
ಸೋಮವಾರಪೇಟೆ ಜು.3 NEWS DESK : ಕಾಡಾನೆ ಭತ್ತದ ಗದ್ದೆಗೆ ನುಗ್ಗಿ ಕೃಷಿ ಫಸಲು ನಾಶಗೊಳಿಸಿರುವ ಘಟನೆ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕುಟ್ಟಪ್ಪ ಎಂಬುವರರ ಭತ್ತ ಸಸಿಮಡಿಯನ್ನು ಕಾಡಾನೆಗಳು ತಿಂದು ತುಳಿದು ನಾಶಪಡಿಸಿವೆ. ಭತ್ತ ನಾಟಿಗೆ ಗದ್ದೆಭೂಮಿಯನ್ನು ಉತ್ತು ಹದಪಡಿಸಲಾಗಿತ್ತು. ಅಂದೇ ಕಾಡಾನೆಗಳು ಸಸಿಯನ್ನು ತಿಂದು ನಷ್ಟ ಪಡಿಸಿದೆ.









