ಸುಂಟಿಕೊಪ್ಪ,ಜ.8: ಮಾದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಟೇಟ್ ಆಫ್ ಇಂಡಿಯಾ ವತಿಯಿಂದ ಸಿ.ಎಸ್.ಆರ್. ಯೋಜನೆಯಡಿ ನೀಡಲಾದ ರೂ.4,45,000 ಲಕ್ಷದ ಸ್ಮಾರ್ಟ್ ಕ್ಲಾಸ್ ವಿಜ್ಞಾನ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ವಿಜ್ಞಾನ ಪ್ರಯೋಗಾಲಯ ಸಹಕಾರಿಯಾಗಲಿದ್ದು, ಅವರ ಭವಿಷ್ಯ ರೂಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಡುಗೆ ಅನನ್ಯವಾದದ್ದು. ವಿದ್ಯಾರ್ಥಿಗಳು ಇದನ್ನು ಸದುಪಯೋಗಿಸಿಕೊಂಡು ಉತ್ತಮ ಫಲಿತಾಂಶ, ಉನ್ನತ ಶಿಕ್ಷಣ ಪಡೆದು ಅರ್ಹ ಹುದ್ದೆ ಗಿಟ್ಟಿಸಿಕೊಂಡು ಪೋಷಕರಿಗೆ, ಸಮಾಜಕ್ಕೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಎಸ್‍ಬಿಐ ಅವರು ನೀಡಿದ ದೇಣಿಗೆಯಲ್ಲಿ ಶಾಲೆಗೆ ಸುಣ್ಣ ಬಣ್ಣ ಬಳಿಯಲು ಬಳಸಲಾಗಿದೆ ಎಂದು ಮುಖ್ಯ ಶಿಕ್ಷಕಿ ಶೋಭಾ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೋಬಿ ಜೋಸ್, ಸದಸ್ಯರಾದ ಆರ್.ಎಂ.ವರಿಗಿಲಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಕೊಡಗು ಜಿಲ್ಲಾ ಪ್ರಾಥಮಿಕ ಶಾಲೆಯ ನೌಕಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಮಾದಾಪುರ ಗ್ರಾ.ಪಂ.ಅಧ್ಯಕ್ಷೆ ನಿರೂಪ. ಉಪಾಧ್ಯಕ್ಷರಾದ ಜ್ಯೋತಿ, ಗ್ರಾ.ಪಂ.ಸದಸ್ಯರುಗಳಾದ ಪಿ.ಡಿ.ಅಂತೋಣಿ, ಗಿರೀಶ, ಎಸ್‍ಬಿಐನ ಪ್ರಾದೇಶಿಕ ಕಛೇರಿಯ ಅಧಿಕಾರಿಗಳು, ಪೋಷಕರು, ಮಾದಾಪುರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಅವರು ಸ್ವಾಗತಿಇ ವಂದಿಸಿದರು.