ನಾಪೋಕ್ಲು ಜ.2 : ಬಲ್ಲಮಾವಟಿ ಗ್ರಾ.ಪಂ ವತಿಯಿಂದ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಅಂತರ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ನೆಲಜಿ ಫಾರ್ಮರ್ಸ್ ಕ್ಲಬ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿಯ ಅಪೋಲೋ ತಂಡದ ವಿರುದ್ಧ ಆಟವಾಡಿದ ನೆಲಜಿ ಫಾರ್ಮರ್ಸ್ ಕ್ಲಬ್ ತಂಡವು 2-1 ಅಂತರದಿಂದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಹಾಕಿ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಕಾಫಿ ಬೆಳೆಗಾರ ಮೂವೇರ ನಾಣಪ್ಪ ನೀಡಿದ ಟ್ರೋಫಿ ಹಾಗೂ ಮುಕ್ಕಾಟಿರ ವಿಠಲ ಕರಂಬಯ್ಯ ನೀಡಿದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ದ್ವಿತೀಯ ಸ್ಥಾನ ಪಡೆದ ಅಪೊಲೋ ಬಲ್ಲಮಾವಟಿ ತಂಡಕ್ಕೆ ಎಸ್ ಎಲ್ ಎನ್ ಸಂಸ್ಥೆಯ ಸಂತೋಷ್ ಬಾಬು ಹಾಗೂ ಸಂದೀಪ್ ಬಾಬು ನೀಡಿದ ಟ್ರೋಫಿ ಹಾಗೂ ದೊಡ್ಡ ಪುಲಿಕೋಟುವಿನ ಪೆಬ್ಬೆಟ್ಟಿರ ಯತೀಶ್ ನೀಡಿದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ವಿವಿಧ ಗ್ರಾಮಗಳ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಧೆಯಲ್ಲಿ ನೆಲಜಿ ಎ ತಂಡವು ಪ್ರಶಸ್ತಿ ಗಳಿಸಿತು. ಇವರಿಗೆ ಮಂಡಿರ ಜಯದೇವಯ್ಯ ನೀಡಿದ ಟ್ರೋಫಿಯನ್ನು ಹಾಗೂ ಅಪ್ಪಚೆಟ್ಟೋಳಂಡ ಶ್ಯಾಂ ಕರುಂಬಯ್ಯ ನೀಡಿದ ನಗದು ಬಹುಮಾನವನ್ನು ನೀಡಲಾಯಿತು.
ಪೇರೂರು ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಈ ತಂಡಕ್ಕೆ ಆಶಾರಾವ್ ನೀಡಿದ ಟ್ರೋಫಿ ಹಾಗೂ ದೊಡ್ಡ ಪುಲಿಕೋಟುವಿನ ಮುಕ್ಕಾಟಿರ ಎ. ಉಮೇಶ್ ನೀಡಿದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.
ಬಲ್ಲಮಾವಟಿ ಒಕ್ಕೂಟದ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಂತೆ ಮೇಳವನ್ನು ಆಯೋಜಿಸಲಾಗಿತ್ತು.ಸಂತೆಮೇಳವನ್ನು ಬಲ್ಲಮಾವಟಿ ಗ್ರಾ.ಪಂ ಯ ನೂತನ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಉದ್ಘಾಟಿಸಿದರು.
ಬಲ್ಲಮಾವಟಿ ಗ್ರಾ.ಪಂ ಯ ನೂತನ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಉಪಾಧ್ಯಕ್ಷೆ ದೀನಾ ಮಾಯಮ್ಮ, ತಾ.ಪಂ ಇಒ ಶೇಖರ್ ಗ್ರಾ. ಪಂ ಸದಸ್ಯ ಮಚ್ಚುರ ರವೀಂದ್ರ, ರಾಜೀವಿ, ಗ್ರಾಮೀಣ ಕ್ರೀಡಾಕೂಟದ ಅಧ್ಯಕ್ಷ ಬಾಬಿ ಭೀಮಯ್ಯ ಪಿಡಿಒ ಶರತ್ ಪೂಣಚ್ಚ, ಟ್ರೋಫಿ ದಾನಿಗಳಾದ ಮೂವೇರ ಸಿ.ನಾಣಪ್ಪ, ಮಂಡಿರ ಜಯದೇವಯ್ಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಹಾಕಿ ಪಂದ್ಯಾವಳಿಯ ತೀರ್ಪುಗಾರರಾಗಿ ಹಾಕಿ ಕೂರ್ಗ್ ತೀರ್ಪುಗಾರರಾದ ಕರವಂಡ ಅಪ್ಪಣ್ಣ, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ಡಿಲನ್ ಬೋಪಣ್ಣ ಹಾಗೂ ಚೆಯ್ಯಂಡ ಅಪ್ಪಚ್ಚು ಕಾರ್ಯ ನಿರ್ವಹಿಸಿದರು.
ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ:ಕ್ರೀಡಾಪಟು ಕೋಟೆರ ಬೋಪಣ್ಣ
ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ: ಬಾಳೆಯಡ ವಿನಿಲ್ ಮಂದಣ್ಣ
ಟೂರ್ನಿಯ ಉತ್ತಮ ಆಟಗಾರ:ನೆರವಂಡ ನಾಚಪ್ಪ.
ವರದಿ : ದುಗ್ಗಳ ಸದಾನಂದ