Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ*
  • *ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*
  • *ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*
  • *ಕ್ರಿಶ್ಚಿಯನ್ ಮುಖಂಡರಿಂದ ಸಚಿವ ಯು.ಟಿ. ಖಾದರ್ ಭೇಟಿ*
  • *ಕೊಡಗು ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕುಮಾರಸ್ವಾಮಿಗೆ ಮನವಿ*
  • *ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಾಸಕ ಡಾ. ಮಂತರ್ ಗೌಡ ಸ್ವಾಗತ: ರೈತರ ಪರ ಇರುವ ಭರವಸೆ*
  • *ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ*
  • *ಮಡಿಕೇರಿಯಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಜಾಗೃತಿ ಅಭಿಯಾನ*
  • *ಅವಧಿ ಮುಗಿದ ಆಹಾರ ವಿತರಣೆ: ಅಧಿಕಾರಿ ವಿರುದ್ಧ ಕ್ರಮಕ್ಕೆ ತೀರ್ಮಾನ*
  • *ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೃತಕ ಬುದ್ಧಿಮತ್ತೆಯ ಲೋಕದಲ್ಲಿ ಪತ್ರಿಕೋದ್ಯಮ ಸವಾಲಿನ ಕೆಲಸ : ಹಿರಿಯ ಪತ್ರಕರ್ತ ಅನಂತಶಯನ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೃತಕ ಬುದ್ಧಿಮತ್ತೆಯ ಲೋಕದಲ್ಲಿ ಪತ್ರಿಕೋದ್ಯಮ ಸವಾಲಿನ ಕೆಲಸ : ಹಿರಿಯ ಪತ್ರಕರ್ತ ಅನಂತಶಯನ* 

ಮಾರ್ಚ್ 4, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.4 NEWS DESK : ಗಣಕ ವಿಜ್ಞಾನದ ಹೊಸ ಆವಿಷ್ಕಾರವಾಗಿರುವ ಕೃತಕ ಬುದ್ಧಿಮತ್ತೆ (ಎ. ಐ.) ಇದೀಗ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಕೃತಕತೆಯ ಹೊಸ ಪ್ರಪಂಚವೇ ಸೃಷ್ಟಿಯಾಗತೊಡಗಿದೆ. ಈ ಕೃತಕ ಬುದ್ಧಿಮತ್ತೆಯ ಲೋಕದಲ್ಲಿ ಪತ್ರಿಕೋದ್ಯಮವನ್ನು ಮುಂದುವರಿಸುವುದು ಬಹುದೊಡ್ಡ ಸವಾಲಿನ ಕೆಲಸ ಎಂದು ಹಿರಿಯ ಪತ್ರಕರ್ತ ಹಾಗೂ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯಪಟ್ಟಿದ್ದಾರೆ.  ಮಡಿಕೇರಿಯ ಸತ್ಕಾರ ಸಭಾಂಗಣದಲ್ಲಿ ನಡೆದ ಪತ್ರಕರ್ತ ಯಜಾಸ್ ದುದ್ದಿಯಂಡ ಸಂಪಾದಕತ್ವದಲ್ಲಿ ನೂತನವಾಗಿ ಆರಂಭಗೊಂಡಿರುವ ಕೂರ್ಗ್ ಬಝ್ ಎಂಬ ಸುದ್ದಿಜಾಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಎ.ಐ.ಮೂಲಕ ಸುಳ್ಳನ್ನೇ ಸತ್ಯವಾಗಿಸುವ ವಾತಾವರಣ ಸೃಷ್ಟಿಯಾಗಿದೆ. ಮನುಷ್ಯನ ಬುದ್ಧಿಮತ್ತೆಯ ಎಲ್ಲಾ ಸಾಮರ್ಥ್ಯಗಳನ್ನು ಮರು ರಚಿಸಲು ಎ.ಐ. ಗೆ ಸಾಧ್ಯವಾಗುತ್ತಿದೆ. ಇದು ಪತ್ರಿಕೋದ್ಯಮಕ್ಕೆ ಬಹುದೊಡ್ಡ ಸವಾಲೊಡ್ಡುತ್ತದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಿ ತನ್ನ ಮೂಲ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾಗಿರುವುದು ಪತ್ರಿಕೋದ್ಯಮದ ಇಂದಿನ ಅನಿವಾರ್ಯತೆಯಾಗಿದೆ ಎಂದು  ಹೇಳಿದರು.  ‘ಕಿತ್ತಳೆನಾಡು’ ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ.ಹಂಝತುಲ್ಲಾ ಮಾತನಾಡಿ, ಇಂದಿನ ವಿದ್ಯಾವಂತರೆಲ್ಲಾರನ್ನು ಸುಶಿಕ್ಷಿತರೆಂದು ಹೇಳಲು ಸಾಧ್ಯವಿಲ್ಲ. ಮಾನವೀಯತೆ ಮತ್ತು ಸಂಸ್ಕಾರವಿಲ್ಲದ ಯಾವುದೇ ಶಿಕ್ಷಣ ಅರ್ಥಹೀನವಾಗಿರುತ್ತದೆ. ಇದು ಪತ್ರಿಕೋದ್ಯಮವನ್ನೂ ಹೊರತುಪಡಿಸಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೆ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೊಡಗಿನ ಪ್ರತಿಭಾವಂತ ಯುವಕರಾದ ಏಜಾಸ್ ದುದ್ದಿಯಂಡ ನೂತನವಾಗಿ ಆರಂಭಿಸಿರುವ ಸುದ್ದಿಜಾಲ ಜಿಲ್ಲೆಯ ಜನರ ಸಂಗಾತಿಯಾಗಲಿ. ನೂತನ ಈ ಸುದ್ದಿಜಾಲವು ತಾಜಾ ಸುದ್ದಿಯ ಜೊತೆಗೆ ಕೃಷಿ ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಮಾತನಾಡಿ, ಅತಿ ವೇಗವಾಗಿ ಬೆಳೆಯುತ್ತಾ ಜನಪ್ರಿಯತೆ ಗಳಿಸುತ್ತಿರುವ ಅಂತರ್ಜಾಲ ಸುದ್ದಿತಾಣಗಳು ವಸ್ತುನಿಷ್ಠ ವರದಿಗೆ ಪ್ರಥಮ ಆದ್ಯತೆ ನೀಡಬೇಕು. ದೃಶ್ಯ ಮತ್ತು ಮುದ್ರಣ ಮಾಧ್ಯಮ ಸೇರಿದಂತೆ ಆನ್ಲೈನ್ ಸುದ್ದಿ ಜಾಲಗಳಲ್ಲಿ ಬರುವ ವರದಿಗಳನ್ನು ನಂಬುವುದು ಕೊಡಗಿನ ಜನರ ವಾಡಿಕೆಯಾಗಿದೆ. ಆದ್ದರಿಂದ ಯಾವುದೇ ಸುದ್ದಿ ಜಾಲಗಳು  ಕೊಡಗಿನ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಪತ್ರಕರ್ತರು ಯಾವುದೇ ಸಿದ್ಧಾಂತಗಳಿಗೆ ಜೋತುಬೀಳದೆ ನಿಷ್ಪಕ್ಷಪಾತವಾಗಿ ಸತ್ಯದ ವರದಿ ನೀಡಬೇಕು. ಜೊತೆಗೆ ತಮ್ಮ ವರದಿಗಾರಿಕೆಯಲ್ಲಿ ಮಾನವೀಯ ದೃಷ್ಟಿಕೋನವನ್ನು  ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ನೂತನ ಸುದ್ದಿ ಜಾಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದ ಪೊನ್ನಂಪೇಟೆಯ ಐನಂಡ ಸೋಮಣ್ಣ, ಆಧುನಿಕತೆಯಲ್ಲಿ ಪತ್ರಿಕೋದ್ಯಮದ ರೂಪ ಬದಲಾದಂತೆ ಇಂದು ಓದುಗರ ಮನಸ್ಥಿತಿಯು ಬದಲಾಗಿದೆ. ಪುಟಗಟ್ಟಲೆ ಓದಬೇಕಾದ ಉದ್ದನೆಯ ವರದಿಗಳನ್ನು ಇಂದು ಓದುಗರು ಇಷ್ಟ ಪಡುತ್ತಿಲ್ಲ. ಬದಲಿಗೆ ಚಿಕ್ಕದಾಗಿರುವ ತುಂಡು ತುಂಡು ವರದಿಗಳನ್ನಷ್ಟೇ ಓದುಗರು ನಿರೀಕ್ಷಿಸುತ್ತಾರೆ. ಇದನ್ನು ಇಂದಿನ ಪತ್ರಕರ್ತರು ತಿಳಿದುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರಲ್ಲದೆ, ಮುದ್ರಣ ಮಾಧ್ಯಮಗಳ ಪ್ರಸರಣ ವ್ಯಾಪ್ತಿಯನ್ನು ಮೀರಿ ಸ್ಥಳೀಯ ಸುದ್ದಿಗಳನ್ನು ಜಾಗತಿಕವಾಗಿ ತಲುಪಿಸುವಲ್ಲಿ ಇಂದಿನ ಸುದ್ದಿಜಾಲಗಳ ಪಾತ್ರ ಅಪಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ  ಪ್ರಸಾದ್‌ ಶೆಟ್ಟಿ, ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಗಿಟ್ಟಿಸಿಕೊಳ್ಳಲು ವಿದ್ಯೆ, ವಿನಯತೆ, ವಿಧೇಯತೆ, ಶ್ರದ್ಧೆ, ತಂತ್ರಜ್ಞಾನದ ಬಳಕೆ ಅಗತ್ಯ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಾಧ್ಯಮ ಲೋಕದಲ್ಲಿ ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆಯ ಜತೆಗೆ ಪದಸಂಪದ, ಬರವಣಿಗೆ, ಬಹುಭಾಷಾ ಕೌಶಲ್ಯ ಬಹು ಮುಖ್ಯ.  ತಂತ್ರಜ್ಞಾನ ಬಳಕೆಯಿಂದ ಕನ್ನಡ ಪತ್ರಿಕೋದ್ಯಮ ಶರವೇಗದಲ್ಲಿ ಬೆಳೆದಿದ್ದು, ಇಂದಿನ ಸುದ್ದಿಜಾಲಗಳು ಕ್ಷಣಾರ್ಧದಲ್ಲಿ ಸುದ್ದಿಗಳನ್ನು ಜಗತ್ತಿಗೆ ಮುಟ್ಟಿಸಲಾಗುತ್ತಿದೆ. ಆದರೆ ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನದ ವೇಗ ಹೆಚ್ಚಿದೆ ಹೊರತು ಮೂಲ ಸಂವಹನ ಬದಲಾಗಿಲ್ಲ ಎಂದರು. ಸಮಾರಂಭದಲ್ಲಿ ಮಡಿಕೇರಿಯ ಶ್ರೀಕ್ಷೇತ್ರ ರಾಜರಾಜೇಶ್ವರಿ ದೇವಾಲಯ ಧರ್ಮದರ್ಶಿಗಳಾದ ಹೆಚ್.ಎನ್ .ಗೋವಿಂದಸ್ವಾಮಿ, ಉದ್ಯಮಿ ರೂಪಕ್ ರೈ, ಕೊಡವ ಮುಸ್ಲಿಂ ಅಸೋಸಿಯೇಷನ್ ಕೋಶಾಧಿಕಾರಿ ಹೆಚ್. ಎ. ಹಂಸ, ವಿಸ್ತಾರ ಟಿವಿಯ ನಿರೂಪಕಿ ಅಪೇಕ್ಷಾ, ಸುವರ್ಣ ನ್ಯೂಸ್ ನ ನಿರೂಪಕಿ ಶುಭಶ್ರೀ, ಒನ್ ಇಂಡಿಯಾ ಸುದ್ದಿಜಾಲದ ಹಿರಿಯ ಪತ್ರಕರ್ತ ಅಭಿಷೇಕ್ ಮೊದಲಾದವರು ಮಾತನಾಡಿದರು. ಸುದ್ದಿಜಾಲದ ಪ್ರಧಾನ ಸಂಪಾದಕರಾದ ಏಜಾಸ್ ದುದ್ದಿಯಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕೆಎಂಎ ಮಾಜಿ ಅಧ್ಯಕ್ಷರಾದ ದುದ್ದಿಯಂಡ ಎಸ್.ಆಲಿ, ಬೇಟೋಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಎಂ.ಎ.ಮೊಯ್ದು, ಕದನೂರು ಗ್ರಾ. ಪಂ. ಮಾಜಿ ಸದಸ್ಯರಾದ ಪಿ.ಎಚ್. ಸಂಸುದ್ದೀನ್ ಮೊದಲಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹರ್ಷಿತ ಸ್ವಾಗತಿಸಿದರು. ಗಾಯತ್ರಿ ಕಾರ್ಯಕ್ರಮ ನಿರ್ವಹಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಕೊಡಗಿನ ಶಮಾ ಅಪ್ಪಣ್ಣ ‘ಮಿಸೆಸ್ ಇಂಡಿಯಾ ವುಮೆನ್ ಆಫ್ ಸಬ್‌ಸ್ಟೆನ್ಸ್’ ಜಯಭೇರಿ*

ಸೆಪ್ಟೆಂಬರ್ 30, 2026

*ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*

ಸೆಪ್ಟೆಂಬರ್ 30, 2026

*ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*

ಸೆಪ್ಟೆಂಬರ್ 30, 2026

*ವಿರಾಜಪೇಟೆಯಲ್ಲಿ ಅಕ್ಷರ ದಾಸೋಹ ನೌಕರರ ತಾಲೂಕು ಸಮ್ಮೇಳನ ಯಶಸ್ವಿ; ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ, ನೂತನ ಪದಾಧಿಕಾರಿಗಳ ಆಯ್ಕೆ*

ಸೆಪ್ಟೆಂಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಸೆ.30: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವಿರಾಜಪೇಟೆ ಹಾಗೂ ಪೊನ್ನಂಪೇಟೆ ಘಟಕಗಳು ಮತ್ತು…

*ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಹಲವು ಅವಕಾಶಗಳ ಪರಿಚಯ*

ಸೆಪ್ಟೆಂಬರ್ 30, 2026

*ಕ್ರಿಶ್ಚಿಯನ್ ಮುಖಂಡರಿಂದ ಸಚಿವ ಯು.ಟಿ. ಖಾದರ್ ಭೇಟಿ*

ಸೆಪ್ಟೆಂಬರ್ 30, 2026

*ಕೊಡಗು ಜೆಡಿಎಸ್ ಸಂಘಟನೆ ಬಲವರ್ಧನೆಗೆ ಒತ್ತು: ಕುಮಾರಸ್ವಾಮಿಗೆ ಮನವಿ*

ಸೆಪ್ಟೆಂಬರ್ 30, 2026

*ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಾಸಕ ಡಾ. ಮಂತರ್ ಗೌಡ ಸ್ವಾಗತ: ರೈತರ ಪರ ಇರುವ ಭರವಸೆ*

ಸೆಪ್ಟೆಂಬರ್ 30, 2026

*ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ*

ಸೆಪ್ಟೆಂಬರ್ 30, 2026

*ಮಡಿಕೇರಿಯಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಜಾಗೃತಿ ಅಭಿಯಾನ*

ಸೆಪ್ಟೆಂಬರ್ 30, 2026

*ಅವಧಿ ಮುಗಿದ ಆಹಾರ ವಿತರಣೆ: ಅಧಿಕಾರಿ ವಿರುದ್ಧ ಕ್ರಮಕ್ಕೆ ತೀರ್ಮಾನ*

ಸೆಪ್ಟೆಂಬರ್ 30, 2026

*ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ*

ಸೆಪ್ಟೆಂಬರ್ 30, 2026

*ಸುಂಟಿಕೊಪ್ಪದಲ್ಲಿ ಅ.16ರಿಂದ 18ರವರೆಗೆ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ*

ಸೆಪ್ಟೆಂಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.