ಮಡಿಕೇರಿ, NEWS DESK ನ.26: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹಾಗೂ ಕುಟುಂಬದ ಸದಸ್ಯರು ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವಿಹಾರಾರ್ಥವಾಗಿ ಮಡಿಕೇರಿಗೆ ಆಗಮಿಸಿರುವ ಸುರೇಶ್ ರೈನಾ ಕುಟುಂಬ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದೆ. ಗುರುವಾರ ಸುರೇಶ್ ರೈನಾ ಅವರು ಪತ್ನಿ ಪ್ರಿಯಾಂಕ ಚೌಧರಿ, ಪುತ್ರಿ ಗ್ರೇಶಿಯಾ ರೈನಾ ಹಾಗೂ ಪುತ್ರ ರಿಯೋ ರೈನಾ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿ ಕುಟುಂಬದ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಉಪಸ್ಥಿತರಿದ್ದರು.


































