
ಮಡಿಕೇರಿ ಜು.3 NEWS DESK : ಯೂರೋಪ್ನಲ್ಲಿ ಜು.8 ರಿಂದ 20ರ ವರೆಗೆ ನಡೆಯಲಿರುವ ಹಾಕಿ ಪಂದ್ಯಾವಳಿಯಲ್ಲಿ ಭಾರತ ಎ ಹಾಕಿ ತಂಡವೂ ಪಾಲ್ಗೊಳ್ಳುತ್ತಿದ್ದು, ತಂಡದಲ್ಲಿ ಕೊಡಗಿನವರಾದ ಯುವ ಆಟಗಾರ ಚಂದೂರ ಬಿ.ಪೂವಣ್ಣ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಪೂವಣ್ಣ ಅವರೊಂದಿಗೆ ರಾಜ್ಯದ ಇಬ್ಬರು ಆಟಗಾರರಾದ ಹೆಚ್.ಎಸ್.ಮೋಹಿತ್ ಹಾಗೂ ಮೊಹಮದ್ ರಹೀಲ್ ಸ್ಥಾನ ಪಡೆದಿದ್ದಾರೆ. ಪೂವಣ್ಣ ಕಂಡಂಗಾಲದ ನಿವಾಸಿ ಚಂದೂರ ಎಸ್.ಪ್ರಭು (ಬಾಬಿ) ಹಾಗೂ ಅನಿಲ (ತಾಮನೆ ಮಲ್ಲೇಂಗಡ) ದಂಪತಿಯ ಪುತ್ರ. 20 ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಹರಿಯಾಣದ ಸಂಜಯ್ ತಂಡವನ್ನು ಮುನ್ನಡೆಸಲಿದ್ದಾರೆ. ಉದಯೋನ್ಮುಖ ಆಟಗಾರರ ತಮಡ ಇದಾಗಿದ್ದು, ಭಾರತ ಪ್ರಾನ್ಸ್, ಐರ್ಲೆಂಡ್, ನೆದರ್ಲೇಂಡ್ ವಿರುದ್ಧ ತಲಾ 2 ಮತ್ತು ಇಂಗ್ಲೆಂಡ್ ಹಾಗೂ ಬೆಲ್ಜಿಯಂನೊಂದಿಗೆ ತಲಾ 1 ಪಂದ್ಯವನ್ನಾಡಲಿದೆ. ಭಾರತ ರಾಷ್ಟ್ರೀಯ ತಂಡದ ಸಹಾಯಕ ಕೋಚ್ ಶಿವೇಂದ್ರ ಸಿಂಗ್ ಈ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಂಡ ಜು.5 ರಂದು ತೆರಳಲಿದೆ. ಆರು ರಾಷ್ಟ್ರಗಳು ಭಾಗವಹಿಸಲಿದೆ.









