ಲೇಖಕ: admin

ಮಡಿಕೇರಿ ಫೆ.1 NEWS DESK : ಕೊಡಗು ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಎಎಸ್‌ಐಗಳಾದ   ಬಿ.ಎನ್.‌ಸತ್ಯಮೂರ್ತಿ ಮತ್ತು ಪಿ.ಡಿ.ಪ್ರಕಾಶ್‌  ಅವರನ್ನು ಕೊಡಗು ಜಿಲ್ಲಾ ಪೊಲೀಸ್‍ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್  ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.

Read More

ಕಣಿವೆ ಫೆ.1 NEWS DESK : ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮಾರಕವಾಗಿರುವ ಮೊಬೈಲ್ ಎಂಬ ಮಾಯಾಪೆಟ್ಟಿಗೆಯನ್ನು ದೂರವಿಟ್ಟು ಪುಸ್ತಕ ಹಿಡಿದು ಅಧ್ಯಯನ ಮಾಡುವ ಮೂಲಕ ಜ್ಞಾನವಂತರಾಗಲು ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು ಕರೆ ನೀಡಿದರು. ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಜ್ಞಾನಕ್ಕೆ ಇರುವ ಬೆಲೆ ಹಣಕ್ಕಿಲ್ಲ.  ಹಣವಂತನನ್ನು ಎಲ್ಲಿಯೂ ಯಾರೂ ಕೂಡ ಸತ್ಕರಿಸಿದ ಉದಾಹರಣೆ ಇಲ್ಲ.  ಅದೇ ಕಠಿಣ ಪರಿಶ್ರಮದ ಮೂಲಕ ಜ್ಞಾನವಂತರಾದರೆ ಸಮಾಜವೇ ತನ್ನ ಬಳಿ ಬಂದು ಗೌರವಿಸುತ್ತದೆ ಎಂದರು. ಹಳ್ಳಿಗಾಡಿನಲ್ಲಿ ಪೋಷಕರು ಇಂದಿಗೂ ಕೂಡ ಕಷ್ಟಪಟ್ಟು ಮಕ್ಕಳನ್ನು ಒಳ್ಳೆಯ ಕಾಲೇಜುಗಳಲ್ಲಿ ಓದಿಸುತ್ತಿದ್ದಾರೆ.  ಮಕ್ಕಳು ಪೋಷಕರ ಹಣಕಾಸಿನ ಸ್ಥಿತಿಗತಿ ಅರಿಯಬೇಕು. ಹೆತ್ತವರು ಧರಿಸುವ ಹರಿದ ಹಾಗೂ ಹಳೆಯ ಬಟ್ಟೆಗಳ ಬೆವರು ನಿಮ್ಮ ಬದುಕನ್ನು ವರ್ಣರಂಜಿತವಾಗಿಸುತ್ತಿದೆ.  ನಿಮ್ಮೊಳಗೆ ಅಡಗಿರುವ ವಿದ್ಯೆ ಹಾಗೂ ಉತ್ತಮ ಸಂಸ್ಕಾರಗಳು ನಿಮ್ಮನ್ನು ಸುಂದರಗೊಳಿಸುತ್ತವೆಯೇ ಹೊರತು, ನೀವು ಧರಿಸುವ ಕಲರ್ ಕಲರ್ ಬಟ್ಟೆಗಳು, ನೀವು ಸುತ್ತಾಡುವ ಬೈಕುಗಳು ಹಾಗೂ…

Read More

ವಿರಾಜಪೇಟೆ ಫೆ.1 NEWS DESK : ಯುವ ಸಮುದಾಯ ಭವ್ಯವಾದ ರಾಷ್ಟ್ರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಬಲದಾನಗೈದ ಮಹಾನ್ ಚೇತನಗಳಿಂದ ಪ್ರೇರಣೆಯನ್ನು ಪಡೆಯಬೇಕೆಂದು  ಕುಮಾರಿ ಶ್ರೀಶಾ ಅವರು ಕರೆ ನೀಡಿದರು. ಹಿಂದೂ ಜಾಗರಣ ವೇದಿಕೆಯ ವಿರಾಜಪೇಟೆ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಆಯೋಜಿತ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಜನಾಂಗದ ಪ್ರೇರಕ ಶಕ್ತಿಯಾಗಿರುವ ಸ್ವಾಮಿ ವಿವೇಕಾನಂದರು ಮತ್ತು ಸೈನಿಕ ಧರ್ಮ ಪರಿಪಾಲನೆ ಮಾಡಿ ರಾಷ್ಟ್ರಕ್ಕಾಗಿ ಬಲಿದಾನಗೈದ  ಸುಭಾಷ್ ಚಂದ್ರ ಬೋಸ್‍ರ ಆದರ್ಶಗಳನ್ನು ಪರಿಪಾಲಿಸಿದಾಗ ಮಾತ್ರ ಸುಭದ್ರ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಸಾಕಾರಗೊಳ್ಳುತ್ತದೆಂದರು. ಅಮ್ಮತ್ತಿಯ ಕಾಫಿ ಬೆಳೆಗಾರರಾದ ಕೆ.ಸಿ.ಪೂಣಚ್ಚ  ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಬದುಕನ್ನು ಯುವ ಸಮೂº ತಿಳಿಯುವಂತಾಗಬೇಕು. ಪ್ರಸ್ತುತ ಯುವ ಸಮಾಜವು ಮಾದಕ ದ್ರವ್ಯಗಳ ವ್ಯಸನಿಗಳಾಗಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿ, ಮಾದಕ ವಸ್ತುಗಳ ವಿರುದ್ಧ ಹೋರಾಟ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ…

Read More

ಬೆಂಗಳೂರು ಫೆ.1 NEWS DESK : ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಗುತ್ತಿಗೆ ನೌಕರರ ಸಂಘ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

Read More

ಫೆ.3 ರಿಂದ 9ರ ವರೆಗೆ ವಾರ ಭವಿಷ್ಯ  :: (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429) ಮೇಷ ರಾಶಿ :: ಈ ವಾರದಲ್ಲಿ ದೂರ ಪ್ರಯಾಣ, ಧನಾಗಮನ, ಹಿತಶತ್ರುಗಳಿಂದ ಕಿರುಕುಳ, ಹೊಸ ವಸ್ತು ಖರೀದಿ, ಆರೋಗ್ಯದ ಕಡೆ ಎಚ್ಚರ ವಹಿಸಿ. ಶುಭ ಸಂಖ್ಯೆ :: 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ ವೃಷಭ ರಾಶಿ :: ಮಕ್ಕಳಿಂದ ಚಿಂತೆ, ಕೋರ್ಟು ಕಚೇರಿ ಕಾರ್ಯದಲ್ಲಿ ಒತ್ತಡ, ಸ್ನೇಹಿತರಿಂದ ಸಹಾಯ, ಮಾನಸಿಕ ಒತ್ತಡ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು ಮಿಥುನ ರಾಶಿ :: ಆರೋಗ್ಯದಲ್ಲಿ ಏರುಪೇರು, ಸಾಮಾಜಿಕ ಕಾರ್ಯದಲ್ಲಿ ಯಶಸ್ಸು, ಆತ್ಮೀಯರಿಂದ ಪ್ರಶಂಸೆ, ಕಚೇರಿ ಕೆಲಸದಲ್ಲಿ ಜಯ. :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು. ಕರ್ಕಾಟಕ ರಾಶಿ :: ಸಾಲಗಾರರ ಒತ್ತಡ, ಮನೆಯಲ್ಲಿ ಕಿರಿಕಿರಿ,…

Read More

*JOB OPPORTUNITY : TEACHER VACANCY* A reputed school in Virajpet is hiring for high posting positions. We are seeking teachers for all subjects kindergarten/ elementary and head positions. Attractive salary packages and accommodation provided. Join us to shape young minds and grow your career in a supportive environment. For more details, contact 8310384621, Contact:9847490000

Read More

ಮಡಿಕೇರಿ ಫೆ.1 NEWS DESK : ವಿರಾಜಪೇಟೆ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ವಿಶೇಷ ಸಭೆಯು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದ ಶಾಸಕರು, ಮುಂದೆ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳ ಬ್ಲೂಪ್ರಿಂಟ್ ನೀಡಬೇಕೆಂದು ಸೂಚನೆ ನೀಡಿದರು.  ಈ ಸಂದರ್ಭ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಗರ ಕಾಂಗ್ರೆಸ್ ಅಧ್ಯಕ್ಷರು, ತಮ್ಮ ಕುಂದು ಕೊರತೆಗಳನ್ನು ಶಾಸಕರ ಗಮನಕ್ಕೆ ತಂದರು. ಅಲ್ಲದೇ ಅಭಿವೃದ್ಧಿ ಕಾಮಗಾರಿಗೆ ಬೇಕಾದ ಅನುದಾನಗಳ ಕೊರತೆ ನೀಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಬಳಿಕ ಮಾತನಾಡಿದ  ಶಾಸಕರು ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ಜನಸಾಮಾನ್ಯರಿಗೆ ನಿತ್ಯ ಜೀವನ ನಡೆಸುವಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರಲ್ಲದೆ,…

Read More

ಮಡಿಕೇರಿ ಫೆ.1 NEWS DESK : ಸುಂದರ ಕೊಡಗು ನಿರ್ಮಾಣ ಮಾಡುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು. ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ವತಿಯಿಂದ ವಿರಾಜಪೇಟೆಯಲ್ಲಿ ನಡೆದ ಪರಿಸರ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.  ರಕ್ಷಣಾ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯ. ಪರಿಸರಸ್ವಚ್ಛ ಹಾಗೂ ಪರಿಶುದ್ಧ ಕೊಡಗು ಜಿಲ್ಲೆಯ ಪರಿಕಲ್ಪನೆ ಈಡೇರಲು ಎಲ್ಲರ ಸಹಕಾರ  ಅತಿ ಮುಖ್ಯ ಎಂದರು.  ಪರಿಸರ ಎಂದರೆ ಭೂ ದೇವಿಯ ಮಡಲಿನ ನೀರು, ಗಾಳಿ ಹಾಗೂ ಇನ್ನಿತರ ಎಲ್ಲಾ ಪ್ರಾಕೃತಿಕ ವಿಷಯಗಳಲ್ಲೂ ಸ್ವಚ್ಛತೆ ಕಾಪಾಡುವುದರ ಮೂಲಕ ಜನರ ಆರೋಗ್ಯಕ್ಕೆ ಮತ್ತು ಸುಂದರ ಕೊಡಗು ನಿರ್ಮಾಣ ಮಾಡುವಲ್ಲಿ ಹಾಗೂ ಆಧುನಿಕ ಯುಗಕ್ಕೆ ಜನ ಮಾರುಹೋದರೂ ಸ್ವಚ್ಛತೆ ಬಗ್ಗೆ ಸದಾ ಗಮನದಲ್ಲಿ ಇಟ್ಟುಕೊಂಡು ಪರಿಸರವನ್ನು ಸಂರಕ್ಷಿಸುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ಕರೆ ನೀಡಿದರು.

Read More

ಸುಂಟಿಕೊಪ್ಪ ಫೆ.1 NEWS DESK : ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯವಾಗಿ ಪರಸ್ಪರ ಎದುರಾಳಿಗಳೇ ಹೊರತು ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಸಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‍ಗೌಡ ಕರೆ ನೀಡಿದರು. ಲೋಟಸ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ಸೇರಿದಂತೆ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ರೂ.40 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಎಲ್ಲಾ ಶಾಸಕರುಗಳು ತಲಾ ರೂ.10 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಮೊದಲೇ ಮಂಜೂರಾಗಿರುವ ಆರೋಗ್ಯ ಇಲಾಖೆಯ ನಿಗಧಿತ ಅನುದಾನ ಬರ ಪರಿಹಾರ, ಮಳೆ ಪರಿಹಾರಕ್ಕೆ ತಾಲ್ಲೂಕು ಪಂಚಾಯಿತಿ ಅನುದಾನದ ಅಡಿಯಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶುಂಕುಸ್ಥಾಪನೆ ನೇರವೇರಿಸಲಾಗಿದೆ. ಗ್ರಾ.ಪಂ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಗುಣಮಟ್ಟದ ಕಾಮಗಾರಿಯನ್ನು ಪರಿಶೀಲಿಸಬೇಕೆಂದು ಸಲಹೆ ನೀಡಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ವಾರ್ಡ್‍ಗಳಿದ್ದು, ಸಾಕಷ್ಟು ಅಭಿವೃದ್ಧಿ…

Read More

ಮಡಿಕೇರಿ ಫೆ.1 NEWS DESK : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಸುಮಾರು 58 ಸಾವಿರ ಕೋಟಿ ರೂ ವೆಚ್ಚ ಮಾಡುತ್ತಿದೆ. ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.   ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಆಯೋಜಿಸಲಾಗಿದ್ದ ಭಾಗಮಂಡಲ ಮಡಿಕೇರಿ ಮತ್ತು ತಲಕಾವೇರಿ ಮತ್ತು ನಾಪೋಕ್ಲು –ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ಇಡೀ ದೇಶದಲ್ಲಿ ಚರ್ಚಿಸಲಾಗುತ್ತಿದೆ. ಜೊತೆಗೆ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು. ಗ್ಯಾರಂಟಿ ಯೋಜನೆಗಳು ಶೇ.80 ರಷ್ಟು ಬಡಜನರಿಗೆ ತಲುಪುತ್ತಿವೆ. ಗ್ಯಾರಂಟಿ ಯೋಜನೆ ವಿರೋಧಿಸುವವರು ಸಂವಿಧಾನ ವಿರೋಧಿಗಳು ಎಂದು…

Read More