ಕುಶಾಲನಗರ ಜ.14 : ಕೂಡಿಗೆ ಸೈನಿಕ ಶಾಲೆಯಲ್ಲಿ 2022-23 ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ವಾಲಿಬಾಲ್ ಕ್ರೀಡಾಕೂಟ ನಡೆಯಿತು.
4 ದಿನಗಳ ಕಾಲ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದ ಉದ್ಘಾಟನೆಯನ್ನು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್ ನೆರವೇರಿಸಿದರು.
ಕ್ರೀಡಾಕೂಟದಲಿ ್ಲಉತ್ತರ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಪೂರ್ವ ವಲಯ ಮತ್ತು ಮಧ್ಯ ವಲಯದ ಸೈನಿಕ ಶಾಲಾ ತಂಡಗಳು ಭಾಗವಹಿಸಿದ್ದವು.
ಕ್ರೀಡಾಕೂಟದಲ್ಲಿ ಛತ್ತೀಸ್‍ಗಡದ ಅಂಬಿಕಾಪುರ ಸೈನಿಕ ಶಾಲೆ ಪ್ರಥಮ ಸ್ಥಾನವನ್ನು ಪಡೆಯಿತು. ದ್ವಿತೀಯ ಬಂಗಾಳ ರಾಜ್ಯದ ಪುರ್ಲಿಯಾ ಸೈನಿಕ ಶಾಲೆಯ ಪಾಲಾಗಿದೆ.ಛತ್ತೀಸ್‍ಗಡ ಸೈನಿಕ ಶಾಲೆಯಕ್ರೀಡಾಪಟು ಶಶಾಂಕ್‍ಅತ್ಯುತ್ತಮಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.ಸಮಾರೋಪ ಸಮಾರಂಭದಲ್ಲಿಕೊಡಗು ವೃತ್ತದ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ನಿರಂಜನ್ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಈ ಸಂದರ್ಭ ಉಪ ಪ್ರಾಂಶುಪಾಲರಾದ ಲೆ. ಕ.ಅಜಿತ್ ಸಿಂಗ್, ಹಿರಿಯ ಶಿಕ್ಷಕರಾದ ಗೋವಿಂದರಾಜ, ಕ್ರೀಡಾ ವಿಭಾಗದ ಮೇಲ್ವಿಚಾರಕರಾದ ಜಿ.ಕೆ.ಮಂಜಪ್ಪ, ದೈಹಿಕ ಶಿಕ್ಷಕರಾದ ಎಂ. ರನೀಶ್, ಎಂ. ಸ್ಟಾಲಿನ್ ಮತ್ತಿತರರು ಇದ್ದರು.















