ಬೆಂಗಳೂರು ಜ.2 : ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ. ತಂಬಂಡ ವಿಜಯ್ ಪೂಣಚ್ಚ ಬರೆದಿರುವ ಮೂರು ಇತಿಹಾಸ ಪುಸ್ತಕಗಳನ್ನ ಆದಿ ಚುಂಚನಗಿರಿ
ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ಬೆಂಗಳೂರಿನ ಅರಮನೆ ರಸ್ತೆಯಯಲ್ಲಿರುವ ಕೊಂಡಜ್ಜಿ ಬಸಪ್ಪ ಸದಾನಂದ ಗೌಡ ಸಭಾಂಗಣದಲ್ಲಿ ಪುಸ್ತಕಗಳನ್ನ
ಬಿಡುಗಡೆಗೊಳಿಸಲಾಯಿಯಿತು. ಮಾಜಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ತೇಜಸ್ವಿ ಸೂರ್ಯ, ಚಾಣಕ್ಯ ವಿವಿ ಸಂಶೋಧಕ ಪ್ರೊ. ಮತ್ತಿಘಟ್ಟ ಎಸ್. ಚೈತ್ರ, ಹಂಪಿ ಕನ್ನಡ ವಿವಿ ಕುಲಪತಿ ಸ.ಚಿ. ರಮೇಶ್
ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಾ.ತಂಬಂಡ ವಿಜಯ್ ಪೂಣಚ್ಚ ಅವರ ರಾಜೇಂದ್ರ ನಾಮೆ ಮರು ಓದು, ಅಮರ ಸುಳ್ಯ ಸಂಗ್ರಾಮ 1837 ಮತ್ತು ಕಾಡು ಮಕ್ಕಳ ಕೂಗು ಪುಸ್ತಕಗಳನ್ನು ಗಣ್ಯರ ಅನಾವರಣಗೊಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬಹಳಷ್ಟು ಸಂದರ್ಭಗಳಲ್ಲಿ ಇತಿಹಾಸವನ್ನು ರಾಜಕೀಯ ಕರಪತ್ರಗಳಂತೆ ರಚಿಸಲಾಗಿದ್ದು, ಇತಿಹಾಸ ದರ್ಶನ ಮತ್ತು ಮರು ದರ್ಶನ ಅಗತ್ಯವಿದೆ
ಎಂದು ಅಭಿಪ್ರಾಯಪಟ್ಟುರು.
ಇದೇ ಸಂದರ್ಭ ಮಾತನಾಡಿದ ಸದಾನಂದ ಗೌಡ, ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕವೂ ನಾವು ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಸ್ಮರಿಸಿಕೊಳ್ಳುತ್ತಿರುವುದು ದುರಂತ
ಎಂದು ವಿಷಾದಿಸಿದರು.
ಸಮಾರಭದಲ್ಲಿ ಇತಿಹಾಸ ತಜ್ಞ ಡಾ.ತಂಬಂಡ ವಿಜಯ್ ಪೂಣಚ್ಚ ದಂಪತಿಯನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿ ಸನ್ಮಾನಿಸಿದರು.