ಲೇಖಕ: admin

ಮಡಿಕೇರಿ NEWS DESK ಜ.23 :  ಮುದ್ದಂಡ ಹಾಕಿ ಉತ್ಸವದಲ್ಲಿ ಭಾಗವಹಿಸಲು ವೆಬ್‌ಸೈಟ್‌ ಮೂಲಕ ಕುಟುಂಬದ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ವೆಬ್‌ಸೈಟ್ ಲಿಂಕ್ :- https://www.muddandahockeyfestival.in ಕೆಳಗಿನ ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.  ಅದ್ಯಾ ಪೂವಣ್ಣ, ಕಾರ್ಯದರ್ಶಿ, ಮುದ್ದಂಡ ಕುಟುಂಬ ಕ್ರೀಡೆ, ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್.

Read More

ಮಡಿಕೇರಿ NEWS DESK ಜ.23 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಕನಿಷ್ಟ ವೇತನ ರೂ.31 ಸಾವಿರ ಪಾವತಿ ಮಾಡಬೇಕು, ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸಿಬ್ಬಂದಿಗಳ ಸಂಖ್ಯೆ ಕಡಿತ ಆದೇಶ ರದ್ದು ಮಾಡಬೇಕು, ಜೀತ ಪದ್ದತಿಯಿಂದ ಮುಕ್ತಿಗೊಳಿಸಬೇಕು, ಬೀದರ್ ಮಾದರಿಯ ಸಹಕಾರ ಸಂಘವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಬೇಕು, ವಾರದ ರಜೆ, ಬಾಕಿ ಸಂಬಳ, ಹೆರಿಗೆ ರಜೆಯ ವೇತನವನ್ನು ನೀಡಬೇಕು, ಕೆಲಸದ ಸಮಯವನ್ನು ನಿಗದಿಪಡಿಸಬೇಕು, ಇಎಸ್‌ಐ ಮತ್ತು ಪಿಎಫ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಸಮಿತಿಯ ಅಧ್ಯಕ್ಷ ಜಿ.ಕೆ.ದಿನೇಶ್, ಉಪಾಧ್ಯಕ್ಷ ಹೆಚ್.ಎಸ್.ಯೋಗೇಶ್, ಜಿಲ್ಲಾ ಮುಖಂಡರುಗಳಾದ ಎಸ್.ಟಿ.ಸೌಭಗ್ಯ, ಪ್ರೇಮ, ನೇತ್ರ, ಪ್ರೇಮ, ತಾಲ್ಲೂಕು ಮುಖಂಡರುಗಳಾದ ವಸಂತಿ, ರೂಪ, ಮಹೇಶ್, ಭಾಗ್ಯಮ್ಮ, ಭಾನುಮತಿ,…

Read More

ಚೆಟ್ಟಳ್ಳಿ ಜ.23 NEWS DESK :  ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಯ್ಕೆಯಾದ ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಅವರನ್ನು  ಚೆಟ್ಟಳ್ಳಿ ಸಾಂತ್ವನ ಸಮಿತಿ ಮತ್ತು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು. ಚೆಟ್ಟಳ್ಳಿ ಮದರಸ ಸಭಾಂಗಣದಲ್ಲಿ  ಸಾಂತ್ವನ ಸಮಿತಿ ಮತ್ತು ಜಮಾಅತ್ ಪ್ರಮುಖರು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತಾನಾಡಿದ ಹಂಸ, ಬಡವರ ಸೇವೆಗೆ ಸದಾ ಸಿದ್ದನಿರುತ್ತೇನೆಂದರು. ಕೊಡಗಿನ ಎಲ್ಲಾ ಗ್ರಾ.ಪಂಗಳು ಉತ್ತಮಕಾರ್ಯವನ್ನು ನಿರ್ವಹಿಸಯವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕೆಂದರು. ಸಮಿತಿ ಅಧ್ಯಕ್ಷ  ಹಂಸ ತ್ಯಾಗತೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್  ಮಾಜಿ ಅಧ್ಯಕ್ಷ  ಹಮೀದ್ ಕಬಡಕೇರಿ, ಉಪಾಧ್ಯಕ್ಷ ಮೂಸಾ, ಹನಿಫ್ ತ್ಯಾಗತ್ತೂರು, ಅಲಿ ಕಂಡಕರೆ, ಅನೀಫ್, ಶಕೀರ್ ಪೊನ್ನತಮೊಟ್ಡೆ ಮುಂತಾದವರು ಪಾಲ್ಗೊಂಡಿದರು. ಉಪಾಧ್ಯಕ್ಷ ಮೊಹಮ್ಮದ್ ರಫಿ ಸ್ವಾಗತಿಸಿದರು. ಜುಬೈರ್ ಚೆಟ್ಟಳ್ಳಿ ಹಂಸ ಅವರ ಕಿರುಪರಿಚಯ ಮಾಡಿದರು.

Read More

ಬೆಂಗಳೂರು ಜ.23 NEWS DESK : ಭಾರತವನ್ನು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಳಿಸಿ, ಭಾರತೀಯರೆಲ್ಲರೂ ಬ್ರಿಟೀಷರ ಗುಲಾಮಗಿರಿಯಿಂದ ಸ್ವತಂತ್ರರಾಗಬೇಕೆನ್ನುವುದು ಎಂಬ ಹೆಗ್ಗುರಿಯಿಂದ ಹೋರಾಡಿದ ಸುಭಾಷ್ ಚಂದ್ರ ಬೋಸ್  ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನ. ದೇಶದ ಬಗ್ಗೆ ಅಪಾರ ಗೌರವಾಭಿಮಾನ ಹೊಂದಿದ್ದ ಮಹಾನ್ ದೇಶಭಕ್ತ. ಈಗಿನ ಐಎಎಸ್ ನಂತೆ ಬ್ರಿಟೀಷರ ಕಾಲದಲ್ಲಿದ್ದ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತಮ್ಮ ಉಜ್ವಲ ಭವಿಷ್ಯವನ್ನು ತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟರು. ಎರಡು ಬಾರಿ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಹಾತ್ಮಾ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಭಾರತ ಸ್ವಾತಂತ್ರ್ಯ…

Read More

ಮಡಿಕೇರಿ NEWS DESK ಜ.23 : ತೋಟಗಾರಿಕೆ ಇಲಾಖೆಯು ಜಿಲ್ಲಾ, ಆಡಳಿತ, ಜಿಲಾ, ಪಂಚಾಯತ್ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಭಾರತ ದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಜ.24 ರಿಂದ 27 ರವರೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು24 ರಂದು ಮಧ್ಯಾಹ್ನ 3 ಗಂಟೆಗೆ ಕೊಡಗು ಉಸ್ತುವಾರಿ ಸಚಿವರು ಮಾಡಿಲಿದ್ದು, ಜಿಲ್ಲೆಯ ಶಾಸಕರುಗಳು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲಿ.. ಸುಮಾರು 7000 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್ ಗಳಲ್ಲಿ ಸುಮಾರು 20000 ವಿವಿಧ ಜಾತಿಯ ಹೂವುಗಳಾದ ಸಾಕ್ಷಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್, ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. ::: ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು::: 1.…

Read More

ನಾಪೋಕ್ಲು ಜ.23 NEWS DESK : ಜಾರ್ಕಂಡ್ ನಲ್ಲಿ ನಡೆಯಲಿರುವ 19 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ತಂಡಕ್ಕೆ ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಿ.ಯು.ತನುಷ್ ಆಯ್ಕೆಯಾಗಿದ್ದಾರೆ. ತನುಷ್ ಕಕ್ಕಬ್ಬೆ ಕುಂಜಿಲ ಗ್ರಾಮದ ಪೊಂಗೇರ ಉಲ್ಲಾಸ ಮತ್ತು ಹೇಮಾ ದಂಪತಿಗಳ ಪುತ್ರ.ಕೂಡಿಗೆಯ ಹಾಕಿ ತರಬೇತಿದಾರರಾಗಿರುವ ಬಿ.ಎಸ್.ವೆಂಕಟೇಶ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಪಂದ್ಯಾವಳಿಯು ಜ.29ರಿಂದ ಫೆ.2 ರ ವರೆಗೆ ನಡೆಯಲಿದೆ. ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ ಜ.23 NEWS DESK : ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ಮೈಸೂರು ಹಾಗೂ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ  ಸಹಯೋಗದಲ್ಲಿ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ  (ಇಂಗ್ಲಿಷ್) ಆಂಗ್ಲ ಭಾಷಾ ಮೇಳ ನಡೆಯಿತು. ಕಾರ್ಯಕ್ರಮದಲ್ಲಿ  ಕೂಡಿಗೆ ಡಯಟ್ ನ ಉಪನ್ಯಾಸಕ ವಿಜಯ್ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಥಮ್ ಸಂಸ್ಥೆಯ ಶಿಕ್ಷಕಿ ರಂಜಿತ ಕಾರ್ಯಕ್ರಮದ ರೂಪುರೇಷೆ ಯನ್ನು ವಿವರಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆ ಉಪನ್ಯಾಸಕರಾದ ಅನಂತ್, ನಿವೃತ್ತ ಶಿಕ್ಷಕರಾದ ರಮೇಶ್, ಉಪಾಧ್ಯಕ್ಷರಾದ ಅರ್ಪಿತ, ಶಿಕ್ಷಕಿ ಜಾನಕಿ, ಡಯಟ್ ನ ಟೆಕ್ನಿಕಲ್ ಸಹಾಯಕ ಹರೀಶ್, ಮುಖ್ಯ ಶಿಕ್ಷಕರಾದ ವೆಂಕಟೇಶ, ಹಳೆಕೋಟೆ ಶಾಲೆಯ ಮುಖ್ಯ ಶಿಕ್ಷಕ ಟಿ.ಆರ್.ರಮೇಶ್, ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಮಕ್ಕಳು ಹಾಜರಿದ್ದರು. ಹಾಜರಿದ್ದರು. ಶಿಕ್ಷಕಿ ರಮ್ಯಾ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾವತಿ ವಂದಿಸಿದರು. ನಂತರ ಅನೇಕ ವಿಷಯಗಳ ಬಗ್ಗೆ ಮಕ್ಕಳು ಪ್ರಾತ್ಯಕ್ಷಿಕೆಯ…

Read More

ಮಡಿಕೇರಿ ಜ.23 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೂತನವಾಗಿ ಪ್ರಾರಂಭಿಸಿರುವ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2024-25 ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಮಹಿಳಾ ಲೇಖಕಿಯರು ತಾವು ರಚಿಸಿದ ಸೃಜನಶೀಲ ಸಮಾಜಮುಖಿ ಕಥೆ, ಕಾದಂಬರಿ, ಕವನ ಸಂಕಲನ ಕೃತಿಗಳ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಬೇಕು. 2019ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಸ್ಪರ್ಧೆಗೆ ಪುಸ್ತಕ ಕಳಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸಬೇಕು. ಲಕೊಟೆಯ ಮೇಲೆ *ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ* ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ.…

Read More

ಮಡಿಕೇರಿ ಜ.23 NEWS DESK : ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಆವರಣದಲ್ಲಿ ಮಾವಿನಹಳ್ಳಹಾಡಿ ಹಾಗೂ ಕಟ್ಟೆಹಾಡಿಯ ಅರಣ್ಯ ಹಕ್ಕು ಸಮಿತಿಯ ವಿಶೇಷ ಗ್ರಾಮಸಭೆ ನಡೆಯಿತು. ಗಿರಿಜನ ಸಮುದಾಯದ ಹಿರಿಯ ಮುಖಂಡ ಜೆ.ಪಿ.ರಾಜು ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿದರು. ಸಭೆಯ ಆರಂಭದಲ್ಲಿ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಗ್ರಾಪಂ ಪಿಡಿಒ ರಾಜಶೇಖರ್ ಮಾತನಾಡಿ, ಸಭೆಗೆ ಅಗತ್ಯ ಮಾಹಿತಿ ಒದಗಿಸಿದರು. ಗ್ರಾಮಸಭೆಗೆ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಾಗಬೇಕು. ತಮ್ಮ‌ ಬದಲು ಮಾಹಿತಿ ಕೊರತೆ ಇರುವವರನ್ನು ಇಲಾಖೆಯಿಂದ ಸಭೆಗೆ ಕಳಿಸಲಾಗುತ್ತಿದೆ ಎಂದು ಸಭೆಗೆ ಗೈರಾದ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಗೊಂಡಿತು. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆಯಡಿ ಹಾಗೂ ಪಂಚಾಯತಿ ವತಿಯಿಂದಲೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಕ್ಕುಪತ್ರ ಪಡೆದ ಕುಟುಂಬಗಳು ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಜಾತಿ, ಆಧಾರ್ ಕಾರ್ಡ್ ಹೊಂದಿಲ್ಲದ…

Read More

ವಿರಾಜಪೇಟೆ ಜ.23 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ)ವಿರಾಜಪೇಟೆ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಮಣ್ಣು ಪರೀಕ್ಷೆ ಮತ್ತು ಸಸ್ಯ, ಪೋಷಕಾಂಶಗಳನ್ನು ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾನೂರು ವಲಯದ ಬಾಳೆಲೆ ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಲಕ್ಷ್ಮಿ ಮಾತನಾಡಿ, ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಮಣ್ಣಿನಲ್ಲಿ ಹೆಚ್ಚು ಅಂಶ ಇರುತ್ತದೆ. ಮಣ್ಣು ಪರೀಕ್ಷೆ ಹೇಗೆ ಮಾಡಬೇಕು, ನೀರಾವರಿ, ಭೂಮಿ ಅಳತೆಗೆ ಆಳಕ್ಕೆ ಗುಂಡಿ ತೆಗೆದು ಗಿ ಆಕಾರದಲ್ಲಿ ಅಳತೆ ತೆಗೆದುಕೊಳ್ಳಬೇಕು, ಮಣ್ಣಿನ ಹೆಲ್ತ್ ಕಾರ್ಡ್ ರೈತ ಸಂಪರ್ಕ ಹೋಗಿ ಮಣ್ಣು ಪರೀಕ್ಷೆ ಮಾಡುತ್ತಾರೆ ಕೃಷಿ ವಿಶ್ವವಿದ್ಯಾಲಯ, ಅರಣ್ಯ ಮಹಾ ವಿಶ್ವವಿದ್ಯಾಲಯದಲ್ಲಿ ಮಣ್ಣು ಪರೀಕ್ಷೆ ಮಾಡುತ್ತಾರೆ ಎಂಬ ವಿಚಾರಗಳನ್ನು ತಿಳಿಸಿ ಮಣ್ಣು ಪರೀಕ್ಷೆಯ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕ ವಸಂತ್, ಒಕ್ಕೂಟದ ಅಧ್ಯಕ್ಷರಾದ ಪದ್ಮಾವತಿ, ಸೇವಾ ಪ್ರತಿನಿಧಿ…

Read More