ಸೋಮವಾರಪೇಟೆ ಏ.1 NEWS DESK : ಉದಯ ಯುವಕ ಸಂಘ ಮತ್ತು ಯಡೂರು ಗ್ರಾಮಸ್ಥರ ಆಶ್ರಯದಲ್ಲಿ ಯುಗಾದಿ ಪ್ರಯುಕ್ತ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿಯನ್ನು ಸೋಮವಾರಪೇಟೆ ರಾಮಧೂತ ತಂಡ ಮುಡಿಗೇರಿಸಿಕೊಂಡಿದೆ. ಯಡೂರು ಯುವೈಸಿ ತಂಡ ದ್ವಿತೀಯ, ಕುಡಿಗಾಣ ಯಂಗ್‍ಸ್ಟಾರ್ಸ್ ತಂಡ ತೃತೀಯ ಹಾಗೂ ಪ್ರತಾಪ್ ಫ್ರೆಂಡ್ಸ್ ಯಡೂರು ತಂಡ ಚತುರ್ಥ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳೆಯರ ಥ್ರೋಬಾಲ್ ಪ್ರಶಸ್ತಿಯನ್ಯ ಭಾಗ್ಯ ಫ್ರೆಂಡ್ಸ್ ತಂಡ ಪಡೆಯಿತು. ಕೊಡ್ಲಿಪೇಟೆ ಶ್ರೀಗಣಪತಿ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಹಗ್ಗಾಜಗ್ಗಾಟದಲ್ಲಿ ಎಂಎಚ್ ಫ್ರೆಂಡ್ಸ್ ಹಾನಗಲ್‍ಶೆಟ್ಟಳ್ಳಿ ಪ್ರಥಮ, ಕುಡಿಗಾಣ ಯಂಗ್ ಸ್ಟಾರ್ ದ್ವಿತೀಯ ಸ್ಥಾನಗಳಿಸಿತು. ಮಹಿಳೆಯರ ವಿಭಾಗದಲ್ಲಿ ಭಾಗ್ಯ ಫ್ರೆಂಡ್ಸ್ ಪ್ರಥಮ, ವಿದ್ಯಾಸ್ವಹಾಯ ಸಂಘ ಯಡೂರು ತಂಡ ದ್ವಿತೀಯ ಸ್ಥಾನ ಪಡೆಯಿತು. ಗ್ರಾಮದ ಹಿರಿಯರಾದ ಎ.ಎಂ.ಆನಂದ, ಹೊನ್ನಪ್ಪ, ವೈ.ಎಂ.ಈರಪ್ಪ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವೈ.ಎಸ್.ಧನ್ಯ, ಪುಷ್ಪಾಂಜಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಡಾಕ್ಟರೇಟ್ ಪಡೆದ ಡಾ.ಸಿ.ಆರ್.ಅಜಿತ್, ಎಂ.ಬಿ.ಶೌರ್ಯ ಅವರುಗಳನ್ನು…
ಲೇಖಕ: admin
ಮಡಿಕೇರಿ ಏ.1 NEWS DESK : ಏ.2 ರಂದು ನಡೆಯಲಿರುವ ಮುದ್ದಂಡ ಕಪ್ ಹಾಕಿ ಉತ್ಸವ ಪಂದ್ಯಾವಳಿ ವಿವರ ಮೈದಾನ 1 :: ಬೆಳಿಗ್ಗೆ 9 ಗಂಟೆಗೆ ಪಟ್ಟಮಾಡ ಮತ್ತು ಪೊಂಜಂಡ, 10 ಗಂಟೆಗೆ ಚಿಮ್ಮಣಮಾಡ ಮತ್ತು ಮುದ್ದಿಯಡ, 11 ಗಂಟೆಗೆ ಬೊಳೆಯಾಡಿರ ಮತ್ತು ಪೆಮ್ಮುಡಿಯಂಡ, ಮಧ್ಯಾಹ್ನ 12 ಗಂಟೆಗೆ ಕೊಂಡಿರ ಮತ್ತು ಪೇರಿಯಂಡ, 1 ಗಂಟೆಗೆ ಕುಟ್ಟಂಡ (ಕಾರ್ಮಡ್) ಮತ್ತು ಪರುವಂಗಡ, 2 ಗಂಟೆಗೆ ಚಿಲ್ಲವಂಡ ಮತ್ತು ಮುದ್ದಂಡ, 3 ಗಂಟೆಗೆ ಕಂಜಿತಂಡ ಮತ್ತು ಪೊನ್ನಕಚ್ಚಿರ, ಸಂಜೆ 4 ಗಂಟೆಗೆ ಚರಿಮಂಡ ಮತ್ತು ಮೇವಡ ಮೈದಾನ 2 :: ಬೆಳಿಗ್ಗೆ 9 ಗಂಟೆಗೆ ನಾಪನೆರವಂಡ ಮತ್ತು ನೆಲ್ಲಪಟ್ಟಿರ, 10 ಗಂಟೆಗೆ ಕೋಣಿಯಂಡ ಮತ್ತು ಕಲ್ಲುಮಾಡಂಡ, 11 ಗಂಟೆಗೆ ಕೊಲತಂಡ ಮತ್ತು ಮಲ್ಲಂಡ, ಮಧ್ಯಾಹ್ನ 12 ಗಂಟೆಗೆ ಪಾಂಡೀರ (ಗಾಳಿಬೀಡು) ಮತ್ತು ಪೋರಂಗಡ, 1 ಗಂಟೆಗೆ ಮಾಳೆಯಂಡ ಮತ್ತು ಬಲ್ಯಂಡ, 2 ಗಂಟೆಗೆ ಅಮ್ಮೆಕಂಡ ಮತ್ತು ಚೆಬಂಡ, 3 ಗಂಟೆಗೆ ಮುಂಡಚಾಡಿರ…
ಮಡಿಕೇರಿ ಏ.1 NEWS DESK : ಮಡಿಕೇರಿ ನಗರದ ಸುರ್ದಶನ ಬಡಾವಣೆಯ ಶ್ರೀ ಮುನೀಶ್ವರ ದೇವಾಲಯದಲ್ಲಿ ಯುಗಾದಿ ಉತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಅಭಿಷೇಕ, ಅಲಂಕಾರ ಪೂಜೆ, ಹೋಮ ಹವನಾದಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ದೇವಾಲಯದ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿಗೆ ಭಕ್ತರು ಹರಕೆ ಅರ್ಪಿಸಿದರು. ಮಹಾಪೂಜೆ ಮತ್ತು ಮಹಾ ಮಂಗಳಾರತಿಯ ನಂತರ ಅಪಾರ ಸಂಖ್ಯೆಯ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಮಡಿಕೇರಿ ಏ.1 NEWS DESK : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಿರುನಾಣಿಯಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‍ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‍ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಸಿಕೊಡಬೇಕೆಂದು ಒತ್ತಾಯಿಸಿದರು. ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ 1871-72ರಿಂದ…
ಕುಶಾಲನಗರ ಏ.1 NEWS DESK : ಭಕ್ತಕೋಟಿಯ ಪಾಲಿನ ನಡೆದಾಡುವ ಶ್ರೇಷ್ಠ ಸಂತ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾಧನೆಗಳಿಗೆ ನಾಡಿನ ಯಾವುದೇ ಮಠಗಳು ಸರಿಸಾಟಿಯಾಗಲಾರವು ಎಂದು ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಬಣ್ಣಿಸಿದರು. ಶ್ರೀ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಯವರ 118ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ತ್ರಿವಿಧ ದಾಸೋಹಿ ಶ್ರೀಗಳ ಸಾಧನೆಯ ಮೂಲಕ ದೈವತ್ವಕ್ಕೇರಿದ ಮೇರುಪುರುಷರಾದರು. ಅವರ ಚಿಂತನೆಗಳು ಹಾಗೂ ಸಾಧನೆಗಳು ಈಗಿನ ತಲೆಮಾರಿನ ಯುವಕರಿಗೆ ಆದರ್ಶಪ್ರಾಯವಾಗಬೇಕು ಎಂದರು. ಭೂಮಿ ಮೇಲೆ ಆಕಸ್ಮಿಕವಾಗಿ ಬಂದ ಅತಿಥಿಗಳಾದ ನಾವು ಒಳಿತನ್ನು ಮಾಡುವ ಮೂಲಕ ಇಲ್ಲಿ ಸಂದರೆ ಅಲ್ಲಿಯೂ ಸಲ್ಲಬಹುದು ಎಂದು ಬಸವಣ್ಣನವರ ವಚನವನ್ನು ಉಲ್ಲೇಖಿಸಿ ಪ್ರವಚನ ನೀಡಿದರು. ಪಟ್ಟಣದ ಗಣಪತಿ ದೇವಾಲಯದಿಂದ ಹೊರಟ ಮೆರವಣಿಗೆ ರಥಬೀದಿಗಾಗಿ ಸೋಮೇಶ್ವರ ದೇವಾಲಯದವರೆಗೂ ಬಂದಿತು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭ ಎಲೆ ಮರೆಯ ಕಾಯಿಯಂತೆ ಸಾಮಾಜಿಕ…
ಮಡಿಕೇರಿ ಏ.1 NEWS DESK : ಸೈನಿಕ ಶಾಲೆಯ ಎನ್‌ಸಿಸಿ ಘಟಕದ ವತಿಯಿಂದ ಕೂಡಿಗೆಯ ಸಂತೆ ಮಾರುಕಟ್ಟೆಯಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಶಾಲಾ ಮಕ್ಕಳು ತಯಾರಿಸಿದ ಪೇಪರ್ ಕವರ್ ಗಳನ್ನು ಮಾರುಕಟ್ಟೆಯಲ್ಲಿದ್ದ ಎಲ್ಲಾ ವ್ಯಾಪಾರಿಗಳಿಗೆ ವಿತರಿಸಲಾಯಿತು. ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಕವರ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ಜೊತೆಗೆ ಎಲ್ಲಾ ಗ್ರಾಹಕರು ಮತ್ತು ವ್ಯಾಪಾರಿಗಳು ಮುಂದಿನ ದಿನಮಾನಗಳಲ್ಲಿ ಪೇಪರ್ ಕವರ್ ಬಳಕೆಯನ್ನು ಮಾಡಬೇಕೆಂದು ಮನವಿ ಮಾಡಿದರು. ಈ ಎಲ್ಲಾ ಪೇಪರ್ ಕವರ್ ಗಳನ್ನು ಶಾಲೆಯ ವಿದ್ಯಾರ್ಥಿಗಳೇ ತಯಾರು ಮಾಡಿ ವಿತರಿಸಿದರು.ಪೇಪರ್ ಕವರ್ ತಯಾರಿಕೆಯ ಕುರಿತು ಮಕ್ಕಳಿಗೆ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಾಗಾರದ ನೇತೃತ್ವವನ್ನು ಶಾಲೆಯ ದಿವ್ಯ ಸಿಂಗ್ ವಹಿಸಿದ್ದರು. ಮಕ್ಕಳು ಸಾವಿರಾರು ಪೇಪರ್ ಕವರ್ ಗಳನ್ನು ತಯಾರು ಮಾಡುವುದರೊಂದಿಗೆ, ಪರಿಸರದ ಸಂರಕ್ಷಣೆಯಲ್ಲಿ ಪೇಪರ್ ಕವರ್ ಗಳ ಮಹತ್ವವನ್ನು ಅರಿತರು. ಜೊತೆಗೆ ಪೇಪರ್ ಕವರ್ ಗಳನ್ನು ತಯಾರಿಸುತ್ತಾ ಕಲಿಕೆಯ ಅನುಭವವನ್ನು ಪಡೆದರು. ಈ ಸಂದರ್ಭ ಶಾಲೆಯ…
ಕುಶಾಲನಗರ ಏ.1 NEWS DESK : ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನ ನಿತ್ಯ ಬಳಕೆಯಾಗುವ ಔಷಧ, ಬಟ್ಟೆ ಮತ್ತು ನಿತ್ಯ ಬಳಕೆಯಾಗುವ ವಸ್ತುಗಳನ್ನು ನೀಡಲಾಯಿತು. ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್ ಮಾತನಾಡಿ, ಹಿರಿಯ ಚೇತನಗಳನ್ನು ಪ್ರತಿನಿತ್ಯ ಗೌರವಿಸುವ ಕಾಯಕವನ್ನು ಮಾಡಬೇಕು. ಇದರಿಂದ ಅವರ ಮನಸ್ಸಿನಲ್ಲಿ ಸಂತೋಷದ ಭಾವನೆ ಮೂಡುತ್ತದೆ ಮತ್ತು ಬದುಕಿನಲ್ಲಿ ಚೈತನ್ಯ ದೊರೆಯುತ್ತದೆ. ಇಂತಹ ಕಾರ್ಯಗಳಿಂದ ಒಂದು ದಿನದ ಮಟ್ಟಿಗಾದರೂ ಅವರ ಮನಸಿನಲ್ಲಿ ಖುಷಿ ಮೂಡಿಸಿದ ತೃಪ್ತಿ ಸಿಗುತ್ತೆ ಎಂದು ಉದಯ್ ಕುಮಾರ್ ಭಾವುಕರಾದರು. ತಮ್ಮ ತಮ್ಮ ಹಿರಿಯರನ್ನು ತಮ್ಮ ಮನೆಗಳಲ್ಲೇ ಗೌರವ ಪೂರ್ವಕವಾಗಿ ನಡೆಸಿಕೊಳ್ಳಲು ಅವರು ಕರೆ ನೀಡಿದರು. ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಲ್.ಅಶೋಕ್, ಖಜಾಂಚಿ ಬಿ.ಆರ್.ನಟರಾಜ್, ನಿರ್ದೇಶಕ ಎಂ.ಪಿ.ಸತ್ಯನಾರಾಯಣ ಇತರರು ಹಾಜರಿದ್ದರು.
ಕುಶಾಲನಗರ ಏ.1 NEWS DESK : ಕುಶಾಲನಗರದ ಛಾಯಾಗ್ರಾಹಕ ಪ್ರಮೋದ್ ಅವರಿಗೆ ಇತ್ತೀಚಿಗೆ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 4500 ರೂಪಾಯಿ ಬಿದ್ದು ಸಿಕ್ಕಿತ್ತು. ಅದನ್ನು ಅಲ್ಲಿಯ ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳಿಗೆ ತಿಳಿಸಿದ್ದರು. ಹಣ ಕಳೆದುಕೊಂಡಿದ್ದ ಹೇರೂರು ಗ್ರಾಮದ ಪ್ರಹ್ಲಾದ್ ಅವರು ದೂರವಾಣಿ ಮೂಲಕ ಪ್ರಮೋದ್ ಅವರನ್ನು ಸಂಪರ್ಕಿಸಿ, ಕಳೆದುಕೊಂಡಿರುವ ಹಣದ ಕುರಿತು ಮಾಹಿತಿ ನೀಡಿದ ಮೇರೆಗೆ 4500 ರೂಪಾಯಿ ಹಿಂದಿರುಗಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಮೋದ್ ಪಾತ್ರರಾಗಿದ್ದಾರೆ.
ಮಡಿಕೇರಿ ಏ.1 NEWS DESK : ಸೋಮವಾರಪೇಟೆ ಬಸವೇಶ್ವರ ರಸ್ತೆ ನಿವಾಸಿ ದೇಶ್ಮುಖ್ (ಪುಟ್ಟಣ್ಣ) ಹಾಸನದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಕರ್ಕಳ್ಳಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಭಗವತಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು, ಬಳಗವನ್ನಗಲಿದ್ದಾರೆ. 90 ದಶಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಯ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಸೋಮವಾರಪೇಟೆ ವೀರಶೈವ ಸಮಾಜದ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು.
ಮಡಿಕೇರಿ ಏ.1 NEWS DESK : ಜನರಲ್ ತಿಮ್ಮಯ್ಯ ಅವರ ಜೀವನಾದಶ೯ ಪ್ರತಿಯೋವ೯ರಿಗೂ ಸದಾ ಆದಶ೯ಪ್ರಾಯವಾಗಿದೆ. ನಾಯಕರು ಅನೇಕರು ಇದ್ದಾರಾದರೂ ಕೆಲವರು ಮಾತ್ರ ಸದಾ ನಮ್ಮ ಮನಸ್ಸಿನಲ್ಲಿ ಇರಲು ಸಾಧ್ಯ. ಇಂಥ ಮಹಾನ್ ಸೇನಾ ನಾಯಕರಾಗಿದ್ದವರು ಜನರಲ್ ತಿಮ್ಯಯ್ಯನವರು ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನವಾ೯ಡೆ ಹೇಳಿದ್ದಾರೆ. ಕೊಡಗು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜನ್ಮ ನಿವಾಸ ಸನ್ನಿಸೈಡ್ ನಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ 119 ನೇ ಜನ್ಮ ಜಯಂತಿಯನ್ನು ತಿಮ್ಮಯ್ಯ ಭಾವಚಿತ್ರಕ್ಕೆ ಪುಪ್ಪಾಚ೯ನೆ ಮಾಡಿ ಅವರು ಮಾತನಾಡಿದರು. ಜನರಲ್ ತಿಮ್ಮಯ್ಯ ಅವರ ಜೀವನ ಪ್ರತೀಯಬ್ಬರಿಗೂ ಆದಶ೯ಪ್ರಾಯ. ಸೇನೆಯೇ ಅವರ ಆತ್ಮವಾಗಿತ್ತು ಹಾಗೇ ಆತ್ಮದಲ್ಲಿಯೇ ಸೇನಾ ಪ್ರೇಮ ಹುದುಗಿತ್ತು ಎಂದು ಸ್ಮರಿಸಿದರು. ಕೊಡಗಿನ ಜನತೆಗೆ ದೇಶಪ್ರೇಮದ ಮನೋಭಾವನೆ ಸಹಜವಾಗಿಯೇ ಹೆಚ್ಚಾಗಿದೆ. ಭವಿಷ್ಯದಲ್ಲಿ ಕೊಡಗಿನಿಂದ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳಿಗೆ ಯುವಪೀಳಿಗೆ ಸೇಪ೯ಡೆಯಾಗಬೇಕೆಂದೂ ಅವರು ಹಾರೈಸಿದರು.…






