ಮಡಿಕೇರಿ ಜ.4 : ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜ.16 ರಿಂದ ಜ.18ರ ವರೆಗೆ ನಡೆಯಲಿರುವ ರಾಜ್ಯ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಜ.8 ರಂದು ಕೊಡಗು ತಂಡದ ಆಡಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅಂದು ಬೆಳಿಗ್ಗೆ 9.30ಕ್ಕೆ ಕುಶಾಲನಗರದ ಜ್ಞಾನಭಾರತಿ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪುರುಷ ಆಟಗಾರರು 85 ಕೆ.ಜಿ.ಒಳಗಿರಬೇಕು, ಮಹಿಳಾ ಆಟಗಾರರು 75 ಕೆ.ಜಿ.ಒಳಗಿರಬೇಕು, ಪುರುಷರು ಹಾಗೂ ಮಹಿಳೆಯರು ಕ್ರೀಡಾ ಸಮವಸ್ತ್ರದೊಂದಿಗೆ ಹಾಜರಾಗಬೇಕೆಂದು ಕೊಡಗು ಜಿಲ್ಲಾ ಆಮೇಚೂರ್ ಕಬಡ್ಡಿ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿ.ಎಸ್.ಮಧು : 9483825085, ಅವಿನಾಷ್ : 9036000141, ಮಣಿಕಂಠ : 9482863707 ಸಂಪರ್ಕಿಸಬಹುದಾಗಿದೆ.












