


ಸುಂಟಿಕೊಪ್ಪ ಮಾ.29 NEWS DESK : ಕೊಡಂಗಲ್ಲೂರ್ ಶ್ರೀ ಕುರಂಭ (ಭಗವತಿ) ದೇವಾಲಯದ 59ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ, ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಗಣಪತಿ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಪೂಜೆ, ಶ್ರೀ ಮುತ್ತಪ್ಪ ದೇವರ ಬೆಳ್ಳಾಟಂ ಮತ್ತು ಪೈಂಗುತ್ತಿ, ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ಗುಳಿಗನ ಪೂಜೆ, ಶ್ರೀಭದ್ರಕಾಳಿ ದೇವಿಗೆ ಆರ್ಚನೆ, ನೈವೇದ್ಯ ಪೂಜೆ, ತಲಪುರಿ ಮೆರವಣಿಗೆ, ವಸೂರ ಮಾಲೆ ದೇವರ ಬೆಳ್ಳಾಟಂ, ದೇವಿ ದರ್ಶನ ಹಾಗೂ ಮಹಾಮಂಗಳಾರತಿ ನಡೆಯಿತು. ಮರದಿನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆದು ನೆರೆದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಸುಂಟಿಕೊಪ್ಪ, ಶ್ರೀ ದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು ಸೇರಿದಂತೆ ಕೇರಳ ದಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಕೆಸರಿ ಬಂಟಿಗ್ಸ್, ಬಣ್ಣ ಬಣ್ಣದ ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಮುಖ್ಯಸ್ಥರಾದ ಪಿ.ಆರ್. ಶಾಂತ ರಾಮಕೃಷ್ಣ, ಪಿ.ಆರ್.ಸುಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.









