ಮಡಿಕೇರಿ ಜ.14 : ಕೊಡಗು ಆಮ್ ಆದ್ಮಿ ಪಕ್ಷದ ಸಭೆಯು ಸೋಮವಾರಪೇಟೆಯಲ್ಲಿ ನಡೆಯಿತು.
ಸೋಮವಾರಪೇಟೆಯ ಐಬಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಪಕ್ಷದ ಸಿದ್ದತೆ ಬಗ್ಗೆ ಚರ್ಚೆ ನಡೆಯಿತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಸಲಹೆಯನ್ನು ಮುಖಂಡರುಗಳಾದ ಶಶಿಧರ್, ಬೆಳ್ಳಿಯಪ್ಪ ಮುಂದಿಟ್ಟರು.
ಇದೇ ಸಂದರ್ಭ ನೂತನ ಕಾರ್ಯಕರ್ತರನ್ನುಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಎಎಪಿ ಪಕ್ಷ ಚುನಾವಣೆಗೆ ಸಿದ್ಧವಾಗಿದ್ದು, ಜಿಲ್ಲೆಯಲ್ಲೂ ತನ್ನ ಬಲವನ್ನು ವೃದ್ಧಿಸಿಕೊಳ್ಳಲಿದೆ ಎಂದು ಗ್ರಾಮ ಸಂಪರ್ಕ ಅಭಿಯಾನದ ಅಧ್ಯಕ್ಷರು ಎಂ.ಕೆ. ಅಪ್ಪಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಧ್ಯಮ ಉಸ್ತುವಾರಿ ಭೋಜಣ್ಣ, ಸೋಮಯ್ಯ ಹಾಜರಿದ್ದರು.