ಮಡಿಕೇರಿ ಜ.3 : ವಿಕಲಚೇತನರ ರಿಯಾಯಿತಿ ದರದ ಬಸ್‍ಪಾಸ್‍ಗಳನ್ನು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ, ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ, 2022ನೇ ಸಾಲಿನಲ್ಲಿ ವಿತರಿಸಲಾಗಿರುವ ಮತ್ತು 2022 ರ ಡಿಸೆಂಬರ್, 31 ರವರೆಗೆ ಮಾನ್ಯತೆ ಇರುವ, ವಿಕಲಚೇತನರ ಪಾಸ್‍ಗಳನ್ನು 2023 ರ ಫೆಬ್ರವರಿ, 28 ರವರೆಗೆ ಮಾನ್ಯ ಮಾಡಲಾಗಿದೆ.
2022 ನೇ ಸಾಲಿನ ಪಾಸುಗಳ ನವೀಕರಣ ಮತ್ತು ನೂತನ ಪಾಸುಗಳನ್ನು 2022 ರ ಡಿಸೆಂಬರ್, 26 ರಿಂದ ವಿತರಿಸಲು ಅವಕಾಶ ಕಲ್ಪಿಸಿದ್ದು ಆನ್‍ಲೈನ್‍ನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
2023 ನೇ ಸಾಲಿನ ಪಾಸುಗಳ ನವೀಕರಣ ಮತ್ತು ನೂತನ ಪಾಸುಗಳಿಗೆ ರೂ.660 ಶುಲ್ಕ ನಿಗದಿಪಡಿಸಲಾಗಿದೆ. ಇದನ್ನು ನಗದಾಗಿ ಅಥವಾ ಡಿ.ಡಿ.ರೂಪದಲ್ಲಿ ಪಾವತಿಸಿ ವಿಕಲಚೇತನರ ರಿಯಾಯಿತಿ ದರದ ಬಸ್‍ಪಾಸ್‍ಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-295829ರಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.












