ಮಡಿಕೇರಿ ಜ.7 : ತಮಿಳು ಯೂತ್ ಫೆಡರೇಶನ್ ಕೊಡಗು ಘಟಕದಿಂದ ತಮಿಳು ಸಮುದಾಯ ಬಾಂಧವರಿಗಾಗಿ ಫೆ.18 ಮತ್ತು 19ರಂದು ಜಿಲ್ಲಾ ಮಟ್ಟದ 6ನೇ ವರ್ಷದ ಕಾವೇರಿ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ಚೆಟ್ಟಳ್ಳಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು, ಫೆ.18ರಂದು ಕ್ರಿಕೆಟ್ ಪಂದ್ಯಾವಳಿ ಆರಂಭಗೊಳ್ಳಲಿದೆ. ಫೆ.19ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಉಚಿತ ಆರೋಗ್ಯ ತಪಾಸಣೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ, ಯುವಕರಿಗೆ, ಯುವತಿಯರಿಗೆ, ಮಹಿಳೆಯರಿಗೆ ಹಾಗೂ ವೃದ್ಧರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
ಪುಟಾಣಿ ಮಕ್ಕಳ ಹಗ್ಗಜಗ್ಗಾಟ ಸ್ಪರ್ಧೆ ಜರುಗಲಿದ್ದು, ಮಧ್ಯಾಹ್ನದ ನಂತರ ಸಾಂಸ್ಕೃತಿಕ ಉದ್ಘಾಟನೆಗೊಳ್ಳಲಿದ್ದು, ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಗೀತಗಾಯನ ಸ್ಪರ್ಧೆ ಹಾಗೂ ವಿವಿಧ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ಗಮನ ಸೆಳೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಸಮುದಾಯ ಬಾಂಧವರನ್ನು ಸನ್ಮಾನಿಸಲಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಹಂತಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.
ಕ್ರಿಕೆಟ್ ಪಂದ್ಯಾಟವು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಆಡಲಿಚ್ಚಿಸುವ ತಂಡಗಳು ಫೆ.10 ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರಿಕೆಟ್ ಪಂದ್ಯಾವಳಿಯೂ ಸೂಪರ್ 8 ಮಾದರಿಯಲ್ಲಿ (8+1) ನಡೆಯಲಿದೆ.
ಹಗ್ಗಜಗ್ಗಾಟ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಯಾವುದೇ ಶುಲ್ಕ ಪಾವತಿಸದೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.
2020-21, 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಹಂತಗಳಲ್ಲಿ ಶೇ.70 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿ, ಪಾಸ್ಪೋರ್ಟ್ ಅಳತೆಯ ಫೋಟೋ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿವರವನ್ನು ವಾಟ್ಸ್‍ಆಪ್ ನಂಬರ್ 9945103012 ಅಥವಾ kodagutamilyouthfederation@gmail.com ಗೆ ಈಮೇಲ್ ಕಳುಹಿಸಿಸಬಹುದಾಗಿದೆ.
ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರ. ಕಾರ್ಯದರ್ಶಿ ಮೋಹನ್ ರಾಜ್ : +919108255266 /+919945103012 ಕಾರ್ಯಕ್ರಮ ಸಂಚಾಲಕ, ಶಶಿ ಕುಮಾರ್ ಬಜೆಗೊಲ್ಲಿ : +919686961203 ಕ್ರೀಡಾಸಂಚಾಲಕ ಮಂಜು ಬೆಟ್ಟದಕಾಡು : +919535284904 ಸಂಘಟನಾ ಕಾರ್ಯದರ್ಶಿ ವಿಘ್ನೇಶ್ : +918277021535. ಉಪಾಧ್ಯಕ್ಷ ಕದಿರೇಶ್ : +9199809 89584, ಖಜಾಂಚಿ ಸುರೇಶ್ : +919741935471, ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ನಾನಾ ಕಡೆಗಳಲ್ಲಿ ನೆಲೆಸಿರುವ ಸಮುದಾಯ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ತಮಿಳ್ ಯೂತ್ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.