಶನ್ ಫಂಡ್ ನ ಅಧ್ಯಕ್ಷ ಸಿ.ಎ.ಮುತ್ತಣ್ಣ, ಟಾಟಾ ಕಾಫಿ ಲಿಮಿಟೆಡ್ ನ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ.ಜಿ.ರಾಜೀವ್, ಕಾಫಿ ಲಿಮಿಟೆಡ್ ನ ಅರಣ್ಯ ಸಂಪನ್ಮೂಲ ನಿರ್ವಹಣೆಯ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಪೊನ್ನಪ್ಪ, ಕಾಫಿ ಲಿಮಿಟೆಡ್‍ನ ಹೆಚ್‍ಆರ್ ಮತ್ತು ಐಆರ್‍ನ ಉಪ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಮ್ಯಾಥ್ಯು ಉಪಸ್ಥಿತರಿರಲಿದ್ದಾರೆ ಎಂದು ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ಅಧ್ಯಕ್ಷ ಪೊರುಕೊಂಡ ಸುನಿಲ್ ಪಾಲಿಬೆಟ್ಟದಲ್ಲಿ ತಿಳಿಸಿದ್ದಾರೆ. ಕಳೆದ ಬಾರಿ 160 ಆಟಗಾರರು ಪಾಲ್ಗೊಂಡಿದ್ದು, ಈ ಬಾರಿ 175ಕ್ಕೂ ಅಧಿಕ ಕ್ರೀಡಾಪಟುಗಳು ಆಡಲಿದ್ದಾರೆ. ಏ.1 ರಿಂದ…

Read More

ವಿರಾಜಪೇಟೆ ಮಾ.29 NEWS DESK : ನಿರಂತರವಾಗಿ ಬಿ.ಎಸ್‍ಎನ್‍ಎಲ್ ನೆಟ್ವರ್ಕ್ ಇಲ್ಲದೆ ಸಮಸ್ಯೆ ಎದುರಾಗಿದ್ದು, ತಕ್ಷಣವೆ ಸಂಪರ್ಕ ಸಮಸ್ಯೆ ಬಗೆಹರಿಸುವಂತೆ ವಿರಾಜಪೇಟೆ-ಕೆದಮುಳ್ಳೂರು ಗ್ರಾಮದ ನಿವಾಸಿಗಳು ಮನವಿ ಮಾಡಿದ್ದಾರೆ. ವಿರಾಜಪೇಟೆ ಗಾಂಧಿನಗರದ ಬಿ.ಎಸ್‍ಎನ್‍ಎಲ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ನೆಟ್ವರ್ಕ್ ಇಲ್ಲದೆ ಸಾರ್ವಜನಿಕರು ಅನುಭವಿಸುತ್ತಿರವ ಸಮಸ್ಯೆಗಳ ಕುರಿತು ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಕೆದಮುಳ್ಳುರು ಗ್ರಾ.ಪಂಚಾಯಿತಿ ಉಪಾಧ್ಯಕ್ಷ ಪರಮೇಶ್ವರ, ನಮ್ಮ ಗ್ರಾಮದ ಮೂರು ರಸ್ತೆ, ಕೊಟ್ಟಚ್ಚಿ ಎಂಬಲ್ಲಿ ಬಿ.ಎಸ್.ಎನ್.ಎಲ್‍ನ ಎರಡು ಟವರ್‍ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಇದರಿಂದಾಗಿ ಪರೀಕ್ಷೆ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಉಂಟಾಗಿದೆ. ಅಲ್ಲದೆ ವಿರಾಜಪೇಟೆ ನಗರಕ್ಕೆ ಆಗಮಿಸಿದರೆ ಮನೆಯವರ ಸಂಪರ್ಕ ಸಾಧ್ಯವಾಗುತ್ತಿಲ್ಲ, ಆರೋಗ್ಯ ಸಮಸ್ಯೆ ಉಂಟಾದರೆ ವಾಹನಗಳ ವ್ಯವಸ್ಥೆ ಮಾಡಲು ದೂರವಾಣಿ ವ್ಯವಸ್ಥೆ ಇರುವುದಿಲ್ಲ ಇದರಿಂದಾಗಿ ಅನೇಕ ಬಾರಿ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದರೆ ರಾಷ್ಟ್ರಪತಿಗಳಿಗೆ ಇಲಾಖೆಯ ವಿರುದ್ಧ ಪತ್ರ ಬರೆಯಾಗುವುದೆಂದು ತಿಳಿಸಿದರು.…

Read More

  ಸುಂಟಿಕೊಪ್ಪ ಮಾ.29 NEWS DESK : ಕೊಡಂಗಲ್ಲೂರ್ ಶ್ರೀ ಕುರಂಭ (ಭಗವತಿ) ದೇವಾಲಯದ 59ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ, ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಗಣಪತಿ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಪೂಜೆ, ಶ್ರೀ ಮುತ್ತಪ್ಪ ದೇವರ ಬೆಳ್ಳಾಟಂ ಮತ್ತು ಪೈಂಗುತ್ತಿ, ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ಗುಳಿಗನ ಪೂಜೆ, ಶ್ರೀಭದ್ರಕಾಳಿ ದೇವಿಗೆ ಆರ್ಚನೆ, ನೈವೇದ್ಯ ಪೂಜೆ, ತಲಪುರಿ ಮೆರವಣಿಗೆ, ವಸೂರ ಮಾಲೆ ದೇವರ ಬೆಳ್ಳಾಟಂ, ದೇವಿ ದರ್ಶನ ಹಾಗೂ ಮಹಾಮಂಗಳಾರತಿ ನಡೆಯಿತು. ಮರದಿನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆದು ನೆರೆದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಸುಂಟಿಕೊಪ್ಪ, ಶ್ರೀ ದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು ಸೇರಿದಂತೆ ಕೇರಳ ದಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಕೆಸರಿ ಬಂಟಿಗ್ಸ್, ಬಣ್ಣ ಬಣ್ಣದ ಹೂ, ವಿದ್ಯುತ್…

Read More

ಮಡಿಕೇರಿ ಮಾ.29 NEWS DESK : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ 2024-25ನೇ ಸಾಲಿನ ಕಿಂಡರ್ ಗಾರ್ಟನ್ ವಿಭಾಗದ ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚೌರಿರ ರಿಷಿ ಕಾಶ್ಯಾಮ್ಕಿಂಡರ್ ಯುಕೆಜಿ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಮಾತನಾಡಿ, ಶಿಕ್ಷಕರು ಪೋಷಕರು ಮಕ್ಕಳು ಇವರು ಮೂವರು ತ್ರಿಕೋನದಂತೆ ಒಬ್ಬರ ಸಂಬಂಧ ಇನ್ನೊಬ್ಬರೊಂದಿಗೆ ತುಂಬಾ ಗಾಢವಾಗಿರುತ್ತದೆ, ಮಕ್ಕಳ ಲಾಲನೆ ಪಾಲನೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲೆ ಎಂ.ಜಿ.ಸವಿತ, ಪ್ರತಿಯೊಂದು ಮಗುವಿನಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಗಿಡುವಲ್ಲಿ ಶಿಕ್ಷಕರಪಾತ್ರ ಪ್ರಮುಖ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಎನ್.ಎಪೊನ್ನಮ್ಮ ಉಪಸ್ಥಿತರಿದ್ದರು. ಗಾರ್ಟನ್ ವಿಭಾಗದ ಶಿಕ್ಷಕಿ ವಿನ್ಯಾ ಉತ್ತಪ್ಪ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಬಿ.ಎಸ್.ಚಂದ್ರಾವತಿ ವರದಿ ವಾಚಿಸಿದರು. ಮಿಥಿಲ ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಎ.ಎಂ.ಹರ್ಷಿತಾ ವಂದಿಸಿದರು. ಪುಟಾಣಿಗಳು ತಮ್ಮ ಅನಿಸಿಕೆಯಲ್ಲಿ ತಮ್ಮ ಶಿಕ್ಷಕಿಯರನ್ನು ನೆನಪಿಸಿಕೊಂಡರು. ಪುಟಾಣಿಗಳು ನೃತ್ಯದ ಮೂಲಕ ಎಲ್ಲರ ಮನರಂಜಿಸಿದರು. ಪೋಷಕರು…

Read More

ಮಡಿಕೇರಿ ಮಾ.29 NEWS DESK : ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯಿಂದ ಮೂನಾ೯ಡುವಿನಲ್ಲಿ 40 ಸಾವಿರ ರು. ವೆಚ್ಚದಲ್ಲಿ ನಿಮಿ೯ಸಿರುವ ಸೋಲಾರ್ ವಿದ್ಯುತ್ ದೀಪಗಳನ್ನು ರೋಟರಿ ಜಿಲ್ಲಾ ಗವನ೯ರ್ ವಿಕ್ರಂದತ್ತ ಉದ್ಘಾಟಿಸಿದರು.  ಮಡಿಕೇರಿ – ಪಾರಾಣೆ – ನಾಪೋಕ್ಲು ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸೇರುವ ವೃತ್ತದಲ್ಲಿ ಸೋಲಾರ್ ದೀಪವನ್ನು ಸ್ಥಾಪಿಸಲಾಗಿದೆ. ಈ ದೀಪವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ, ಸಹಸ್ರಾರು ಪಾದಾಚಾರಿಗಳಿಗೆ, ವಾಹನ ಚಾಲಕರಿಗೆ ಅನುಕೂಲ ಕಲ್ಪಿಸುವ ಈ ಪ್ರಾಜೆಕ್ಟ್ ಮಾಡಿರುವ ರೋಟರಿ ವುಡ್ಸ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ, ರೋಟರಿಯಿಂದ ಮುಂದೆಯೂ ಇಂತಹ ದೀರ್ಘಕಾಲ ಬಾಳುವ ಯೋಜನೆಗಳತ್ತ ಗಮನ ಹರಿಸುವಂತಾಗಲಿ ಎಂದು ಸಲಹೆ ನೀಡಿದರು. ಗ್ರಾ.ಪಂ ಅಧ್ಯಕ್ಷ ಬಿ.ಎಸ್.ಕುಶನ್ ಮತ್ತು ರೋಟರಿ ಸದಸ್ಯ .ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.  ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್, ಅಸಿಸ್ಟೆಂಟ್ ಗವರ್ನರ್ ದೇವಣಿರ ಕಿರಣ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಮಾಜಿ ಅಸಿಸ್ಟೆಂಟ್ ಗವರ್ನರ್…

Read More

ಮಡಿಕೇರಿ ಮಾ.29 NEWS DESK : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 2024-25ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡಲಾಯಿತು.  ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಎಂ.ಜಿ.ಸವಿತ ಹಾಗೂ ಆಡಳಿತ ಅಧಿಕಾರಿ ಎನ್.ಎ.ಪೊನ್ನಮ್ಮ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ನೆನಪಿನ ಕಾಣಿಕೆಯನ್ನು ವಿತರಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.  ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಅಧಿಕಾರಿ ಎನ್.ಎ.ಪೊನ್ನಮ್ಮ ಪಾಲ್ಗೊಂಡಿದ್ದರು. 9ನೇ ತರಗತಿ ವಿದ್ಯಾರ್ಥಿನಿ ಟಿ.ಪಿ.ನಿಧಿ ಪ್ರಾರ್ಥಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಲಿಷ್ಮಾ ಹಾಗೂ ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ತರುಣ್ ವಂದಸಿದರು.

Read More