ಮಡಿಕೇರಿ ಜ.13 : ಸ್ವಾಮಿ ವಿವೇಕಾನಂದ ಜನಸೇವ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕ ಬಳಗದ ಮಡಿಕೇರಿ ತಾಲೂಕಿನ ಅಧ್ಯಕ್ಷರಾದ ಪದ್ಮಿನಿ ಮಾತನಾಡಿ, ವಿವೇಕಾನಂದರು ಬೆಳೆದು ಬಂದ ರೀತಿಯನ್ನು ವಿವರಿಸಿದರು. ಸ್ವಾಮಿ ವಿವೇಕಾನಂದರು ತಮ್ಮ ವಾಕ್‌ಚಾತುರ್ಯದಿಂದ ಯುವಕರನ್ನು ತಮ್ಮೆಡೆಗೆ ಸೆಳೆಯುತ್ತಿದ್ದರು. ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಪ್ರಸ್ತುತಪಡಿಸಿದ ಭಾಷಣವೇ ಇದಕ್ಕೆ ಸಾಕ್ಷಿ ಎಂದರು.
ಈ ಸಂದರ್ಭ ಸ್ವಾಮಿ ವಿವೇಕಾನಂದ ಜನಸೇವಾ ಸಂಘದ ಗೌರವಾಧ್ಯಕ್ಷ ಎಸ್.ಸಿ.ಮಂಜುನಾಥ್, ಅಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಪಿ.ಪಿ.ಪ್ರಸಾದ್, ಕಾರ್ಯದರ್ಶಿ ಎಚ್.ಎಲ್.ನಾರಾಯಣ್, ಖಜಾಂಜಿ ಸೋಮಶೇಖರ್, ಸದಸ್ಯರುಗಳಾದ ಪಿ.ಮಣಿ, ಎ.ಸಿ.ಲವ ಪ್ರಸಾದ್, ಎಸ್.ಎಂ.ಮೋಣ್ಣಪ್ಪ, ಬಿ.ಕೆ.ಬಾಲಕೃಷ್ಣ, ಮೀನಾಕ್ಷಿ ಹಾಗೂ ವಿವೇಕ ಬಳಗದ ಲೀಲಾ ಶೆಟ್ಟಿ, ಜ್ಯೋತಿ ಕುಮಾರಿ, ಪ್ರಭಾವತಿ, ಅಚ್ಚಮ್ಮ, ಅಶೋಕ ಶೆಟ್ಟಿ, ಭೋಜಮ್ಮ , ಪ್ರಭಾವತಿ, ಅಂಬಿಕಾ, ಅಶ್ವಿನಿ, ಚೇತನ್ ಹಾಗೂ ಇತರರು ಹಾಜರಿದ್ದರು. ಕಾರ್ಯಕ್ರಮವು ವಿವೇಕದ ಭಜನೆಯೊಂದಿಗೆ ಪ್ರಾರಂಭವಾಯಿತು.