ಮಡಿಕೇರಿ ಜ.12 : ಮನೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಉರಗ ತಜ್ಞ ಪ್ರವೀಣ್ ರಕ್ಷಿಸಿದ್ದಾರೆ.
ಮಡಿಕೇರಿಯ ವಿದ್ಯಾನಗರದ ನಿವಾಸಿ ಸುಮ ಎಂಬವರ ಮನೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಸ್ನೇಕ್ ಪ್ರವೀಣ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪ್ರವೀಣ್ ನಾಗರಹಾವನ್ನು ಹಿಡಿದು ರಕ್ಷಿಸಿ ಅದನ್ನು ರಕ್ಷಿತಾರಣ್ಯಕ್ಕೆ ಬಿಟ್ಟರು.
ಹಾವುಗಳು ಕಂಡುಬಂದಲ್ಲಿ ಅವುಗಳಿಗೆ ಯಾವುದೇ ರೀತಿಯ ಹಿಂಸೆ ನೀಡದೆ 8197689934 ಸಂಖ್ಯೆಗೆ ಕರೆ ಮಾಡುವಂತೆ ಪ್ರವೀಣ್ ಮನವಿ ಮಾಡಿದರು.













