ಮಡಿಕೇರಿ ಜ.20 : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಸೋಮವಾರಪೇಟೆ ತಾಲ್ಲೂಕಿನ ಕೂಡ್ಲೂರು ಗ್ರಾಮದ ಗೋಪಾಲ ಅವರಿಗೆ ಉದ್ಯಮಶೀಲತಾ ಯೋಜನೆಯಡಿ ನಿಗಮದಿಂದ 3.50 ಲಕ್ಷ ರೂ.ಸಹಾಯಧನದಡಿ ಪಿಕ್ ಅಪ್ ವಾಹನವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಾಹನದ ಕೀ ನೀಡುವ ಮೂಲಕ ಹಸ್ತಾಂತರಿಸಿದರು.
ನಿಗಮದ ವ್ಯವಸ್ಥಾಪಕರಾದ ಎನ್.ಬಿ.ಚಂದ್ರಶೇಖರ್, ಬಸವನಹಳ್ಳಿ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷರಾದ ಆರ್.ಕೆ.ಚಂದ್ರು, ಇತರರು ಇದ್ದರು.







