ನಾಪೋಕ್ಲು ಏ.21 NEWS DESK : ಯವಕಪಾಡಿ ಗ್ರಾಮ ಕಾಪಳ ಕಾಲೋನಿಯ ದೇವರ ವಾರ್ಷಿಕ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು. ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕಾಪಳ ಕಾಲೋನಿಯ ನಿವಾಸಿಗಳು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ಹಬ್ಬ ಶ್ರೀ ಕುಞಬೊಳುತ್ತು, ವಿಷ್ಣುಮೂರ್ತಿ, ಬೀರ, ಭದ್ರಕಾಳಿ ಹಾಗೂ ಚಟ್ಟಿ ಅಜ್ಜಪ್ಪ ಮತ್ತು ಪಡೇಬೀರ ದೇವರ ತೆರೆ ಮಹೋತ್ಸವ ಹಾಗೂ ಇನ್ನಿತರ ಆಚರಣೆಗಳನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಟಿ.ಧನು, ಕಾರ್ಯದರ್ಶಿ ಕೆ.ಟಿ.ತಮ್ಮಯ್ಯ, ಉಪ ಅಧ್ಯಕ್ಷ ಕೆ.ಎಂ.ಮಿಲನ್, ತಕ್ಕ ಮುಖ್ಯಸ್ಥರಾದ ಪೆÇನ್ನಪ್ಪ, ಕಾಳಪ್ಪ, ಚಂಗಪ್ಪ. ಜಾಮಿಯಪ್ಪ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.











