ಕುಶಾಲನಗರ ಜ.10 : ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಿರ-ಚರ ಆಸ್ತಿಗಳ ದಾಖಲೆಗಳನ್ನು ಕುಶಾಲನಗರ ಪುರಸಭೆಗೆ ಹಸ್ತಾಂತರಿಸಲಾಯಿತು.
ಮುಳ್ಳುಸೋಗೆ ಗ್ರಾ.ಪಂ ಅಭಿವೃದ್ಧಿಅಧಿಕಾರಿ ಸುಮೇಶ್, ಸೋಮವಾರದಾಖಲೆ ಕಡತಗಳೊಂದಿಗೆ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯ್ಕ್‍ಅವರಿಗೆ ಹಸ್ತಾಂತರಿಸಿದರು.
ಹಸ್ತಾಂತರ ಸಂದರ್ಭತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿಜಯಣ್ಣ, ಸಹಾಯಕ ನಿರ್ದೇಶಕರವೀಶ್ ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.













