ಮಡಿಕೇರಿ ಫೆ.24 NEWS DESK : ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ನಾಗದೇವರ ನೂತನ ಆಲಯ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರ ತಂತ್ರಿಗಳಾದ ಕೆ.ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಫೆ.22 ರಂದು ಸಂಜೆ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾ ಸಂಕಲ್ಪ, ಮಾತೃಕಾ ಪೂಜೆ, ಋತ್ವಿಗ್ವರಣೆ, ಪ್ರಸಾದ ಪ್ರತಿಗ್ರಹ, ಸ್ಥಾನ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತು ಬಲಿ, ಆಶ್ಲೇಷ ಬಲಿ, ಮಹಾಮಂಗಳಾರತಿ ನೆರವೇರಿತು. ಫೆ.23 ರಂದು ಮುಂಜಾನೆಯಿಂದಲೇ ಗುರುಗಣಪತಿ ಪೂಜೆ, ಗಣಪತಿ ಹೋಮ, ನಾಗದೇವರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಶಾಂತಿಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ಜರುಗಿತು. ನಂತರ ಉಡುಪಿಯ ವೇ.ಬ್ರ.ಶ್ರೀ ಎ.ಸುಬ್ರಮಣ್ಯ ಮಧ್ಯಸ್ಥ ಅವರಿಂದ ನಾಗಪಾತ್ರಿ ನಾಗದರ್ಶನ ಸೇವೆ ನಡೆಯಿತು. ಸಂಜೆ ಆಶೀರ್ವಾದ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು. ದೇವಾಲಯದ ಮ್ಯಾನೇಜಿಂಗ್ ಟ್ರಸ್ಟ್ ನ ಟ್ರಸ್ಟಿಗಳು ಹಾಗೂನಗರದ ವಿವಿಧೆಡೆಯಿಂದ ಭಕ್ತಾಧಿಗಳು…
ಲೇಖಕ: admin
ನಾಪೋಕ್ಲು ಫೆ.24 NEWS DESK : ಭಾಗಮಂಡಲ ಕೋರಂಗಲ ಗ್ರಾಮದ ವಾಜಪೇಯಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರುಗಳು ಸೇರಿ ವಿನೂತನ ರೀತಿಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಚರಿಸಿದರು. ವಾಜಪೇಯಿ ವಸತಿ ಶಾಲೆಯಲ್ಲಿ ಇರುವ ಎಲ್ಲಾ ಗುರುಗಳನ್ನು, ಸಿಬ್ಬಂದಿಗಳಿಗೆ ಗುರುದಕ್ಷಿಣೆಯನ್ನು ನೀಡಿ ತಮ್ಮ ಕೃತಜ್ಞತೆ ಸಲ್ಲಿಸಿದಲ್ಲದೆ ಊಟೋಪಚಾರ ಸಿಹಿ ಹಂಚಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಭ್ರಮಿಸಿದರು. ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಮಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಇಂಥ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಆಯೋಜಿಸುವುದು ಇತರರಿಗೆ ಮಾದರಿ. ಮಾತ್ರವಲ್ಲದೆ ಸ್ಪೂರ್ತಿ ದಾಯಕವಾಗಿದೆ ಎಂದರು. ಅಧ್ಯಕ್ಷತೆಯನ್ನು ಪೋಷಕರಾದ ಮಂಜುಳಾ ಮನೋಜ್ ವಹಿಸಿದ್ದು, ಶಿವ ಪಂಜಿಕೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶೋಭಾ ವಂದಿಸಿದರು, ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್, ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಫೆ.24 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿಗೆ ರೂ.24700 ಮೌಲ್ಯದ ಕ್ರೀಡಾ ಚಟುವಟಿಕೆಗಳ ಕಿಟ್ ವಿತರಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಈ ಹಿಂದಿನಿಂದಲೂ ಕ್ರೀಡೆಗಳಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದ್ದು, ದೇಶೀಯ ಕ್ರೀಡೆಗಳಲ್ಲೂ ಸಾಧನೆ ಮಾಡಿದ್ದಾರೆ. ಇದೆಲ್ಲವನ್ನು ಗುರುತಿಸಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿಗೆ ಕ್ರೀಡಾ ಉಪಕರಣಗಳನ್ನು ನೀಡಲಾಯಿತು. ಕ್ರೀಡಾ ಉಪಕರಣಗಳ ಕಿಟ್ ಪಡೆದುಕೊಂಡ ಕಾಲೇಜಿನ ಪ್ರಾಂಶುಪಾಲ ಫ್ರೊ. ಮೇಜರ್ ಬಿ.ರಾಘವ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘ ಕಾಲೇಜಿಗೆ ಬಹಳಷ್ಟು ಸಹಕಾರ ನೀಡುತ್ತಿದ್ದು, ಕಾಲೇಜಿನ ಕುಂದುಕೊರತೆಗಳಿಗೆ ಸ್ಪಂದನೆ ನೀಡುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಈ ಉಪಕರಣಗಳು ಕ್ರೀಡಾ ಸ್ಪರ್ಧೆಗಳಿಗೆ ಭಾಗವಹಿಸಲು ತರಬೇತಿಗೆ ನೆರವಾಗುತ್ತದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಕ್ರೀಡಾ ಸಾಮಗ್ರಿಗಳ ಕಿಟ್ ಅನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕಾಲೇಜಿನ…
ವಿರಾಜಪೇಟೆ NEWS DESK ಫೆ.23 : ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೈಸೂರಿನ ಸಿ ಎಫ್ ಟಿ ಆರ್ ಐ ನ ವೈದ್ಯರಾದ ಡಾ.ಕಲಾ ಅವರು ಮಕ್ಕಳಿಗೆ ವಿಜ್ಞಾನದ ಮಹತ್ವವನ್ನು ತಿಳಿಸಿದರು. ಶುಚಿತ್ವವನ್ನು ಕಾಪಾಡಬೇಕು, ಸ್ವಚ್ಛತೆಯಿಂದ ಉತ್ತಮ ಪರಿಸರವನ್ನು ನಿರ್ಮಿಸಲು ಸಾಧ್ಯ ಎಂದರು. ಆಹಾರ ಪದ್ದತಿಯ ಬಗ್ಗೆ ಮಾತನಾಡಿ ಸಮತೋಲಿತ ಆಹಾರವು ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ಜಂಕ್ ಫುಡ್ ಗಳಿಂದ ಆದಷ್ಟು ದೂರ ಇರೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ವಿಜ್ಞಾನವು ಇಂದು ಸಮಾಜದ ಹಾಗೂ ರಾಷ್ಟ್ರದ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ವಿಜ್ಞಾನ ಬೆಳೆದಂತೆ ನವ ಪರಿಕಲ್ಪನೆ ಉದ್ಭವಿಸಲು ಸಾಧ್ಯ. ಕೇವಲ ಅಧ್ಯಯನ ವಿಷಯ ಮಾತ್ರವಾಗಿರದೆ ವಿಜ್ಞಾನವು ಬದುಕಿನ ಪಾಠವನ್ನು ನಮಗೆ ಕಲಿಸಿಕೊಡುತ್ತದೆ. ಅದೊಂದು ಜೀವನಶೈಲಿ ಆಗಿದೆ ಎಂದು ಹೇಳಿದರು. ಲಿಟಲ್…
ವಿರಾಜಪೇಟೆ NEWS DESK ಫೆ.23 : ವಿರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ಬಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಶಿಬಿರಾರ್ಥಿಗಳು ಬಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಗ್ರಾಮ ಸ್ವಚ್ಛತಾ ಅಭಿಯಾನ ನಡೆಸಿದರು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಪರಮೇಶ್ ಯುವ ಜನತೆ ದೇಶದ ಶಕ್ತಿ, ಯುವಜನರು ಬದಲಾದರೆ ಸಮಾಜವು ಬದಲಾಗುತ್ತದೆ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನು ಅರಿತು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು. ಹಾಗೆ ಒಣಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಸ್ವಚ್ಛತಾ ಕಾರ್ಮಿಗರಿಗೂ ಸಹಾಯವಾಗುವಂತೆ ನಡೆದುಕೊಳ್ಳಬೇಕು. ಹಸಿ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಪುನರ್ ಬಳಕೆ ಮಾಡುವ ಕೆಲಸ ನಡೆದಾಗ ತ್ಯಾಜ್ಯದ ಪ್ರಮಾಣವೂ ಕಡಿಮೆಯಾಗಿ ನೈರ್ಮಲ್ಯತೆ ಹಾಗೂ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಾದ ಸುಜಾತ ಮಾತನಾಡಿ ನಾವು ದೈಹಿಕ ಸ್ವಚ್ಛತೆಗೆ ಒತ್ತು ನೀಡುವಂತೆ ನಮ್ಮ ಸುತ್ತಮುತ್ತಲಿನ…
ಮಡಿಕೇರಿ NEWS DESK ಫೆ.23 : ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆಯ ತ್ಯಾಗರಾಜ ಕಾಲೋನಿ ಮತ್ತು ಕೊಡ್ಲಿಪೇಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಯೋಗೇಶ್ (25) ಹಾಗೂ ದೊಡ್ಡಕೊಡ್ಲಿ ನಿವಾಸಿ ಮೊಹಮ್ಮದ್ ಅಸ್ಗರ್ (40) ಬಂಧಿತ ಆರೋಪಿಗಳಾಗಿದ್ದು, ಇವರ ಬಳಿಯಿಂದ 240ಗ್ರಾಂ ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಎಎಸ್‌ಪಿ ಡಾ.ಬೆನಕಪ್ರಸಾದ್.ಎನ್.ಜೆ, ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಗಂಗಾಧರಪ್ಪ ಆರ್.ವಿ, ಶನಿವಾರಸಂತೆ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಗೋವಿಂದರಾಜು, ಚಂದ್ರು ಹೆಚ್.ವೈ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.
ಕುಶಾಲನಗರ NEWS DESK ಫೆ.23 : ಕವಿತೆಯನ್ನು ಕೇಳುವ ಸಹೃದಯರ ಕೊರತೆ ಉಂಟಾಗಿರುವುದು ವಿಷಾದನೀಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು. ಬೆಂಗಳೂರಿನ ರಂಗಮಂಡಲ ಹಾಗೂ ಕೊಡಗು ಕವಿ ಬಳಗದ ವತಿಯಿಂದ ಕೂಡ್ಲೂರು ಗ್ರಾಮದ ಪೂರ್ಣಚಂದ್ರ ಕುಟೀರದಲ್ಲಿ ಆಯೋಜಿಸಿದ್ದ ಕೊಡಗು ಕಾವ್ಯಯಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕವಿತೆಗಳು ಜನರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಒಡಮೂಡಿಸುತ್ತವೆ. ಮಾಧ್ಯಮಗಳು ಕಾವ್ಯಗಳನ್ನು ಜನರಿಂದ ದೂರ ಮಾಡುತ್ತಿವೆ ಎಂದು ಹೇಳಿದರು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಕಾವ್ಯ ರಂಗದಲ್ಲಿ ಒಂದಷ್ಟು ಚಟುವಟಿಕೆಗಳು ಕಾಣುತ್ತಿವೆ. ಈ ಮೂಲಕ ನಾಡಿನೆಲ್ಲೆಡೆ ಇರುವ ಚುಟುಕು ಕವಿಗಳ ಸಮಾಗಮ ಹಾಗೂ ಸ್ನೇಹ ಸಂಗಮ ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದಿನ ಆಧುನಿಕ ಕಾಲಘಟ್ಟದ ಬದಲಾದ ಪರಿಸ್ಥಿತಿಯಲ್ಲಿ ಆಧುನಿಕ ಕವಿಗಳು ಆಯಾಯ ಪರಿಸರ ಹಾಗೂ ಸಂದರ್ಭಗಳ ಕುರಿತು ರಚಿಸುವ ಕವನಗಳನ್ನು ವಾಚಿಸುವ ಸಂದರ್ಭ ಪರಂಪರೆಯ ಮರೆವು ಆಗದಂತೆ ಎಚ್ಚರ ವಹಿಸಬೇಕು. ಹೊಸ ಕವಿಗಳು ಹಾಗೂ ಕವಿತೆಗಳನ್ನು ಆಸ್ವಾದಿಸುವ ಕೆಲಸವಾಗಬೇಕು…
ಮಡಿಕೇರಿ NEWS DESK ಫೆ.23 : ಗ್ರಾಮೀಣ ಕ್ರೀಡೆಯಾಗಿ ಖ್ಯಾತಿ ಪಡೆಯುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕಾಯ೯ವಾಗಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ನಗರದ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲೆ 3181 ನಲ್ಲಿ ರೋಟರಿ ಸದಸ್ಯರಿಗಾಗಿ ಮೊದಲ ಬಾರಿಗೆ ಆಯೋಜಿತ ಕಬ್ಬಡಿ ಪಂದ್ಯಾಟ ಉದ್ಠಾಟಿಸಿ ಮಾತನಾಡಿದ ಅವರು, ಇತ್ತೀಚಿನ ವಷ೯ಗಳಲ್ಲಿ ಪ್ರೀಮಿಯರ್ ಲೀಗ್ ಮೂಲಕ ಹೆಸರುವಾಸಿಯಾಗುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿಯೂ ಆಸಕ್ತಿ ಮೂಡಿಸಿ ಪ್ರೋತ್ಸಾಹ ನೀಡುವಂತಾದಲ್ಲಿ ಗ್ರಾಮೀಣ ಕ್ರೀಡೆಯಾದ ಕಬ್ಬಡಿಗೆ ಹೆಚ್ಚಿನ ಬೆಂಬಲ ದೊರಕಿದಂತಾಗುತ್ತದೆ ಎಂದರು. 120 ವಷ೯ಗಳನ್ನು ಜಾಗತಿಕವಾಗಿ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಪೂರೈಸಿರುವ ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಕ್ರೀಡಾಕ್ಷೇತ್ರದಲ್ಲಿಯೂ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು. ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ ಸಭಾ ಕಾಯ೯ಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ಸೇರಿದಂತೆ ವಿವಿಧ…
ಮಡಿಕೇರಿ NEWS DESK ಫೆ.23 : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬ್ಲಾಕ್ ಎಮ್ಮೆಮಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ನೂತನವಾಗಿ ಕಾಂಕ್ರೀಟೀಕರಣಗೊಂಡ ಪರಂಬು ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಇದೇ ಸಂದರ್ಭ ಶಾಸಕರು ದೋಣಿ ಕಡಾವ್ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಎರಡೂ ಕಾಮಗಾರಿಗಳಿಗೆ ಶಾಸಕರ ವಿಶೇಷ ಅನುದಾನದಡಿ ಹಣ ಒದಗಿಸಲಾಗಿದೆ. ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಪ್ರತಿಯೊಂದೂ ಕಾಮಗಾರಿಯನ್ನು ಜನರ ಹಿತದೃಷ್ಟಿಯಿಂದ ಕೈಗೊಳ್ಳಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ಎಲ್ಲರೂ ಸಹಕರಿಸಬೇಕು. ಜನರ ಬೇಡಿಕೆಗಳಿಗೆ ಸ್ಪಂದಿಸಲು ಹೆಚ್ಚು ಉತ್ಸುಕನಾಗಿದ್ದು, ಸರ್ವರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಸ್ಥಳೀಯ ಗ್ರಾಮಸ್ಥರು ಮಾತನಾಡಿ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದೆ. ಕ್ಷೇತ್ರದ್ಯಾಂತ ಅದರಲ್ಲೂ ವಿಶೇಷವಾಗಿ ಈ ಭಾಗದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದು ಸ್ಮರಿಸಿಕೊಂಡರು ಮತ್ತು ಧನ್ಯವಾದ ಅರ್ಪಿಸಿದರು.…
ಸೋಮವಾರಪೇಟೆ NEWS DESK ಫೆ.23 : ಸೋಮವಾರಪೇಟೆಯ ಇಂದಿರಾ ಗಾಂಧಿ ಅಭಿಮಾನಿ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಎಚ್.ಈ.ನಾಗರಾಜು ಅವರ ನೇತೃತ್ವದಲ್ಲಿ ಇಂದು ಪಟ್ಟಣದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇಶದಲ್ಲಿ ಶಾಂತಿ, ಸುಭಿಕ್ಷೆ ನೆಲಸಿ ಜನತೆ ನೆಮ್ಮದಿಯಿಂದ ಬದುಕು ನಡೆಸುವಂತಾಗಲಿ ಎಂಬ ಸಂಕಲ್ಪ ಮಾಡಿ 36ನೇವರ್ಷದ ಪಾದಯಾತ್ರೆ ಆರಂಭಿಸಿದರು. ಸಂಘದ ಸದಸ್ಯರುಗಳಾದ ರವೀಂದ್ರ, ಮುರುಳಿ, ಫಾರೂಕ್, ಸತ್ಯನಾರಾಯಣ, ನರಸಿಂಹ, ರಮೇಶ್ ಹಾಗೂ ಕ್ಯಾಂಟೀನ್ ದೀಪು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.






