ಮಡಿಕೇರಿ ಜ.2 : ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಅನನ್ಯ ಸೇವೆಗಾಗಿ ಮೈಸೂರು ಹಾಗೂ ಹಾಸನ ಬ್ಯುರೊ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ “ಕಾವೇರಿ ಕರ್ನಾಟಕ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾವೇರಿ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಅಕಾಡೆಮಿ ಈ ಪ್ರಶಸ್ತಿ ಕೊಡಮಾಡುತ್ತಿದೆ.
ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಗಲೇ ಮೈಸೂರಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ವಿದ್ಯಾನಿಧಿ ಪ್ರಶಸ್ತಿ, ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದ 10 ಪ್ರಶಸ್ತಿ, ಯುಜಿಸಿಯಿಂದ ಚಿನ್ನದ ಪದಕ ಪಡೆದಿದ್ದಾರೆ. ಇಲ್ಲಿಯವರೆಗೆ 31 ಕೃತಿಗಳನ್ನು ಬರೆದಿದ್ದಾರೆ.