ಮಡಿಕೇರಿ ಜ.5 : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು( ಕಸಾಪ ) ವತಿಯಿಂದ ಫೆ.3 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಕುಶಾಲನಗರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.
ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಕವಿಗಳಿಂದ ಮಾತ್ರ ಕವನಗಳನ್ನು ಆಹ್ವಾನಿಸಲಾಗಿದೆ. ಕವಿಗೋಷ್ಢಿಯಲ್ಲಿ ಯುವ ಉದಯೋನ್ಮುಖ ಹಾಗೂ ಹೊಸ ಪ್ರತಿಭೆ ಮತ್ತು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕವಿಗೋಷ್ಠಿಯ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ವ ರಚಿತ ಕವಿತೆಗಳು 15 ರಿಂದ 20 ಸಾಲುಗಳ ಮಿತಿಯಲ್ಲಿದ್ದು, ಕವನ ವಾಚನಕ್ಕೆ ಮೂರು ನಿಮಿಷಗಳ ಕಾಲಮಿತಿ ನಿಗದಿಪಡಿಸಲಾಗಿದೆ.
ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನದ ಮೂಲ ಪ್ರತಿಯನ್ನು ಜನವರಿ 12 ರ ಒಳಗಾಗಿ ಈ ಕೆಳಗಿನ
ವಿಳಾಸಕ್ಕೆ ಕಳಿಸಬೇಕು ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ : ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚಂದ್ರಶ್ರೀ ಕಾಂಪ್ಲೆಕ್ಸ್ , ಸೋಮೇಶ್ವರ ದೇವಸ್ಥಾನದ ಎದುರು, ಕೂಡಿಗೆ ರಸ್ತೆ, ಕುಶಾಲನಗರ: ಕವಿಗೋಷ್ಠಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಸಂಪರ್ಕ ಸಂಖ್ಯೆಗಳು : ಲೀಲಾಕುಮಾರಿ ತೊಡಿಕಾನ,ಉಪನ್ಯಾಸಕರು,ಮೊ: 9449284365, ಟಿ.ಬಿ.ಮಂಜುನಾಥ್, ಶಿಕ್ಷಕರು,ಮೊ: 9916652337 , ಬಿ.ಬಿ.ಹೇಮಲತಾ, ಶಿಕ್ಷಕಿ, ಮೊ: 9008737314. ಕವನಗಳನ್ನು ವಾಟ್ಸಪ್ ಮೂಲಕ ಜ.12 ರ ಒಳಗಾಗಿ ಈ ಮೇಲ್ಕಂಡವರ ಮೊಬೈಲ್ ಸಂಖ್ಯೆಗೆ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.
ಜ.12 ರ ನಂತರ ಬರುವ ಕವನಗಳನ್ನು ಕವಿಗೋಷ್ಠಿಗೆ ಪರಿಗಣಿಸಲಾಗುವುದಿಲ್ಲ.