ನಾಪೋಕ್ಲು ಜ.5 : ಕಡಿಯತ್ತನಾಡು ಕೊಣಂಜಗೇರಿ ಗ್ರಾಮದ ಶ್ರೀ ಭದ್ರಕಾಳಿ, ಶ್ರೀ ಚಾಮುಂಡೇಶ್ವರಿ ಹಾಗೂ ಉಪದೇವತೆಗಳ ಪುನರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ದೇವಾಲಯದಲ್ಲಿ ನಡೆಯಿತು.
ಶ್ರೀ ಭದ್ರಕಾಳಿ ಚಾಮುಂಡೇಶ್ವರಿ ಹಾಗೂ ಉಪದೇವತೆಗಳ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಕೋತ್ಸವ ತಂತ್ರಿಗಳಾದ ವಿರಾಜಪೇಟೆಯ ಎ.ಜಿ.ಪಂಡರೀಶ (ಹರೀಶ್) ಅರಳಿತ್ತಾಯ ತಂತ್ರಿಗಳ ನೇತೃತ್ವದಲ್ಲಿ ಮುಖ್ಯ ಅರ್ಚಕ ಶ್ರೀನಿವಾಸ್ ಪೂಜಾ ಕಾರ್ಯ ನೆರವೇರಿಸಿಕೊಟ್ಟರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಧ್ವಜಾರೋಹಣ, ವಾಸ್ತು ಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಗಣ ಹೋಮ, ಬಿಂಬಶುದ್ಧಿ, ಕಲಶ ಮೃತ್ಯುಂಜಯ ಹೋಮ, ಅಧಿವಾಸ ಹೋಮಗಳು, ನಾಗ ಪ್ರತಿಷ್ಠೆ, ಆಶ್ಲೇಷ ಹೋಮ, ಆಶ್ಲೇಷ ಬಲಿ, ಚಂಡಿಕಾ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಗಣಪತಿ ಹೋಮ, ಚಾಮುಂಡಿ ಪ್ರತಿಷ್ಠಾ ಹೋಮ, ಚಾಮುಂಡಿ ಬಿಂಬ ಪ್ರತಿಷ್ಠೆ, ಕಲಶ ಮಂಡಲ ರಚನೆ, ಕಲಶ ಪ್ರತಿಷ್ಠೆ ಹಾಗೂ ಶಿಖರ ಪೂಜೆ, ಗಣಹೋಮ, ಪ್ರತಿಷ್ಠಾ ಹೋಮ, ಶಿಖರ ಪ್ರವಿಷ್ಟೆ, ಮಹಾಪೂಜೆ, ತೀರ್ಥಪ್ರಸಾದ, ಫಲಮಂತ್ರಾಕ್ಷತೆ ಜರುಗಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ನಿರಂತರ ಅನ್ನದಾನ ನಡೆಯಿತು.
ರೂ. 1.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದೇವಾಲಯದ ಪುನರ್ ಪ್ರತಿಷ್ಠಾಪನೆ. ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತು.
ಈ ಸಂದರ್ಭ ದೇವಾಲಯದ ದೇವತಕ್ಕ ಮಂದತಂಡ ಚೆಟ್ಟಿಚ್ಚ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮೈಂದಪಂಡ ಕುಮಾರ್ ನಾಣಯ್ಯ, ಕಾರ್ಯದರ್ಶಿ ಚಾವಂಡ ಮದನ್ ಈರಪ್ಪ, ಖಜಾಂಚಿ ಬಲ್ಯತಂಡ ಭರತ್ ಭೀಮಯ್ಯ ಸೇರಿದಂತೆ ತಕ್ಕ ಮುಖ್ಯಸ್ಥರು ವಿವಿಧ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಅಲ್ಲದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಹೈಕೋರ್ಟ್ ವಕೀಲ ಕೆ.ಎಸ್ ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ, ಕೋಡಿರ ಪ್ರಸನ್ನ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ— ದುಗ್ಗಳ ಸದಾನಂದ.