ಸುಂಟಿಕೊಪ್ಪ ಜ.2 : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಮಾದರಿ ತಯಾರಿಕೆ ಹಾಗೂ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಸಂತ ಕ್ಲಾರ ಕಾನ್ವೆಂಟಿನ ಸಿಸ್ಟರ್ ನಿರ್ಮಲ, ಸಂತ ಅಂತೋಣಿ ಶಾಲೆಯ ಸಹಶಿಕ್ಷಕಿ ಯಿವಾಬೆನ್ಸಿಸ್ ಹಾಗೂ ಪ್ರೀತಿ ಉದ್ಘಾಟಿಸಿದರು.
ಮಕ್ಕಳಿಗೆ ವಿಜ್ಞಾನದ ಕುರಿತು ಆರಿವು ಮೂಡಿಸುವ ಮತ್ತು ಜ್ಞಾನವನ್ನು ವೃದ್ಧಿಸುವ ದಿಸೆಯಲ್ಲಿ ಮಕ್ಕಳೇ ತಯಾರಿಸಿರುವ ವಿಜ್ಞಾನ ಮಾದರಿಗಳನ್ನು ಅದರ ಬಗ್ಗೆ ನಿಕಾರ ಮಾಹಿತಿಯನ್ನು ಒದಗಿಸುವ ಸ್ಪರ್ಧೇಯನ್ನು ಆಯೋಜಿಸಲಾಗಿತ್ತು.
ಶಾಲೆಯ ವಿದ್ಯಾರ್ಥಿಗಳು ಹುರುಪಿನಿಂದ ವಿಜ್ಞಾನದ ಮಾದರಿಗಳನ್ನು ಹನಿನೀರು, ವಿದ್ಯುತ್ ತಯಾರಿಕ ಸ್ಥಾವರಗಳು, ಕೃಷಿ, ಆರೋಗ್ಯ, ಹವಾಮಾನ ಸಂಬಂಧಿಸಿದ ಮಾದರಿಗಳನ್ನು ತಯಾರಿಸಿ ತಂದಿದ್ದು, ಇದರಿಂದ ಭೂಮಿಗೆ ದೊರುಕುವ ಪ್ರಯೋಜನಗಳ ಬಗ್ಗೆ ವಿವರಣೆಯನ್ನು ನೀಡುವ ಮೂಲಕ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.