ಲೇಖಕ: admin

ಕುಶಾಲನಗರ ಫೆ.22 NEWS DESK : ಕೇಂದ್ರ ಸರ್ಕಾರ ವಕ್ಫ್ ಮಸೂದೆ ತಿದ್ದುಪಡಿ ಮಾಡಿರುವ ನಿರ್ಣಯವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕು ಮುಸ್ಲಿಂ ಒಕ್ಕೂಟದ ಪ್ರಮುಖರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ತಾಲ್ಲೂಕು ಮುಸ್ಲಿಂ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಈ.ಕೆ.ಕರೀಂ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಕಾಯ್ದೆಯನ್ನು ತಕ್ಷಣವೆ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಕೊಡಗು ವಿಶ್ವವಿದ್ಯಾನಿಲಯ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಬಾರದು ಅಥವಾ ಇತರ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ನಿರ್ಧಾರ ಸರ್ಕಾರ ಮಾಡಿದ್ದಲ್ಲಿ ಜಿಲ್ಲೆಯ ಬಡ ಮತ್ತು ಅಲ್ಪಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಅನ್ಯಾಯ ಮಾಡಿದಂತಾಗುತ್ತದೆ. ಕೊಡಗು ವಿವಿಯನ್ನು ಅಳುವಾರದಲ್ಲಿ ಉಳಿಸಿಕೊಂಡು ಅದರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಪ್ರಮುಖರಾದ ಅಬ್ದುಲ್ ರಜಾಕ್, ಆದಮ್, ಇಬ್ರಾಹಿಂ, ಉಸ್ಮಾನ್, ರಿಜ್ವಾನ್, ಶಮಿ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಹನೀಫ್ ಸೇರಿದಂತೆ…

Read More

ಮಡಿಕೇರಿ ಫೆ.22 NEWS DESK : ಪೆರಾಜೆ ಗ್ರಾಮದ ಕನ್ನಡ ಪೆರಾಜೆಯಲ್ಲಿ ಷರೀಫ್ ಮನೆ ಹತ್ತಿರದಿಂದ ಹಾದು ಹೋಗುವ ಮತ್ತು ಶಾಲೆಯ ಹತ್ತಿರದಿಂದ ಅರಮನೆ ಪಾರೆ ಸಂಪರ್ಕಿಸುವ ರಸ್ತೆ ಕಾಮಗಾರಿ ಪೂರ್ಣಗೊಂಡಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಅನುದಾನದಲ್ಲಿ ಡಾಂಬರೀಕರಣ ಕಾಮಗಾರಿ ನಡೆಯಿತು. ಹಲವು ವರ್ಷದಿಂದ ಅಭಿವೃದ್ಧಿ ಕಾಣದೆ ಇದ್ದ ರಸ್ತೆಯ ಕಾಮಗಾರಿಯನ್ನು ಮುತುವರ್ಜಿ ವಹಿಸಿ ಶಾಸಕರು ಅನುದಾನ ಬಿಡುಗಡೆಗೊಳಿಸಿದ್ದಕ್ಕೆ ಹಾಗೂ  ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಲು ಸಹಕರಿಸಿದ ಬ್ಲಾಕ್ ಅಧ್ಯಕ್ಷ  ಕೆ.ಎ. ಇಸ್ಮಾಯಿಲ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ, ವಾರ್ಡ್ ಸದಸ್ಯರಾದ ಸುರೇಶ್ ಪೆರುಮುಂಡ, ಬೂತ್ ಅಧ್ಯಕ್ಷ  ಅಬೂಬಕ್ಕರ್, ವಲಯ ಅಧ್ಯಕ್ಷ ಜಯರಾಮ ಹಾಗೂ ಶಿಹಾಬ್ ಪೆರಾಜೆ ಅವರಿಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.

Read More

ಮಡಿಕೇರಿ ಫೆ.22 NEWS DESK : ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಐಗೂರಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಸೋಮವಾರಪೇಟೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಕ್ಕಳ ಕಾನೂನು ಅರಿವು, ಸಂಚಾರ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಅರಿವು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

Read More

  ನಾಪೋಕ್ಲು ಫೆ.22 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭಕ್ಕೆ ಚಾಲನೆ ದೊರೆಯಿತು. ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಗೆ ತೆರಳಿದ ಮುಸ್ಲಿಂ ಬಾಂಧವರು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು. ಫೆ.28ರ ವರೆಗೆ ಉರೂಸ್ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನದಾನ, ನಡೆಯಲಿದೆ. ಈ ಸಂದರ್ಭ ಕೊಡಗು ಜಿಲ್ಲಾ ನಾಹಿಬ್ ಖಾಝಿ ಅಬುಲ್ಲ ಫೈಝಿ ಎಡಪಾಲ, ಸಯ್ಯಿದ್ ಇಲ್ಯಾಸ್ ತಂಙಳ್, ಹಝೀಝ್ ತಂಙಳ್, ಮಾಜಿ ವಖ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಯಾಕೂಬ್, ಎಮ್ಮೆಮಾಡು ಜಮಾಯತ್ ಮಾಜಿ ಅಧ್ಯಕ್ಷ ಹುಸೈನ್ ಸಖಾಫಿ, ಹಂಸ ಮುಸ್ಲಿಯಾರ್, ಹಸೈನಾರ್ ಹಾಜಿ ಚಂಬರಂಡ ಜಮಾಯತ್ ನ ಪದಾಧಿಕಾರಿಗಳು ಸದಸ್ಯರು ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು. ಇಂದು (ಫೆ.22) ರಂದು ದಿಕ್ರ್ ಹಲ್ಖಾ…

Read More

ನಾಪೋಕ್ಲು ಫೆ.22 NEWS DESK : ಇತಿಹಾಸ ಪ್ರಸಿದ್ಧ ಕೊಳಲಿನ ಹಬ್ಬವೆಂದೇ ಪ್ರಖ್ಯಾತಿ ಪಡೆದಿರುವ  ಅಯ್ಯಂಗೇರಿಯ ಶ್ರೀ ಕೃಷ್ಣ ಚಿನ್ನತಪ್ಪ ದೇವರ ವಾರ್ಷಿಕ ಉತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪ್ರಾರಂಭಗೊಂಡಿತು. ದೇವರ ಮೂಲ ಸ್ಥಾನದಿಂದ ಶ್ರೀ ಕೃಷ್ಣನ ಕೊಳಲುಳನ್ನು ದೇವರ ಪೂಜಾರಿ ತೆಗೆದು ದೇವಾಲಯದ ಪರಿಸರದಲ್ಲಿ ಗಂಟೆ, ಜಾಗಟೆ, ಮೇಳ, ದೇವರ ಘೋಷಗಳೊಂದಿಗೆ ಕೊಳಲನ್ನು ನುಡಿಸುತ್ತಾ ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಹಿಂತಿರುಗಲಾಯಿತು. ಈ ಸಂದರ್ಭ ನೆರೆದ  ಭಕ್ತಾದಿಗಳಿಗೆ ಮಂತ್ರಾಕ್ಷತೆ ಪ್ರಸಾದ ವಿತರಿಸಲಾಯಿತು. ರಾತ್ರಿ ದೇವರ ಹೊಳೆಯಲ್ಲಿ ಧಾರ ಪೂಜೆ, ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿತು.  ಇಂದು (ಫೆ.22) ಪಟ್ಟನಿ ಹಬ್ಬ, ಎತ್ತು ಪೊರಾಟ, ಭಾನುವಾರ ಹರಕೆ ಒಪ್ಪಿಸುವುದು, ಅನ್ನದಾನ ಸೇರಿದಂತೆ ವಿವಿಧ ಪೂಜಾ ಕಾರ್ಯಗಳೊಂದಿಗೆ ವಾರ್ಷಿಕ ಹಬ್ಬ ಸಂಪನ್ನಗೊಳ್ಳಲಿದೆ. ಈ ದೇವತಾ ಕಾರ್ಯವನ್ನು  ಬಿದ್ಧಿಯಂಡ ಮತ್ತು ಚಿಂಗಡ ಕುಟುಂಬಸ್ಥರು ನಿರ್ವಹಿಸುತ್ತಿದ್ದು, ಈ ವರ್ಷ ಬಿದ್ದಿಯಂಡ ಕುಟುಂಬಸ್ಥರಾದ ಹರೀಶ್ ಅವರು ದೇವರನ್ನು ಹೊತ್ತು ದೇವರ ಸೇವೆಗಳನ್ನು ಶ್ರದ್ಧಾ ಭಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಈ…

Read More

ಸೋಮವಾರಪೇಟೆ ಫೆ.22 NEWS DESK : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಮತ್ತು ಕ್ರೀಡಾ ಸಮಿತಿ ವತಿಯಿಂದ ಜಾತ್ರೋತ್ಸವದ ಅಂಗವಾಗಿ ಫೆ.24 ಮತ್ತು 25ರಂದು ಮುಕ್ತ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.25 ರಂದು ಕೊಡಗು ಮತ್ತು ಹಾಸನ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದರು. ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಫೆ.24ರ  ಬೆಳಿಗ್ಗೆ 10 ಗಂಟೆಗೆ ಫುಟ್ಭಾಲ್ ಪ್ರಥಮ 1 ಲಕ್ಷ ರೂ.ಗಳ ನಗದು ದಾನಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‍ಗೌಡ ಉದ್ಘಾಟಿಸಲಿದ್ದಾರೆ. ಬಹುಮಾನ ದಾನಿಗಳಾದ ಕೂಗೂರು ಗ್ರಾಮದ ಕೆ.ಆರ್.ಅನಿಲ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜಯ್ ಜೀವಿಜಯ, ಉದ್ಯಮಿ ಅರುಣ್ ಕೊತ್ನಳ್ಳಿ, ನಾಪಂಡ ಮುತ್ತಪ್ಪ, ಕೋಟೆಯೂರು ಸಂತೋಷ್, ಚನ್ನಾಪುರ ವಾಣಿ ವೀರೇಶ್, ಬೀಟಿಕಟ್ಟೆ ಎಚ್.ಟಿ.ಮಧು, ಚನ್ನಾಪುರ ಪ್ರದೀಪ್‍ಗಾಂಧಿ, ಬೀಟಿಕಟ್ಟೆ ಮೋಹಿತ್, ಕೋಗೇಕೋಡಿ…

Read More

ಸೋಮವಾರಪೇಟೆ ಫೆ.22 NEWS DESK : ಕೃಷಿ ಇಲಾಖೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವತಿಯಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತ ಜಾಗೃತಿ ಜಾಥಾ ನಡೆಯಿತು. ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ನಡೆದ ಜಾಥವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್ ಉದ್ಘಾಟಿಸಿದರು. ಜಲಾನಯನ ರಥದೊಂದಿಗೆ ಗ್ರಾಮದ ಮಹಿಳೆಯರು ಕಳಸಹೊತ್ತು ನಡೆದರು. ಕಲಾ ತಂಡಗಳಿಂದ ಬೀದಿ ನಾಟಕ ನಡೆಯಿತು. ಆರೆಯೂರು ಗ್ರಾಮದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ್ ಉದ್ಘಾಟಿಸಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ಕೊಡುವ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ನೀರು ಇಂಗಿಸಿ ಅಂತರ್‍ಜಲ ಮರುಪೂರ್ಣಗೊಳಿಸಲು ಕಿಂಡಿ ಅಣೆಕಟ್ಟೆ, ಕೃಷಿಹೊಂಡ, ತೊಟ್ಟಿಲುಗುಂಡಿ ನಿರ್ಮಾಣದಂತಹ ಕಾಮಗಾರಿಗಳನ್ನು ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮಳೆ ಆಶ್ರಿತ ತಾಲ್ಲೂಕಿನಲ್ಲಿ ಈ ಂಯೋಜನೆ ಮಹತ್ತರ ಪಾತ್ರ ವಹಿಸುತ್ತದೆ. ಯೋಜನೆಯಡಿ ರೈತರಿಗೆ ಅನೇಕ ಸೌಲಭ್ಯಗಳನ್ನು…

Read More

ಸೋಮವಾರಪೇಟೆ ಫೆ.22 NEWS DESK : ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಾರಂಜಿ ಇಕೋ ಕ್ಲಬ್ ಮತ್ತು ಸಿಇಇಸಿಒ ಸಂಸ್ಥೆ ಸಹಯೋಗದಲ್ಲಿ ಇಂಧನ ಉಳಿತಾಯದ ಬಗ್ಗೆ ಜಾಗೃತಿ ಜಾಥಾ ನಡೆಯಿತು. ಶಿಕ್ಷಣಾಧಿಕಾರಿ ಭಾಗ್ಯಮ್ಮ ಜಾಥಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಇಂಧನ ಮುಗಿದು ಹೋಗುವ ಖನಿಜವಾಗಿದ್ದು, ಅದನ್ನು ಇತಿಮಿತಿಯಲ್ಲಿ ಬಳಸಿದಲ್ಲಿ ಮಾತ್ರ ನಮ್ಮ ಮುಂದಿನ ತಲೆಮಾರಿಗೂ ಉಳಿಸಬಹುದು. ಪರಿಸರಕ್ಕೆ ಪೂರಕವಾದ ಇಂಧನಗಳನ್ನು ಬಳಸಿದಲ್ಲಿ ಹವಾಮಾನಕ್ಕೆ ಹೆಚ್ಚಿನ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಂದ ಜಾಥಾ ನಡೆಯುತ್ತಿದೆ ಎಂದು ಹೇಳಿದರು. ಶಾಲಾ ಆವರಣದಿಂದ ಹೊರಟ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬಿಆರ್‍ಸಿ ಮಂಜೇಶ್, ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಹೇಮಲತಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ, ಸಿಇಇಸಿಒ ಸಂಸ್ಥೆಯ ಹರೀಶ್, ಪ್ರೌಢಶಾಲಾ ಶಿಕ್ಷಕರುಗಳಾದ ಬಿ.ವಿಜಯಕುಮಾರ್, ಶಶಿಧರ್, ಧನ್ಯ, ರಾಜರತ್ನ, ಬಸವರಾಜು, ವೆಂಕಟೇಶ್ ಆರಕ್ಷಕ ಸಿಬ್ಬಂದಿಗಳು ಇದ್ದರು.

Read More

ಕುಶಾಲನಗರ ಫೆ.22 NEWS DESK : ಕೊಡಗು ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸುವ ಅಥವಾ ಇತರ ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸುವ ಸರ್ಕಾರದ ಚಿಂತನೆಯನ್ನು ಕುಶಾಲನಗರ ಗೌಡ ಸಮಾಜ ಹಾಗೂ ಕುಶಾಲನಗರ ಗೌಡ ಯುವಕ ಸಂಘ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಕುಶಾಲನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲ‌ನ ಗಣಿಪ್ರಸಾದ್ ಹಾಗೂ ಗೌಡ ಒಕ್ಕೂಟದ ಖಜಾಂಚಿ ಆನಂದ್ ಕರಂದ್ಲಾಜೆ, 1908 ರಲ್ಲಿಯೇ ವಿದ್ಯೆಗೆ ಹೆಚ್ಚಿನ ಒತ್ತು ಕೊಟ್ಟು ಅಂದಿನ ದಿವ್ಯ ಚೇತನರಾದ ಕುಂಬುಗೌಡನ ಕುಶಾಲಪ್ಪ ಗೌಡ, ನ್ಯಾಯಾಧೀಶರಾದ ನಿಡ್ಯಮಲೆ ಮುದ್ದಪ್ಪ ಹಾಗೂ ಇನ್ನೂ ಹಲವು ಮಹನೀಯರ ದೂರದೃಷ್ಟಿಯಿಂದ ಕೇವಲ ಮಡಿಕೇರಿಯಲ್ಲಿ ಮಾತ್ರ ಇದ್ದ ಪದವಿ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾಲದಲ್ಲಿ ಬಡ ಮಕ್ಕಳು ವಿದ್ಯೆ ಕಲಿಯಲು ಕಷ್ಟ ಇದ್ದ ಸಮಯದಲ್ಲಿ ವಿದ್ಯೆಯೇ ಅಭಿವೃದ್ಧಿಗೆ ಮೂಲ ಮಂತ್ರವೆಂಬುದನ್ನು ಮನಗಂಡು ಕೊಡಗು ಗೌಡ ವಿದ್ಯಾಸಂಘ ಸ್ಥಾಪಿಸಿ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟು ಹಲವು ವಿದ್ಯಾರ್ಥಿಗಳು ಹೊರಬಂದು ಉನ್ನತ ಹುದ್ದೆಗೆ ಸೇರಲು…

Read More

ಮಡಿಕೇರಿ ಫೆ.22 NEWS DESK :  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 24 ರಂದು ಬೆಳಗ್ಗೆ 10.30 ರಿಂದ ಅಪರಾಹ್ನ 3 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ‘ಉದ್ಯೋಗ ಮೇಳ’ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಮಡಿಕೇರಿ ತಾಜ್ ರೆಸಾರ್ಟ್, ವಿರಾಜಪೇಟೆ ತಾಮರ ರೆಸಾರ್ಟ್, ಮಡಿಕೇರಿ ಕಲ್ಯಾಣಿ ಮೋಟಾರ್ಸ್, ಪ್ಯಾಲೇಸ್ ಟೊಯೋಟಾ ಕಾರ್ ಶೋ ರೂಮ್ ಕುಶಾಲನಗರ, ಪೆಂಟಾಟೆಕ್ ಮತ್ತು ಕ್ಲಬ್ ಮಹೀಂದ್ರ ರೆಸಾರ್ಟ್ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗ ಮೇಳಕ್ಕೆ ಹಾಜರಾಗುವಂತೆ…

Read More