ಲೇಖಕ: admin

ನಾಪೋಕ್ಲು ಫೆ.17 NEWS DESK : ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆ ರಹಿತ ಕಟಾ ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ಕೊಡಗಿನ ಶಝಾ ಫಾತಿಮಾಳನ್ನು ಗ್ರಾಮಸ್ಥರು ಸನ್ಮಾನಿಸಿದರು. ಮಡಿಕೇರಿ ತಾಲೂಕಿನ ಬೇತು ಗ್ರಾಮದಲ್ಲಿ ನಾಪೋಕ್ಲು ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಲಾದ ಭಾವಪೂರ್ಣ ಕಾರ್ಯಕ್ರಮದಲ್ಲಿ ಜಮಾಯತ್ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರೆಹಮಾನ್ ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನ ಬರಕಾ ಇಂಟನ್ರ್ಯಾಷನಲ್ ಸ್ಕೂಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಏಳನೇ ತರಗತಿ ವಿದ್ಯಾರ್ಥಿನಿ ಶಝಾ ಫಾತಿಮಾ ತಮಿಳುನಾಡಿನ ಚೆನ್ನೈನಲ್ಲಿ ಇತ್ತೀಚೆಗೆ ಜರುಗಿದ ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆರಹಿತ ಕಟಾ ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಜೊತೆಗೆ ಕುಮಿಟೆ ವೈಯುಕ್ತಿಕ ವಿಭಾಗದಲ್ಲೂ ಚಿನ್ನದ ಪದಕಕ್ಕೆ ಪಡೆದುಕೊಂಡಿದ್ದಾಳೆ. ಶಝಾ ಫಾತಿಮಾ ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಕಾಸಿಂ (ಬಹದ್ದೂರ್) ಮತ್ತು ಸೌಸ್ರೀನ್ ದಂಪತಿಯ ಪುತ್ರಿ. ಇವಳು ಝಕಿಯಾ ಯಾಸ್ಮಿನ್ ಮತ್ತು ನದೀಮ್ ರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಕಾರ್ಯಕ್ರಮದಲ್ಲಿ…

Read More

ಮಡಿಕೇರಿ ಫೆ.17 NEWS DESK :  ಚಿಲ್ ಬಾಯ್ಸ್ ಮಡಿಕೇರಿ ಹಾಗೂ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಇವರ ಆಶ್ರಯದಲ್ಲಿ, ಕಳೆದ ಒಂದು ವಾರಗಳಿಂದ ಮಡಿಕೇರಿ ನಗರದ ಕೆ.ಎಸ್ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 20ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರ ತಾಜ್ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ. ರನ್ನರ್ಸ್ ಪ್ರಶಸ್ತಿಯನ್ನು ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ತಾಜ್ ಕುಶಾಲನಗರ ತಂಡವು ನಿಗದಿತ ಆರು ಓವರ್ ಗಳಲ್ಲಿ 49 ರನ್ ಗಳಿಸಿತು. 50 ರನ್ ಗಳ ಗುರಿ ಬೆನ್ನಟ್ಟಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದರು ಕೂಡ,ಫ್ರೀಡಮ್ ಬಾಯ್ಸ್ ಹುಂಡಿ 40 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ತಾಜ್ ಕುಶಾಲನಗರ ತಂಡವು 09 ರನ್ ಗಳ ಅಂತರದಿಂದ ಗೆಲುವು ಸಾಧಿಸಿ, 20ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು.…

Read More

ಮಡಿಕೇರಿ ಫೆ.17 NEWS DESK : ಮಹಾನ್ ಮಾನವತಾವಾದಿ ಸಂತ ಸೇವಾಲಾಲ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ವೆಂಕಟ ನಾಯಕ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ  ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಲೆಮಾರಿ ಜನ ಸಮುದಾಯದ ಬಂಜಾರ, ಲಂಬಾಣಿ, ಲಮಾಣಿ, ಸುಗಾಲಿ, ಸುಕಾಲಿ ಗೋರ್, ಸೋನಾರ್, ಲೋಹಾರ್, ಬಾಜೀಗರ್ ಮತ್ತಿತರ ಅನೇಕ ಉಪನಾಮಗಳಿಂದ ಗುರುತಿಸಲ್ಪಡುವ ಬಂಜಾರರು ಮೂಲತಃ ದಿನಸಿ ಮತ್ತು ಲವಣದ ವ್ಯಾಪಾರಿಯಾಗಿದ್ದರು ಎಂದು ಅವರು ವೆಂಕಟ್ ನಾಯಕ್ ಅವರು ವಿವರಿಸಿದರು. ಲಂಬಾಣಿ, ಬಂಜಾರ ಸಮಾಜ ಬಗ್ಗೆ ಮಹಾಭಾರತದಲ್ಲಿಯೇ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ ಎಂದು ತಿಳಿಸಿದರು. ಸಂತ ಸೇವಾಲಾಲ್ ಅವರು 1739 ಫೆಬ್ರವರಿ 15 ರಂದು ಸೂರಗೊಂಡನ ಕೊಪ್ಪದಲ್ಲಿ ಜನಿಸಿದರೆಂದು ಹೇಳಲಾಗುತ್ತದೆ.…

Read More

ಮಡಿಕೇರಿ NEWS DESK ಫೆ.16 : ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅತ್ಯಧಿಕ ಅನುದಾನವನ್ನು ನೀಡುವ ಮೂಲಕ ಜನಪರ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಎಂದು ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಾಸಕರ ವಿಶೇಷ ಅನುದಾನದಲ್ಲಿ ಇತ್ತೀಚೆಗೆ ಸುಮಾರು 3 ಕೋಟಿ ರೂ.ಗಳನ್ನು ಮೀಸಲಿಟ್ಟ ಶಾಸಕರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದು ಅಭಿನಂದನಾರ್ಹ ಕಾರ್ಯವಾಗಿದೆ. ಈ ಹಿಂದೆ ಇದ್ದ ಶಾಸಕರ ಅವಧಿಯಲ್ಲಿ ಶಾಸಕರ ಅನುದಾದಿಂದ ಇಷ್ಟು ದೊಡ್ಡ ಮೊತ್ತದ ಹಣ ನಗರದ ಅಭಿವೃದ್ಧಿಗೆ ದೊರೆತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಶಾಸಕ ಡಾ.ಮಂತರ್ ಗೌಡ ಅವರು ನಗರದ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದ್ದಾರೆ. ನಗರದ ಬಹುತೇಕ ಎಲ್ಲಾ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದಾರೆ. ಏಪ್ರಿಲ್ ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯನ್ನು ಕೂಡ ನೀಡಿದ್ದಾರೆ. ಈಗಾಗಲೇ…

Read More

ಸುಂಟಿಕೊಪ್ಪ NEWS DESK ಫೆ.16: ಇಂದಿನ ಹದಿಹರೆಯದ ಮಕ್ಕಳು ದುಶ್ಚಟಗಳ ದಾಸರಾಗದೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯವನ್ನು ಹೊಂದಿ ದೇಶದ ಅಸ್ತಿಯಾಗಬೇಕೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಚ್.ವಿ.ರಮೇಶ್ ಕರೆ ನೀಡಿದ್ದಾರೆ. 7ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮದ್ಯ, ಗುಟ್ಕಾ,  ಮಾದಕ ವಸ್ತುಗಳ ಸೇವನೆಯಿಂದ ಯುವಕ ಯುವತಿಯರು ಹಾಳಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಸಂಸ್ಕಾರವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯರಾದ‌ ಎಂ.ಎನ್.ಚಂದ್ರಮೋಹನ್ ಅವರು ಸ್ವಾಸ್ಥ್ಯ ಸಂಕಲ್ಪ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಯೋಜನೆಯ ಜ್ಞಾನ ದೀಪ ಕಾರ್ಯಕ್ರಮದ ಅಡಿಯಲ್ಲಿ ಶೇ.80ರ ರಿಯಾಯಿತಿ ದರದಲ್ಲಿ ನೀಡಲಾದ ಬೆಂಚ್ ಡೆಸ್ಕ್ ಗಳ ಮಂಜೂರಾತಿ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ದಿ ಅಧ್ಯಕ್ಷರಿಗೆ ನೀಡಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ…

Read More

ಮಡಿಕೇರಿ NEWS DESK ಫೆ.16 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತುರ್ತು ಔಷಧೀಯ ವಿಭಾಗದ ಪ್ರಾಧ್ಯಾಪಕರಾಗಿ ಕರ್ನಾಟಕ ಸರಕಾರದಿಂದ ನೇಮಕಗೊಂಡಿರುವ ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ನ ಗೌರವ ಅಧ್ಯಕ್ಷರು ಹಾಗೂ ಸಲಹೆಗಾರರಾಗಿರುವ ಮಡಿಕೇರಿಯ ಖ್ಯಾತ ಇ.ಎನ್.ಟಿ ವೈದ್ಯ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಅವರನ್ನು ಬಳಗದ ಪದಾಧಿಕಾರಿಗಳು ಸನ್ಮಾನಿಸಿ, ಅಭಿನಂದಿಸಿ ಗೌರವಿಸಿದರು. ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮೋಹನ್ ಅಪ್ಪಾಜಿ ಅವರು ಮುಂದಿನ ದಿನಗಳಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿಸುವ ಗುರಿ ಹೊಂದಿದ್ದು, ಇದಕ್ಕೆ ಸರ್ವರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಉಪಾಧ್ಯಕ್ಷರಾದ ಕೋಲೆಯಂಡ ನಿಶಾ ಮೋಹನ್, ಕಾರ್ಯದರ್ಶಿ ಕೇಚಂಡ ಸುನೀತಾ ಗಣೇಶ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಟ್ರಸ್ಟಿ ಕೆ.ಎಂ.ಬಿ ಗಣೇಶ್, ಈರಮಂಡ ವಿಜಯ್ ಉತ್ತಯ್ಯ, ಬಳಗದ ಸದಸ್ಯರಾದ ಮಂಜುಳಾ ಶಿವಕುಮಾರ್,…

Read More

ಮಡಿಕೇರಿ NEWS DESK ಫೆ.16 : ವಾಹನ, ಚಿನ್ನಾಭರಣ ಮತ್ತಿತರ ವಸ್ತುಗಳ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕಕ್ಕಬ್ಬೆ ನಾಲಡಿ ಗ್ರಾಮದ ಕೆ.ಸಿ.ಅಶೋಕ(35), ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿ ನಿವಾಸಿ ಕೆ.ಪಿ.ಕೀರ್ತಿ(25) ಹಾಗೂ ಸೋಮವಾರಪೇಟೆಯ ರೇಂಜರ್ ಬ್ಲಾಕ್ ನ ರಿಯಾಜ್ ಸಾಬು(26) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಬಳಿಯಿಂದ ಕಳ್ಳತನ ಮಾಡಿದ ಸಿಸಿಟಿವಿ ಡಿವಿಆರ್, ಖಜಾನೆ ಬಾಕ್ಸ್, ರೂ.930 ಮೌಲ್ಯದ ಸ್ಟಾಂಪ್ ಗಳು, ಒಂದು ಮಾರುತಿ ಓಮ್ನಿ, ಎರಡು ದ್ವಿಚಕ್ರ ವಾಹನಗಳು, ಒಂದು ಮರ ಕುಯ್ಯುವ ಯಂತ್ರ, ಒಂದು ಏರ್ ಗನ್, 200 ಕೆ.ಜಿ ಕಾಫಿ, 250 ಕೆ.ಜಿ ಕಾಳು ಮೆಣಸು, 30 ಗ್ರಾಂ ಚಿನ್ನ ಮತ್ತು 229 ಗ್ರಾಂ ಬೆಳ್ಳಿಯನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ::: ಪ್ರಕರಣಗಳು ::: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024 ನವೆಂಬರ್ 30 ರಂದು ಬಿಟ್ಟಂಗಾಲ…

Read More

ಮಡಿಕೇರಿ NEWS DESK ಫೆ.16 : ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ಮಹಿಳಾ ಆರೋಗ್ಯ ಶಿಬಿರ”ವನ್ನು ಆಯೋಜಿಸಲಾಗಿತ್ತು. ನಗರದ ಹರಿಹರ ಸರ್ವಿಸ್ ಸ್ಟೇಷನ್ ನ ಆವರಣದಲ್ಲಿ ನಡೆದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಹಿಂದೂ ಮಲಯಾಳಿ ಸಂಘದ ಗೌರವ ಸಲಹೆಗಾರ ಟಿ.ಆರ್.ವಾಸುದೇವ್, ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಆರೋಗ್ಯದ ಮೇಲೆ ಕಾಳಜಿ ಇಟ್ಟು ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ರೀತಿಯ ಉಪಯುಕ್ತ ಶಿಬಿರಗಳು ಮತ್ತು ಸಮಾಜಮುಖಿ ಕಾರ್ಯಗಳು ಇನ್ನು ಮುಂದೆಯೂ ನಡೆಯಲಿ ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಮಮತಾ ಎಸ್. ಅವರು ಮಾತನಾಡಿ ಮಹಿಳೆಯರ ಆರೋಗ್ಯ ಸಮಸ್ಯೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಡಾ.ಮಂದಿರಾ ಹಾಗೂ ಡಾ.ಸಿಲಾನ ಶಿಬಿರದಲ್ಲಿ ಭಾಗಿಯಾಗಿದ್ದರು. ಹಿಂದೂ ಮಲಯಾಳಿ…

Read More

ಮಡಿಕೇರಿ NEWS DESK ಫೆ.16 : ಕೊಡಗು ಜಿಲ್ಲಾ ವ್ಯಾಪ್ತಿಯ ವಿವಾಹ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ಒಂದು ದಿನದ ಸನ್ನದು ಪಡೆಯಬೇಕು ಎಂದು ಅಬಕಾರಿ ಇಲಾಖೆ ಹೊರಡಿಸಿರುವ ಹೊಸ ಆದೇಶಕ್ಕೆ ವಿರಾಜಪೇಟೆ ಬಿಜೆಪಿ ಮಂಡಲ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ಹೊಸ ಹೊಸ ಆದೇಶಗಳ ಮೂಲಕ ಕೊಡಗಿನ ಸಂಪ್ರದಾಯಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ವಿವಾಹ ಸಮಾರಂಭಗಳು ನಡೆದಿದೆ. ಸಂಪ್ರದಾಯದಂತೆ ಎಲ್ಲೂ ಎಲ್ಲೆ ಮೀರದೆ, ಅಪರಾಧಗಳಿಗೆ ಅವಕಾಶ ನೀಡದೆ ಮತ್ತು ಸಾರ್ವಜನಿಕವಾಗಿ ಅಶಾಂತಿ ಮೂಡಿಸದೆ ಶಿಸ್ತುಬದ್ಧವಾಗಿ ಮದ್ಯವನ್ನು ಬಳಸಲಾಗಿದೆ. ಆದರೆ ಇದೀಗ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದೆ ಎಂಬ ನೆಪವೊಡ್ಡಿ ಸನ್ನದು ಪಡೆಯಬೇಕೆನ್ನುವ ನಿಯಮ ಜಾರಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ವಿವಾಹ ಸಮಾರಂಭದಲ್ಲಿ…

Read More

ಮಡಿಕೇರಿ NEWS DESK ಫೆ.16 : ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು, ಮೊಬೈಲ್ ಕಳ್ಳತನ ಹಾಗೂ ನಕಲಿ ಸಿಮ್ ಕಾರ್ಡ್ ಗಳ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ  ಮೊಬೈಲ್ ಅಂಗಡಿಯ ಮಾಲೀಕರಿಗೆ ಹಾಗೂ ಸಿಮ್ ಕಾರ್ಡ್ ವಿತರಕರಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಮ್ ಕಾರ್ಡ್ ವಿತರಣೆ ಹಾಗೂ ಹಳೆಯ ಮೊಬೈಲ್ ಗಳ ಮಾರಾಟ ಹಾಗೂ ಖರೀದಿ ಸಂದರ್ಭದಲ್ಲಿ ನೋಂದಣಿ ಪುಸ್ತಕ ನಿರ್ವಹಣೆ, ಸಂಪೂರ್ಣ ವಿಳಾಸ ಪಡೆದುಕೊಳ್ಳುವುದು, ಗುರುತಿನ ಚೀಟಿ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳುವುದು ಹೀಗೆ ಹಲವು ಅಂಶಗಳ ಬಗ್ಗೆ ಕೊಡಗು ಸಿಇಎನ್ ಠಾಣೆಯ ಡಿಎಸ್ಪಿ ರವಿ ಅವರು ಮಾಹಿತಿ ನೀಡಿದರು.

Read More