Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*
  • *ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*
  • *ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*
  • *ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*
  • *ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*
  • *ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*
  • *ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*
  • *ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*
  • *ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*
  • *ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಮಾ.05:-ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪರಶುರಾಮ್ ಸಂಪತ್ ಕುಮಾರ್ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ನಗರದ ಹೊರವಲಯದಲ್ಲಿರುವ ದಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‍ನಲ್ಲಿ ಗುರುವಾರ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಮಾರ್ಚ್, 08 ರವರೆಗೆ ನಡೆಯುವ ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪ.ಸ.ಕುಮಾರ್ ಅವರು ಮುಂಬಯಿ ಅಲ್ಲಿರುವ ಜೆ.ಜೆ.ಚಿತ್ರಕಲೆ ಶಾಲೆಯ ಮಾದರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಕಲಾ ಗ್ಯಾಲರಿ’ ಆರಂಭಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಮಹಾರಾಷ್ಟ್ರದ ಜೆಜೆ ಟಾಟಾ ಕಲಾಶಾಲೆಯಲ್ಲಿ ಕಲಿತಿರುವ ಕಲಾವಿದರ ಭಾವಚಿತ್ರ ರಚನಾ ಕ್ರಮವನ್ನು ರಾಜ್ಯದಲ್ಲಿಯೂ ಸಹ ಅಳವಡಿಸುವಂತಾಗಬೇಕು ಎಂದು ಅವರು ಕೋರಿದರು.
ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಚಿತ್ರಕಲೆಗಳಲ್ಲಿ ಆಸಕ್ತರು ತೊಡಗಿಸಿಕೊಳ್ಳುವಂತಾಗಬೇಕು. ಇದರಿಂದ ಪ್ರಾಚೀನದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಚಿತ್ರಕಲೆಗಳ ಮೂಲಕ ತಿಳಿಸಲು ಸಹಕಾರಿಯಾಗಲಿದೆ ಎಂದು ಕುಮಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತೀ ಮನೆಯಲ್ಲಿ ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುವ ವಾತಾವರಣ ನಿರ್ಮಾಣ ಮಾಡಿ ಪ್ರೋತ್ಸಾಹಿಸುವಂತಾಗಬೇಕು. ಜತೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಬಗ್ಗೆ ಪಠ್ಯದ ರೂಪದಲ್ಲಿ ಕಲಿಸುವಂತಾಗಬೇಕು ಎಂದು ಕುಮಾರ ಅವರು ಸಲಹೆ ಮಾಡಿದರು.
ಮಾರ್ಚ್, 08 ರವರೆಗೆ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ ನಲ್ಲಿ ನಡೆಯುವ ಕಲಾಶಿಬಿರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.


ಪ್ರತಿಯೊಬ್ಬರ ಬದುಕಿನಲ್ಲಿ ಸಣ್ಣ ಅವಕಾಶಗಳು ಜೀವನದ ದಿಕ್ಕನ್ನೇ ಬದಲಿಸುತ್ತದೆ. ಆದ್ದರಿಂದ ಆಸಕ್ತ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಮುಂದೆ ಬರಲು ಪ್ರಯತ್ನಿಸಬೇಕು ಎಂದು ಪ.ಸ.ಕುಮಾರ ಅವರು ನುಡಿದರು.
ಚಿತ್ರಕಲೆಗಳನ್ನು ಗುರುತಿಸುವಂತಾಗಬೇಕು. ಒಂದೊಂದು ಚಿತ್ರಕಲೆಗೆ ಬೆಲೆ ಕಟ್ಟಲಾಗದು. ಆ ನಿಟ್ಟಿನಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲೆಯಲ್ಲಿ ಹೆಸರು ಮಾಡುವಂತಾಗಬೇಕು ಎಂದು ಕುಮಾರ ಅವರು ಹೇಳಿದರು.
ರೇಖೆಗಳು ಬಣ್ಣಗಳ ಪ್ರಯೋಗಾತ್ಮಕ ಕ್ರೀಯೆಯ ಜತೆ ಜತೆಗೆ ಅಕ್ಷರಗಳ ರೂಪದಲ್ಲಿ ಅನೇಕ ಕಾರ್ಯ ವಿಧಾನಗಳನ್ನು ಸುಗಮಗೊಳಿಸುತ್ತ ತನ್ನ ಇರುವಿಕೆಯನ್ನು ಚಿತ್ರಕಲೆಗಳು ಸ್ಪಷ್ಟ ಪಡಿಸುತ್ತಾ ಹೋಗುತ್ತವೆ ಎಂದು ಅಭಿಪ್ರಾಯಪಟ್ಟರು.
ಚಿತ್ರ ರೇಖೆಗಳು ಕಲಾ ಲೋಕದ, ಕಲಾವಿದರ ಭಾವಜೀವದ ಪ್ರತೀಕವಾಗಿದೆ. ಚಿತ್ರೆಯ ಬೇರುಗಳ ಆಳ ಅಗಲದ ಚಿಂತನ ಮಂಥನ ಜೊತೆಗೆ ರೇಖೆ ಹುಟ್ಟಿದ ಪರಿ, ಬಣ್ಣ ಲೇಪಿಸಿದ ಚಿತ್ರಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ. ಇದೊಂದು ಬೌದ್ಧಿಕ ವಿಕಸನದತ್ತ ಚಿತ್ರಗಳು ಸೆಳೆಯುತ್ತವೆ ಎಂದು ಕುಮಾರ್ ಅವರು ವಿವರಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು, ಇಂತಹ ಪ್ರದೇಶದಲ್ಲಿ ಕಲಾಶಿಬಿರ ಏರ್ಪಡಿಸಿರುವುದು ವಿಶೇಷವೇ ಸರಿ ಎಂದು ಹೇಳಿದರು.
ಚಿತ್ರಕಲಾ ಶಿಬಿರಕ್ಕೆ ಕೊಡಗು ಉತ್ತಮ ವಾತಾವರಣ ಇದ್ದು, ಇಲ್ಲಿನ ನದಿ, ತೊರೆ, ಹಳ್ಳ, ಕೊಳ್ಳ, ಜಲಪಾತಗಳು, ದೇವಾಲಯಗಳು, ಹೀಗೆ ಪ್ರತಿಯೊಂದನ್ನು ಚಿತ್ರಕಲೆಗಳ ಮೂಲಕ ಪ್ರಾಕೃತಿಕ ಸಂಪತ್ತು ಅನಾವರಣ ಮಾಡಬಹುದಾಗಿದೆ ಎಂದರು.
ಕೊಡಗು ಜಿಲ್ಲೆಯ ಹಬ್ಬಗಳು, ಕಲೆಗಳು ಮತ್ತು ಸಂಸ್ಕøತಿಯ ಬಗ್ಗೆ ಚಿತ್ರಕಲೆಗಳ ಮೂಲಕ ಬೆಳಕು ಚೆಲ್ಲಬಹುದಾಗಿದೆ ಎಂದರು.
ಭರತ ಖಂಡದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನತೆ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿದ್ದು, ಇಲ್ಲಿನ ಕಲೆ, ಸಂಸ್ಕøತಿ, ಸಂಪ್ರದಾಯಗಳು ವೈವಿದ್ಯಮಯವಾಗಿದ್ದು, ಚಿತ್ರಕಲೆ ಮೂಲಕ ಇಲ್ಲಿನ ಸಂಸ್ಕøತಿಯನ್ನು ಎಲ್ಲೆಡೆ ಪಸರಿಸಬಹುದಾಗಿದೆ ಎಂದು ಮಹೇಶ್ ನಾಚಯ್ಯ ಅವರು ವಿವರಿಸಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಚಿತ್ರಕಲಾವಿದರಾದ ಜಿ.ಎಸ್.ಭವಾನಿ ಅವರು ಮಾತನಾಡಿ ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುವಲ್ಲಿ ಚಿತ್ರಕಲೆಗಳು ಸಹಕಾರಿಯಾಗಿದೆ. ಇಲ್ಲಿನ ಮರಗಿಡಗಳು, ನದಿ, ತೊರೆಗಳು, ಜಲಪಾತಗಳು, ಬೆಟ್ಟಗುಡ್ಡಗಳು, ನೋಡುಗರನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಚಿತ್ರಕಲೆ ಮೂಲಕ ಅನಾವರಣಗೊಳಿಸುವಂತಾಗಬೇಕು ಎಂದರು.
ಚಿತ್ರಕಲೆಯು ಸಮಾಜದ ಕನ್ನಡಿಯಾಗಿದ್ದು, ಕಲೆಗೆ ಸಾಮಾಜಿಕ ಬದಲಾವಣೆ ತರುವ ಶಕ್ತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರಕಲೆ ತಮ್ಮ ಸ್ವಂತ ಅನಿಸಿಕೆ, ಅಭಿಪ್ರಾಯ, ಮನಸ್ಸಿನ ಆಳದ ನಗು ಮತ್ತು ನಲಿವುಗಳನ್ನು ಅಭಿವ್ಯಕ್ತಪಡಿಸುವ ಕಲೆಯಾಗಿದೆ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಮಾತನಾಡಿ ಚಿತ್ರಕಲೆಗಳು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದ್ದು, ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಹೇಳಿದರು.
ಒಂದು ಚಿತ್ರಕಲೆ ನೂರಾರು ಮಾಹಿತಿಯನ್ನು ಒಳಗೊಂಡಿದ್ದು, ಒಂದು ಚಿತ್ರಕಲೆಯೇ ಸಂಪೂರ್ಣ ವರದಿಯನ್ನು ನೀಡುತ್ತದೆ ಎಂದು ಅವರು ವಿವರಿಸಿದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತ ಅವರು ಮಾತನಾಡಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ವತಿಯಿಂದ ಮಹಿಳೆಯರಿಗಾಗಿಯೇ ರಾಷ್ಟ್ರೀಯ ಮಹಿಳಾ ಕಲಾಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮಹಿಳಾ ಕಲಾ ಶಿಬಿರದಲ್ಲಿ ಗೌರಿ ವಿಮುಲ(ಹೈದರಾಬಾದ್), ಹರ್ಷದ ಕೇರ್‍ಕರ್(ಗೋವಾ), ಜಿಜ್ಞಾಶಾ ಓ.ಜಾ(ಬರೋಡ), ಸ್ವಾತಿ ವಿ.ಸಬಲೆ(ಮುಂಬೈ), ಆರ್.ಉಷಾದೇವಿ(ತಮಿಳುನಾಡು), ಅರ್ಮ ಖಾನ್(ಧಾರಾವಾಡ), ಜೋಶೀಲಾ ಎಸ್.ವಿ(ಬೆಂಗಳೂರು), ಸರೋಜ ಮುಂಡೇವಾಡಿ(ಗದಗ), ಸಬ್ರಿನ್ ತಾಜ್(ದಾವಣಗೆರೆ), ಮೇಘ ಆರ್.(ಕಲಬುರಗಿ), ಸಂಧ್ಯಾರಾಣಿ ದೊಡ್ಡಮನಿ(ಬೆಳಗಾವಿ), ಸ್ಫೂರ್ತಿ(ಮಂಗಳೂರು), ದ್ರಾಕ್ಷಾಯಿಣಿ ಜಿ.ಇಮ್ನಾದ(ವಿಜಯಪುರ), ಪೂಜಾ ಎಚ್(ಬೆಂಗಳೂರು) ಮತ್ತು ಕಾವೇರಿ ಪೂಜಾರ್(ಬಾಗಲಕೋಟೆ), ಹೀಗೆ 14 ಕ್ಕೂ ಹೆಚ್ಚು ಮಂದಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಚಿತ್ರಕಲಾ ಶಿಬಿರದಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಕಲಾವಿದರಾದ ರೂಪೇಶ್ ನಾಣಯ್ಯ, ಬಾಬು ರಾವ್ ನಡೋಣಿ, ಮಣಜೂರು ಮಂಜುನಾಥ್ ಇತರರು ಇದ್ದರು. ಅಕಾಡೆಮಿ ಸದಸ್ಯ ಸಂಚಾಲಕರಾದ ಆಶಾರಾಣಿ ಬಿ.ನಡೋಣಿ ಅವರು ಸ್ವಾಗತಿಸಿದರು. ರಾಜೇಶ್ವರಿ ಎಂ.ಮೊಪಗಾರ ಅವರು ವಂದಿಸಿದರು. ರಾಷ್ಟ್ರೀಯ ಮಹಿಳಾ ಕಲಾಶಿಬಿರದಲ್ಲಿ ಮಂಜು ಮತ್ತು ತಂಡದವರಿಂದ ವೀರಗಾಸೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ವೆಂಕಟೇಶ್ ನಿರೂಪಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*

ಮಾರ್ಚ್ 5, 2026

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026

*ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*

ಮಾರ್ಚ್ 5, 2026

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾಚ್೯ 05 – ನಗರದ ಶ್ರೀ ಕೋದಂಡ ರಾಮದೇವಾಲಯ ಸಮಿತಿ ವತಿಯಿಂದ ಮಾಚ್೯ 28 ರಂದು ಶನಿವಾರ ಆಯೋಜಿತ…

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026

*ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*

ಮಾರ್ಚ್ 5, 2026

*ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*

ಮಾರ್ಚ್ 5, 2026

*ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*

ಮಾರ್ಚ್ 5, 2026

*ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*

ಮಾರ್ಚ್ 5, 2026

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.