ಮಡಿಕೇರಿ ಜ.9 : ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ವತಿಯಿಂದ ಮ್ಯಾನ್ಸ್ ಕಾಂಪೌಂಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಗವತಿ (ಎ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಭಗವತಿ (ಬಿ) ತಂಡ ರನ್ನರ್ಸ್ ಸ್ಥಾನ ಪಡೆದುಕೊಂಡಿತು.
ಪೆನಾಲ್ಟಿ ಶೂಟೌಟ್‍ನಲ್ಲಿ ಭಗವತಿ (ಎ) ತಂಡ, ಭಗವತಿ (ಬಿ) ತಂಡದ ವಿರುದ್ಧ 3-2 ಗೋಲುಗಳ ಅಂತರದಿಂದ ಅಂತಿಮ ಪಂದ್ಯದಲ್ಲಿ ಜಯಸಾಧಿಸಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಗವತಿ (ಬಿ) ತಂಡ ಸುಪ್ರಿಂ ವಿರುದ್ಧ 4-7 ಗೋಲುಗಳ ಗೆಲುವು ಸಾಧಿಸಿತು. ಸೆಮಿಫೈನಲ್‍ನಲ್ಲಿ ಭಗವತಿ (ಎ) ಅಂಬೇಡ್ಕರ್ ಎಫ್‍ಸಿ ವಿರುದ್ಧ 4-1 ಗೋಲುಗಳಿಂದ ಜಯಗಳಿಸಿತು.
ಭಗವತಿ (ಬಿ) ತಂಡ ಎಂಸಿಸಿ ವಿರುದ್ಧ 4-1 ಗೋಲುಗಳ ಜಯ ದಾಖಲಿಸಿತು. ಸೌಹಾರ್ದ ಪಂದ್ಯದಲ್ಲಿ ಪ್ರೆಸ್ ತಂಡ ಪೊಲೀಸ್ ತಂಡದ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿತು.
ಎಂಸಿಸಿ ಲೆಜೆಂಡ್ಸ್ ಹಾಗೂ ಪ್ರೆಸ್ ತಂಡದ ನಡುವಿನ ಪಂದ್ಯದಲ್ಲಿ 2-2 ಸಮಗೋಲುಗಳಾದ್ದರಿಂದ ಪೆನಾಲ್ಟಿ ಶೂಟೌಟ್‍ನಲ್ಲಿ ಎಂಸಿಸಿ ಲೆಜೆಂಡ್ಸ್ ಪ್ರೆಸ್ ತಂಡದ ವಿರುದ್ಧ 5-4 ಗೋಲುಗಳ ಗೆಲುವು ದಾಖಲಿಸಿತು.
ಉತ್ತಮ ಆಟಗಾರನಾಗಿ ಭಗವತಿ (ಎ) ತಂಡದ ಉನೈಸ್, ಟಾಪ್ ಸ್ಕೋರರ್ ಆಗಿ ಭಗವತಿ (ಎ) ತಂಡದ ಶರತ್ (ಕಣ್ಣ) ಗೋಲು ಉದಯೋನ್ಮುಖ ಆಟಗಾರನಾಗಿ ಭಗವತಿ (ಬಿ) ತಂಡದ ಗೋಲ್‍ಕೀಪರ್ ಸಿಜು, ಉತ್ತಮ ಗೋಲ್ ಕೀಪರ್ ಆಗಿ ಎಂಸಿಸಿ (ಬಿ) ತಂಡದ ಸಿದ್ಧಾರ್ಥ್, ಉತ್ತಮ ತಂಡವಾಗಿ ಎಂಸಿಸಿ (ಬಿ) ಹೊರಹೊಮ್ಮಿತು. ತೀರ್ಪುಗಾರರಾಗಿ ಇಸ್ಮಾಯಿಲ್ ಕಂಡಕರೆ ಕಾರ್ಯನಿರ್ವಹಿಸಿದರೆ, ಎಂ.ಸಿ.ತಂಡದ ಅಶೋಕ ವೀಕ್ಷಕ ವಿವರಣೆ ನೀಡಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*