
ಮಡಿಕೇರಿ ಏ.21 NEWS DESK : ಭಾಗಮಂಡಲ ಹೋಬಳಿಯ ತಣ್ಣಿಮನಿ ಗ್ರಾಮಸ್ಥರು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಎ.ಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿ ತಣ್ಣಿಮನಿ ಭಾಗದ ರಸ್ತೆಯ ಅಭಿವೃದ್ಧಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು ತಣ್ಣಿಮನಿ ಭಾಗದ ಜನರ ಅಹವಾಲುಗಳನ್ನು ಆಲಿಸಿದರಲ್ಲದೆ, ಮುಂದಿನ ಅನುದಾನದಲ್ಲಿ ಆದಷ್ಟು ಶೀಘ್ರ ಕೋರಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.









