ಮಡಿಕೇರಿ ಜ.9 : ಮಾನವ ಕಲ್ಯಾಣಕ್ಕಾಗಿ ಅನೇಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ, ‘ಲಜ್ಞಾ ಇಮಾಇಲ್ಲಾ’ ಎಂಬ ಹೆಸರಿನಿಂದ ಕರೆಯಲ್ಪಡುವ ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಮಹಿಳಾ ಘಟಕ 100 ವರ್ಷ ಪೂರ್ಣಗೊಂಡು ಶತಾಮನೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
“ಲಜ್ನಾ ಇಮಾಇಲ್ಲಾ’ ಅಧ್ಯಕ್ಷೆ ರೂಮಾನ್ ರಿಜ್ವಾನ್ ನೇತೃತ್ವದಲ್ಲಿ ಕಾಟಕೇರಿಯ ಹರ್‌ಮಂದಿರ್ ಗುರುಕುಲ ಮಾದರಿ ಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿಯ ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಡೆದ ಶಿಬಿರ ನಡೆಯಿತು.
5 ವರ್ಷದಿಂದ 10 ವರ್ಷದೊಳಗಿನ 77 ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು. ತೊಂದರೆ ಇದ್ದ ಮಕ್ಕಳಿಗೆ ಬೇಕಾದ ಔಷಧಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಶೋತ್ತಮ್, ಡಾ.ಅಪರ್ಣ ದತ್, ಡಾ.ಸುನಿತ, ಡಾ.ಆಶ್ಚರ್ಯ ಆರ್.ಪಾಟಿಲ್, ಡಾ.ಆಶ್ಚರ್ಯ ರಾಮಾನುಜನ್, ಡಾ.ಗಿರೀಶ್ ಬಿ.ಎಸ್, ಡಾ.ಅಫ್ರೀನ್, ಡಾ.ಮೆಲ್ವಿನ್, ಡಾ.ರವಿಚಂದ್ರನ್, ಡಾ.ನಳಿನಿ, ಶುಶ್ರೂಶಕ ಅಧಿಕಾರಿಗಳಾದ, ಡಿ.ಹೆಚ್. ಹರಿಣಾಕ್ಷಿ , ಎ.ನಳಿನಿ ಭಾಯಿ, ಎನ್.ಬಿ.ಭಾಗ್ಯಲಕ್ಷ್ಮಿ ಹಾಗೂ ಲ್ಯಾಬ್ ಟೆಕ್ನಿಶಿಯನ್, ಸಹಾಯಕರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಲಜ್ನಾ ಇಮಾಇಲ್ಲಾಹ್ ವಿಭಾಗದ ಸಮಿತಿ ಸದಸ್ಯರು, ಅಹ್ಮದಿಯಾ ಮುಸ್ಲಿಮ್ ಜಮಾತಿನ ಹಲವು ಸದಸ್ಯರು, ಹರ್‌ಮಂದಿರ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರ, ಶಿಕ್ಷಕಿಯರು, ಹಾಜರಿದ್ದರು.
ತಪಾಸಣೆ ಮಾಡಿದ ವ್ಯೆದ್ಯರು, ಶುಶ್ರೂಶಕಿಯರು ಹಾಗೂ ಇತರರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಧನ್ಯವಾದಗಳನ್ನು ಅರ್ಪಿಸಲಾಯಿತು.