ವಿರಾಜಪೇಟೆ ಜ.10 : ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವಚಿಂತನ ಗೋಷ್ಠಿಯ 206ನೇ ಕಿರಣ ಕಾರ್ಯಕ್ರಮ ನಡೆಯಿತು.
ನಾಪೋಕ್ಲುವಿನ ಕಾಫಿ ಬೆಳೆಗಾರ ನೂರಾಂಬಾಡ್ ಎಸ್.ಉದಯಶಂಕರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಷ್ಟ್ರದ ಪ್ರಗತಿಯಲ್ಲಿ ಕೃಷಿಕರ ಪಾತ್ರ ಅತ್ಯಮೂಲ್ಯವಾದದ್ದು. ಆದರೂ ಸರಕಾರಗಳ ನೀತಿಗಳು ಕೃಷಿಕರ ಪರವಾಗಿಲ್ಲ. ಕೃಷಿಕರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ಕಾರ್ಪೋರೇಟ್ ದೊರೆಗಳನ್ನು ಅವಲಂಭಿಸಬೇಕಾಗಿ ಬಂದಿರುವುದು ಪ್ರಸಕ್ತ ಸ್ಥಿತಿ. ಆರ್ಥಿಕವಾಗಿ ದುಸ್ಥಿತಿ ಅನುಭವಿಸುತ್ತಿರುವ ಕೃಷಿಕರ ನೆರವಿಗೆ ಕಟ್ಟಕಡೆಯ ಆಶ್ರಯವಾದ ಬ್ಯಾಂಕ್‍ಗಳೂ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಡಿಕೇರಿಯ ಉದ್ಯಮಿ, ಕೃಷಿ ತಜ್ಞ “ಕಾಫಿ ಕೃಷಿ, ಅಂದು-ಇಂದು” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಜಿಲ್ಲೆಯ ಬೆಳೆಗಾರರು ಅಸಂಪ್ರದಾಯಿಕ ಬೆಳೆಯಿಂದಾಗಿ ನಿರಂತರ ಸೋಲನ್ನು ಅನುಭವಿಸುತ್ತಿದ್ದಾರೆ. ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡು ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ.
ವನ್ಯಜೀವಿಗಳ ಉಪಟಳದಿಂದಾಗಿ ಕಾಫೀ ಬೆಳೆಗಾರರು ಆತಂಕದ ಬದುಕನ್ನು ಸಾಗಿಸುತ್ತಿದ್ದಾರೆ. ಇದು ಉತ್ಪನ್ನಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ವಿದೇಶ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ಬೆಳೆಗಾರರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸುವಲ್ಲಿ ಬಹಳ ಹಿಂದೆ ಇದ್ದಾರೆ. ಆಧುನಿಕ ಕೃಷಿ ಪದ್ಧತಿಯಿಂದ ಇಳುವರಿ ಹೆಚ್ಚಿಸಲು ಸಾಧ್ಯ. ಕಾಫಿ ಬೆಳೆಗಾರರು ಆಂತರಿಕ ಮಾರುಕಟ್ಟೆಗೆ ಮತ್ತು ಉಪಯೋಗಕ್ಕೆ ಹೆಚ್ಚು ಆದ್ಯತೆ ನೀಡುವಂತಾಗಬೇಕು. ಕೃಷಿಕರು ಸಂಘಟಿತರಾಗುವುದೂ ಮುಖ್ಯ”ಎಂದರು.
ದಿವ್ಯ ಸಾನಿಧ್ಯ ವಹಿಸಿದ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು “ಶ್ರೀಮಂತಿಕೆ ಎಂಬುದಕ್ಕೆ ಹಣಕಾಸಿನ ಸಂಗ್ರಹ ಮಾನದಂಡವಲ್ಲ. ಹೃದಯದ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ. ಜೀವನದ ಕ್ರಮ ಹಾಗೂ ಕಲ್ಪನೆ ಬದಲಾಗಬೇಕಾದುದು ಮುಖ್ಯ. ಆರ್ಥಿಕ ಸ್ವಾವಲಂಭನೆ ಪರಸ್ಪರ ಹಂಚುವಿಕೆಯಿಂದ ಸಾಧ್ಯವಾಗಬೇಕು. ಕೃಷಿಯನ್ನು ಅವಲಂಭಿಸಿದವನು ಎಂದೂ ದರಿದ್ರನಾಗಿಲ್ಲ”ಎಂದರು.
ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹೊಂಬೆಳಕಿನ ರೂವಾರಿ ಪಕ್ಷಿ ಶಾಸ್ತ್ರಜ್ಞ ವಿರಾಜಪೇಟೆಯ ಡಾ||.ಎಸ್.ವಿ.ನರಸಿಂಹನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*