ಮಡಿಕೇರಿ ಏ.3 NEWS DESK : ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ-2024ನ್ನು ವಿರೋಧಿಸಿ ಮುಸ್ಲಿಂ ಜಮಾತ್ ಗಳ ಒಕ್ಕೂಟ ಮಡಿಕೇರಿಯಲ್ಲಿ ಸಭೆ ನಡೆಸಿತು. ಮುಂದಿನ ದಿನಗಳಲ್ಲಿ ಒಕ್ಕೂಟ ನಡೆಸುವ ಹೋರಾಟದ ಕುರಿತು ಪ್ರಮುಖರು ಚರ್ಚಿಸಿದರು. ವಕ್ಫ್ ವಿಚಾರವಾಗಿ ದೇಶವ್ಯಾಪಿ ನಡೆಯುವ ಸಂಯುಕ್ತ ಹೋರಾಟಕ್ಕೆ ಪೂರ್ಣ ಬೆಂಬಲವನ್ನು ನೀಡಲು ಸಭೆ ನಿರ್ಧರಿಸಿತು. ಮುಸ್ಲಿಂ ಜಮಾತ್ ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಮಿನ್ ಮೊಹಿಸಿನ್ ಮಾತನಾಡಿ ಪ್ರಥಮ ಹಂತದಲ್ಲಿ ಶುಕ್ರವಾರ ಪ್ರಾರ್ಥನೆಯ ನಂತರ ಎಲ್ಲಾ ಮುಸ್ಲಿಂ ಬಾಂಧವರು ತೋಳಿಗೆ ಕಪ್ಪುಪಟ್ಟಿ ಧರಿಸಿ ರಾತ್ರಿ 9 ಗಂಟೆಯವರೆಗೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೋರಾಟದಲ್ಲಿ ಬಾಗಿದಾರರಾಗಬೇಕು ಎಂಬ ಕರೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲೂ ಇತರ ಸಂಘ ಸಂಸ್ಥೆಯೊಂದಿಗೆ ಸೇರಿಕೊಂಡು ಬೃಹತ್ ಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಒಕ್ಕೂಟದ ಅಧ್ಯಕ್ಷ ನಜೀರ್, ಉಪಾಧ್ಯಕ್ಷ ಮುಕ್ತಾರ್, ಕಾರ್ಯದರ್ಶಿ ಇಮ್ರಾನ್, ಖಜಾಂಚಿ ಇಸ್ಮಾಯಿಲ್, 10 ಮಸೀದಿಗಳ ಅಧ್ಯಕ್ಷರು, ಧಾರ್ಮಿಕ ಪಂಡಿತರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ…
ಲೇಖಕ: admin
ಮೈದಾನ 1 : : ಕುಂದಿರ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೊನ್ನಿಮಾಡ ತಂಡ ಗೆಲುವು ದಾಖಲಿಸಿತು. ಪೊನ್ನಿಮಾಡ ಪರ ಸಂತೋಷ್ ಪೂವಯ್ಯ ಹಾಗೂ ನಾಚಪ್ಪ ತಲಾ 1 ಗೋಲು ದಾಖಲಿಸಿದರು. ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಟ್ಟಂಗಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಕುಟ್ಟಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಕುಟ್ಟಂಡ ತಂಡದ ರಜೀನ ಬಿದ್ದಪ್ಪ 2 ಹಾಗೂ ಸಂದೀಪ್ ಬಿದ್ದಪ್ಪ 1 ಗೋಲು ದಾಖಲಿಸಿದರು. ಸುರೇಂದ್ರ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಲೆಂಗಡ ಮತ್ತು ಕನ್ನಂಬಿರ ನಡುವಿ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕನ್ನಂಬಿರ ಜಯ ಸಾಧಿಸಿತು. ಕನ್ನಂಬಿರ ತಂಡದ ಪವನ್ ಪೂವಯ್ಯ, ಬಿಶನ್ ಬೋಪಣ್ಣ ಹಾಗೂ ರೋಹನ್ ಕುಟ್ಟಪ್ಪ ತಲಾ 1 ಗೋಲು ದಾಖಲಿಸಿದರು. ಪಾಲೆಂಗಡ ತಂಡದ ಪರ ಸುನೀಲ್ ಚಂಗಪ್ಪ 1 ಗೋಲು ಬಾರಿಸಿದರು. ಪಾಲೆಂಗಡ ಬೋಪಣ್ಣ ಪ್ಲೇಯರ್ ಆಫ್…
ಮಡಿಕೇರಿ ಏ.3 NEWS DESK : ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಲಾದ ನವನೀತಿಯಂತೆ ಕೊಡಗಿನಲ್ಲಿಯೂ ವಿವಿಧ ಅಭಿವೖದ್ದಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಪರಿಸರ ಸ್ಮೇಹಿ ಪ್ರವಾಸೋದ್ಯಮದ ಜತೆಯಲ್ಲಿಯೇ ಜವಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿದೇ೯ಶಕಿ ಅನಿತಾ ಭಾಸ್ಕರ್ ಹೇಳಿದ್ದಾರೆ. ನಗರದ ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ಕೊಡಗು ಪತ್ರಕತ೯ರ ಸಂಘ (ರಿ) ವತಿಯಿಂದ ಆಯೋಜಿಸಲಾದ ಸಂವಾದ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಅವರು ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. 2023 ರಲ್ಲಿ ಕೊಡಗು ಜಿಲ್ಲೆಗೆ 43.69 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 2024 ರಲ್ಲಿ45.72 ಲಕ್ಷ ಕೊ ಕೊಡಗಿನ ಪ್ರವಾಸೋದ್ಯಮದ ಪಾಲಿಗೆ ಸ್ವಣ೯ಯುಗ ಎಂಬಂತೆ ದಾಖಲೆಯ 24 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರ ಮೆಚ್ಚಿನ ತಾಣವಾಗಿಯೇ ಮುಂದುವರೆದಿದ್ದು ಈ ನಿಟ್ಟಿನಲ್ಲಿ ಮತ್ತಷ್ಟು ಹೊಣೆಯರಿತ ಪ್ರವಾಸೋದ್ಯಮದ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ 2029 ರವರೆಗೆ ಜಾರಿಯಲ್ಲಿಟ್ಟಿರುವ ನವ ನೀತಿಯಂತೆ ಜಾರಿಗೊಳಿಸಲಾಗುತ್ತದೆ ಎಂದು ಅನಿತಾ ಭಾಸ್ಕರ್…
ಮಡಿಕೇರಿ ಏ.3 NEWS DESK : ಯುಗಾದಿ ಹಬ್ಬದ ಪ್ರಯುಕ್ತ ಕಾನಡ್ಕ ಕುಟುಂಬಸ್ಥರ ಆಶ್ರಯದಲ್ಲಿ 11ನೇ ವರ್ಷದ ಆಟೋಟ ಸ್ಪರ್ಧೆಯು ಮರಗೋಡಿನ ಕುಟುಂಬದ ಐನ್ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮರಗೋಡು ಗೌಡ ಫುಟ್‍ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್ ಉದ್ಘಾಟಿಸಿ, ಮಾತನಾಡಿ ಯುಗಾದಿ ಹಬ್ಬದ ಪ್ರಯುಕ್ತ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ. ಕ್ರೀಡೆ ಎಲ್ಲರನ್ನು ಒಗ್ಗೂಡಿಸುವುದಲ್ಲದೆ ಕುಟುಂಬದಲ್ಲಿ ಶಾಂತಿ, ಸಹಬಾಳ್ವೆ ಮೂಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಶಿಕ್ಷಕಿ ಅಂಚೆಮನೆ ದಮಯಂತಿ ದಿನೇಶ್ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಬೇಕೆಂದರು. ಕುಟುಂಬದ ಹಿರಿಯರಾದ ಕಾನಡ್ಕ ಉಲ್ಲಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಕಾನಡ್ಕ ನಾಣಯ್ಯ ಉಪಸ್ಥಿತರಿದ್ದರು. ಕಾನಡ್ಕ ರಾಜೇಶ್ವರಿ ಹಾಗೂ ತಂಡ ಪ್ರಾರ್ಥಿಸಿ, ಕಾನಡ್ಕ ಪುನೀತ್ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು. ::: ವಿವಿಧ ಕ್ರೀಡೆ :::…
ಸೋಮವಾರಪೇಟೆ ಏ.3 NEWS DESK : ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಮತ್ತು ಅಡ್ವೆಂಚರ್ ಡಾನ್ಸ್ ಸಂಸ್ಥೆಯ ಸಹಯೋಗದಲ್ಲಿ ಮೇಘನಾ ಡ್ರೈವಿಂಗ್ ಶಾಲಾ ಸಭಾಂಗಣದಲ್ಲಿ ನಡೆಯುವ ಒಂದು ತಿಂಗಳ ಬೇಸಿಗೆ ಶಿಬಿರಕ್ಕೆ ಜೇಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬೇಸಿಗೆ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ನೀಡುವುದರಿಂದ, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬಹುದಾಗಿದೆ. ನುರಿತ ಶಿಕ್ಷಕರಿಂದ ಕ್ರಾಪ್ಟ್, ಯೋಗ, ಕರಾಟೆ, ಚಿತ್ರಕಲೆ, ಗ್ಲಾಸ್ ಆರ್ಟ್ ಸೇರಿದಂತೆ ಹಲವಾರು ತರಗತಿಗಳು ನಡೆಯಲಿದೆ. ಶಿಬಿರದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೂನಿಯರ್ ಜೇಸಿ ಅಧ್ಯಕ್ಷೆ ದಿಶಾ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಡ್ವೆಂಚರ್ ಡ್ಯಾನ್ಸ್ ಸಂಸ್ಥೆಯ ಚೇತನ್ ರವಿ, ವಲಯ ನಿರ್ದೇಶಕಿ ಮಾಯಾ ಗಿರೀಶ್ ಇದ್ದರು.
ಪುತ್ತೂರು ಏ.4 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಬೆಂಗಳೂರಿನ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ಇಂಟರ್ಯಾಕ್ಟ್-2025 ಸ್ಪರ್ಧೆಯಲ್ಲಿ ಕಾಲೇಜಿನ ಭೂಮಿಕಾ ಕಲಾ ಸಂಘ ತಂಡವು ತನ್ನ ಅಪೂರ್ವ ಪ್ರತಿಭೆಯನ್ನು ಪ್ರದರ್ಶಿಸಿ ವಿಶೇಷ ಸಾಧನೆಯನ್ನು ಮಾಡಿದೆ. ಸುಮಾರು 100ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಕಲಾ ತಂಡಗಳು ಭಾಗವಹಿಸಿದ್ದು, ಕಾಲೇಜಿನಿಂದ 34 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವ್ಯಂಗ್ಯಚಿತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮನ್ನಿತ್ ಗೌಡ ಇವರು ಚಿನ್ನದ ಪದಕ, ಸ್ವರ ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ತನ್ಮಯಿ ಉಪ್ಪಂಗಳ ಇವರು ಚಿನ್ನದ ಪದಕ ಹಾಗೂ ಶಾಸ್ತ್ರೀಯ ಸಂಗೀತ ಹಾಡುಗಾರಿಕಾ ವಿಭಾಗದಲ್ಲಿ ದ್ವಿತೀಯ ವರ್ಷದ ಎಐಎಂಎಲ್ ವಿಭಾಗದ ಕಾರ್ತಿಕ ಶ್ಯಾಮ ಇವರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.…
ಮಡಿಕೇರಿ ಏ.3 NEWS DESK : ಕಳೆದ ಎರಡು ಮೂರು ವರ್ಷಗಳಿಂದ ಜನರ ನಡುವೆ ಬೆರೆತು ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಜನರ ಪ್ರೀತಿಗಳಿಸಿದ ಸಾರ್ಥಕತೆ ತಮ್ಮ 28 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಪಡೆದಿರಲಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಮಡಿಕೇರಿಯ ಕಾವೇರಿ ಹಾಲ್ ಸಭಾಂಗಣದಲ್ಲಿ ಪ್ರೊಟೆಸ್ಟೆಂಟ್ ಸಭೆಗಳ ಸಂಘ ಏರ್ಪಡಿಸಿದ ಮೂರು ದಿನದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಹೈ ಕೋರ್ಟ್ ವಕೀಲನಾಗಿ, ಅಡ್ವೋಕೆಟ್ ಜನರಲ್ ಆಗಿ 28 ವರ್ಷಕಾಲ ತಾವು ನ್ಯಾಯಾಂಗ ಮತ್ತು ಕಾರ್ಯಾಂಗಳಲ್ಲಿ ಕೆಲಸ ಮಾಡಿದ್ದರೂ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡುವಾಗ ಸಿಗುವ ಸಂತೃಪ್ತಿ ತಮ್ಮ ವೃತ್ತಿ ಜೀವನದಲ್ಲಿ ಕಾಣಲಿಲ್ಲ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯರಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಪಾಲಿಸಲು ಎಲ್ಲರೂ ಬದ್ದರಾಗಿರಬೇಕು ಎಂದು ಕರೆ ನೀಡಿದ ಪೊನ್ನಣ್ಣನ, 1935 ರಲ್ಲಿ ಗವರ್ನಮೆಂಟ್ ಆಫ್ ಇಂಡಯಾ…
ಮಡಿಕೇರಿ ಏ.3 NEWS DESK :ಶಾಲೆಗಳಲ್ಲಿ ವಿದ್ಯಾಥಿ೯ಗಳನ್ನು ಪಠ್ಯಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೇ ವೈವಿವಿಧ್ಯಮಯ ಕಲಿಕಾ ಶಿಬಿರಗಳ ಮೂಲಕ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರಬೇಕೆಂದು ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದ್ದಾರೆ. ನಗರದ ಕೊಡಗು ವಿದ್ಯಾಲಯದಲ್ಲಿ ಹೀಲಿಯಂ ಬಲೂನನ್ನು ಆಕಾಶಕ್ಕೆ ಹಾರಿಸುವ ಮೂಲಕ ಬೇಸಿೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಮರಾಜನ್, ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹವ್ಯಾಸಗಳನ್ನು ಉತ್ತೇಜಿಸಲು ಮತ್ತು ಅವರ ಸಾಮರ್ಥ್ಯಗಳನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪಠ್ಯಾಧ್ಯಯನಕ್ಕಷ್ಟೇ ಸೀಮಿತವಾಗದೆ, ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿನ ಪ್ರತಿಭೆಯ ಬೆಳವಣಿಗೆಗೆ ಅವಕಾಶವನ್ನು ಶಾಲೆಗಳಲ್ಲಿ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಮೊಬೈಲ್ ಬಳಸಬೇಡಿ ಎಂದು ಮಕ್ಕಳಿಗೆ ಹೇಳುವ ಬದಲು, ವಿದ್ಯಾಥಿ೯ಗಳು ತೊಡಗಿಸಿಕೊಳ್ಳಬೇಕಾದ ಸೃಜನಾತ್ಮಕ ಚಟುವಟಿಕೆಗಳತ್ತ ಅವರು ಗಮನ ನೀಡುವಂತೆ ಮಾಡುವಂತಾಗಬೇಕು. ಪೋಷಕರು ಮಕ್ಕಳ ಆಸಕ್ತಿಗಳನ್ನು ಗುರುತಿಸಿ, ಅವರ ಹವ್ಯಾಸಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು,” ಎಂದೂ ರಾಮರಾಜನ್ ಹೇಳಿದರು. ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿ ತಮ್ಮದೇ ಛಾಪು ಮೂಡಿಸಿರುವ…
ಮಡಿಕೇರಿ, ಏ.3 NEWS DESK : ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಕೊಡಮಾಡುವ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಜಿಲ್ಲಾ ಸಿಐಡಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು. ಸವಿ ಭಾಜನಾರಾಗಿದ್ದಾರೆ. ಬೆಂಗಳೂರಿನ ಕೋರಮಂಗಲ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕವನ್ನು ಸಿ.ಯು. ಸವಿ ಅವರಿಗೆ ಪ್ರದಾನ ಮಾಡಿದರು. ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಸವಿ ಅವರು ಬೆಟ್ಟಗೇರಿಯ ಚಳಿಯಂಡ ಉತ್ತಯ್ಯ, ಕಮಲ ದಂಪತಿ ಪುತ್ರಿ. ಕೋಕೇರಿ ನಿವಾಸಿ ಲೋಕೇಶ್ ಅವರ ಪತ್ನಿ.
ಮಡಿಕೇರಿ NEWS DESK ಏ.3 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 2 ರ ಎರಡನೇ ದಿನದ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ಮತ್ತು ಎಂಟಿಬಿ ರಾಯಲ್ಸ್ ತಂಡ ಗೆಲುವು ದಾಖಲಿಸಿದವು. ಪ್ರಗತಿ ಕ್ರಿಕೆಟರ್ಸ್ ಮತ್ತು ಕೂರ್ಗ್ ಯುನೈಟೆಡ್ ತಂಡಗಳ ನಡುವೆ ನಡೆದ ದಿನದ ಮೊದಲ ಪಂದ್ಯದಲ್ಲಿ ಪ್ರಗತಿ ಕ್ರಿಕೆಟರ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ 18.5 ಓವರ್ ಗಳಲ್ಲಿ 121 ರನ್ ಗಳನ್ನು ಗಳಿಸಿ ಆಲ್ ಔಟ್ ಆಯಿತು. ಆ ಮೂಲಕ ಪ್ರಗತಿ ಕ್ರಿಕೆಟರ್ಸ್ ತಂಡ ಜಯ ದಾಖಲಿಸಿತು. ಕೂರ್ಗ್ ಯುನೈಟೆಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಪ್ರಗತಿ ಕ್ರಿಕೆಟರ್ಸ್ ನ ತಂಬುಕುತ್ತೀರ ಸುಖೇಶ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ದ್ವಿತೀಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು…






