ಕುಶಾಲನಗರ ಜ.14 : ಫಾತೀಮಾ ಕಾನ್ವೆಂಟ್ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕಾನ್ವೆಂಟ್ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬವಾಗಿದೆ. ಇದನ್ನು ಸುಗ್ಗಿ ಹಬ್ಬವೆಂದು ಸಹ ಕರೆಯಲಾಗುತ್ತದೆ. ಎಳ್ಳಿನಂತೆ ಶುದ್ದ ಜೀವನ ವಿರಲಿ ಬೆಲ್ಲದಂತೆ ಸವಿಬಾಳು ನಮ್ಮದಾಗಲಿ ಎಂದು ಎಳ್ಳು, ಬೆಲ್ಲ, ನೆಲಗಡಲೆ, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡುವುದರ ಮೂಲಕ ಎಲ್ಲಾ ಮಕ್ಕಳು ತಮ್ಮಆಪ್ತರಿಗೆ ಹಾಗೂ ನೆರೆಹೊರೆಯವರಿಗೆ ವಿಶೇಷ ಸಿಹಿಯನ್ನು ಹಂಚಿ ಸಂಭ್ರಮಿಸುತ್ತಾರೆ. ಮಕರ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿದೆ ಎಂದರು.
ನಂತರ ವಿದ್ಯಾರ್ಥಿಗಳು ಎಳ್ಳು ಬೆಲ್ಲಹಂಚಿಕೊಂಡು ಮಕರ ಸಂಕ್ರಮಣದ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಫಾತೀಮಾ ಕಾನ್ವೆಂಟ್ ಶಾಲೆಯ ಡಾ. ಸಿಸ್ಟರ್ ಜೆಸ್ವಿನಾ, ಸಿಸ್ಟರ್ ತೆರೇಸ್ ಹಾಗೂ ಶಾಲಾ ಆಡಳಿತ ಮಂಡಳಿಯವರು ಮತ್ತು ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.















