ಮಡಿಕೇರಿ ಜ.9 : ಹೃದಯಾಘಾತದಿಂದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಕುಶಾಲನಗರದ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.
ಮಂಜಾಚಾರಿ ಎಂಬುವವರ ಪುತ್ರ ಕೊಪ್ಪದ ಭಾರತಮಾತಾ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೀರ್ತನ್ (12) ಮೃತ ದುರ್ದೈವಿ. ಈತನ ತಂದೆ ಇದೇ ಶಾಲೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶನಿವಾರ ರಾತ್ರಿ ನಿದ್ರಿಸುತ್ತಿದ್ದ ಕೀರ್ತನ್ ಎರಡು ಬಾರಿ ಕಿರುಚಿಕೊಂಡಿದ್ದು, ಪೋಷಕರು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಹೃದಯಾಘಾತದಿಂದ ಬಾಲಕ ಮೃತಪಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ ಮೂಡಿದೆ.













