ನಾಪೋಕ್ಲು ಜ.9 : ಶ್ರದ್ಧಾ ಕೇಂದ್ರಗಳು ಸುಸ್ಥಿತಿಯಲ್ಲಿದ್ದರೆ ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗಲು ಸಾಧ್ಯ ಎಂದು ಶ್ರೀ ಭಗವತಿ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಕುಲ್ಲೇಟ್ಟಿರ ಗುರುವಪ್ಪ ಹೇಳಿದರು.
ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಭಗವತಿ ದೇವಸ್ಥಾನ ಅಭಿವೃದ್ಧಿ ಸಮಿತಿಯ (ಫಂಡಿನ) ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರು.
ದೇವಾಲಯಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಭಕ್ತರು ತಮ್ಮ ಕೈಲಾದ ಸಹಕಾರವನ್ನು ನೀಡುವುದರ ಮೂಲಕ ದೇವರನ್ನು ಸ್ಮರಿಸುವಂತಾಗಬೇಕೆಂದರು.
ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಕೆಲವೊಂದು ನಿರ್ಧಾರಗಳಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.
ಈ ಸಂದರ್ಭ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕ ಪೂಜೆ ಹಾಗೂ ಭ್ರಹ್ಮರಾಕ್ಷಸ ಗೆ ಹಾಲು ಪಾಯಸ ವಿಶೇಷ ಪೂಜಾ ವಿಧಿ ವಿಧಾನಗಳ ಸೇವೆ ನಡೆಯಿತು.
ಮಹಾಸಭೆಯಲ್ಲಿ ಉಪಾಧ್ಯಕ್ಷ ಬೊಪ್ಪಂಡ ಕುಶಾಲಪ್ಪ, ತಕ್ಕರಾದ ನಾಟೋಳಂಡ ಸಚಿನ್, ತಿರೋಡಿರ ಲಕ್ಷ್ಮಣ, ಕೇಲೇಟ್ಟಿರ ಮುತ್ತಪ್ಪ, ಕುಲ್ಲೇಟ್ಟಿರ ಶಂಕರಿ ಹಾಗೂ ಸಮಿತಿ ಸದಸ್ಯರು, ಊರಿನ ಮಾಜಿ, ಹಾಲಿ ಜನಪ್ರತಿನಿಧಿಗಳು ಹಾಗೂ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅಭಿವೃದ್ಧಿ ಸಮಿತಿಯ ಗೌರವ ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ ಸ್ವಾಗತಿಸಿ, ಕೇಲೇಟ್ಟಿರ ಬೆಲ್ಲು ನಾಣಯ್ಯ ಪ್ರಾರ್ಥಿಸಿದರು. ಶಿವಚಾಳಿಯಂಡ ಜಗದೀಶ್ ಆಡಳಿತ ಮಂಡಳಿ ವರದಿಯನ್ನು, ಅರೆಯಡ ಪ್ರಕಾಶ್ ಕಳೆದ ಮಾಹಸಭೆ ವರದಿಯನ್ನು ಹಾಗೂ ಅಜ್ಜೇಟ್ಟಿರ ಮುತ್ತಪ್ಪ ಲೆಕ್ಕಪತ್ರ ವರದಿಯನ್ನು ಸಭೆಯ ಮುಂದಿಟ್ಟರು. ಶಿವಚಾಳಿಯಂಡ ಸಹದೇವ ವಂದಿಸಿದರು.
ವರದಿ : ದುಗ್ಗಳ ಸದಾನಂದ.