ವೀರಾಜಪೇಟೆ ಜ.15 : ಸಮಾಜವು ವೈದ್ಯರ ಸೇವೆಯು ದೇವರ ಸೇವೆ ಎಂದು ನಂಬಿ ಕೊಂಡು ಸಾಗುತ್ತಿದೆ. ಸಮಾಜಕ್ಕೆ ಉತ್ತಮ ಸೇವೆ ಕಲ್ಪಿಸುವುದು ಸಾಮಾನ್ಯ ವೈದ್ಯನ ಬಹುಮುಖ್ಯ ಕರ್ತವ್ಯವಾಗಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಯಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ಅಭಿಪ್ರಾಯಪಟ್ಟರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ವಿರಾಜಪೇಟೆ. ಅಂತಿಮ ವರ್ಷ ಪೂರೈಸಿದ ವಿಧ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ವಿತರಿಸಿ ಮಾತನಾಡಿದ ಡಾ. ರಮೇಶ್ ಅವರು ವಿದ್ಯಾರ್ಥಿ ಜೀವನದಲ್ಲಿ ಪದವಿ ಪಡೆದುಕೊಳ್ಳುವ ಸುದಿನವು ಸಮಾಜಿಕ ಜೀವನದ ಮೈಲಿಗಲ್ಲು.
ಈ ನಿಟ್ಟಿನಲ್ಲಿ ಕೊಡಗು ದಂತ ಮಹಾವಿದ್ಯಾಲಯ ಗುರುಕುಲದ ಮಾದರಿಯಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ಒದಗಿಸಿದೆ. ವೈದ್ಯನಾದವನು ರೋಗಿಗಳನ್ನು ಹಸನ್ಮುಖಿಯಾಗಿ ನಗುಮುಖದೊಂದಿಗೆ ಸ್ವಾಗತಿಸಬೇಕು ಹಾಗೂ ರೋಗಿಯ ಚಿಕಿತ್ಸಾವಿಧಿಗಳನ್ನು ಅನುಸರಿಸಬೇಕು.
ಬೃಹತ್ ಸಮಾಜವು ನಮಗೆ ಹಲವು ಉತ್ತಮ ವ್ಯಾವಹಾರಿಕ,ಆರೋಗ್ಯಕರ, ಹಿತವಾದ ಸ್ವಸ್ಥ ಪ್ರಾಕೃತಿಕ ಜಗತನ್ನು ಕಲ್ಪಿಸಿದೆ. ಇಂತಹ ಸಮಾಜಕ್ಕೆ ದ್ರೋಹಬಗೆಯದೆ ಉತ್ತಮ ಸೇವೆಯನ್ನು ನೀಡುವುದರೊಂದಿಗೆ ತಮ್ಮ ಗೌರವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಬೇಕು. ಗಳಿಕೆ ಇಂದಿನ ಜೀವನಶೈಲಿಗೆ ಬಹುಮುಖ್ಯ ಅದರೇ ಹಣ ಮಾಡುವ ಉದ್ದೇಶ ಹೊರತುಪಡಿಸಿದೆ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜದೊಂದಿಗೆ ಬೆರೆಯಬೇಕು. ಐದು ವರ್ಷಗಳ ಕಾಲ ಕಲಿತ ವಿಧ್ಯೆಗೆ ಅಪಚ್ಯುತಿ ಬಾರದದ ರೀತಿಯಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಪದವಿ ಸ್ವೀಕರಿಸಿದ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ ಹೊಂದಾಣಿಕೆ ಮತ್ತು ಅಳವಡಿಕೆ ಜೀವನದ ಪರಿಪಾಠವಾಗಬೇಕು. ಸಮಾಜದೊಂದಿಗೆ ಅಥಾವ ವೈಧ್ಯರ ಬಳಿ ಬರುವ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರೆಯುವುದು ಪ್ರಸ್ತುತ ಕಾಲಗಟ್ಟಕ್ಕೆ ಅಗತ್ಯವಾಗಿದೆ. ಭವಿಷ್ಯದ ವೈಧ್ಯರುಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಿ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಸಮಾರಂಭದ ವೇದಿಕೆಯಲ್ಲಿ 50 ಮಂದಿ ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಪತ್ರ ಮತ್ತು 35 ವಿಧ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ವಿತರಿಸಲಾಯಿತು. ಡಾ.ಸುನೀಲ್ ಮುದ್ದಯ್ಯ ಅವರು ಸ್ನಾತಕೋತ್ತರ ವಿಧ್ಯಾರ್ಥಿಗಳಿಗಾಗಿ ಮೀಸಲಿಟ್ಟ ಚಿನ್ನದ ಪದಕವನ್ನು ಡಾ. ಆಲೆಮೆಂಗಡ ಶಾನ್ವಿ ಪೊನ್ನಮ್ಮ ಅವರು ಪಡೆದುಕೊಂಡರು. ಕಂಜಿತಂಡಎಂ.ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಜೆ. ಜಯಲಕ್ಷ್ಮೀ ತನ್ನದಾಗಿಸಿಕೊಂಡರು. ಎಲ್ಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಮೀಸಲಿಟ್ಟ ಕೆ.ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಕಂಜಿತಂಡಕುಶಾಲಪ್ಪ ಮುದ್ದಯ್ಯ ಅವರು ಪಡೆದುಕೊಂಡರು.
ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ಸಾದನೆಗೈದ ವಿಧ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.
ಕೊಡಗು ದಂತ ವೈಧ್ಯಕೀಯ ಮಾಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ.ಜಿತೇಶ್ ಜೈನ್ ಅವರು ಪದವಿ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. ಬಳಿಕ ವಿಧ್ಯಾರ್ಥಿಗಳಿಂದ ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೊಡಗು ದಂತ ವೈಧ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಶಿಧರ್ ಮತ್ತು ಡಾ. ಶಾಂತಲ ಬಿ.ಎಂ ಅವರು ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಶಿಧರ್. ವಿದ್ಯಾರ್ಥಿಗಳಾದ ಪ್ರತೀಕ್ಷಾ ಮತ್ತು ಕುಂಕುಮ್ ನಾಣಯ್ಯ ನಿರೂಪಣೆ ಮಾಡಿದರು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಂಕುಮ್ ನಾಣಯ್ಯ ಸರ್ವರನ್ನು ವಂದಿಸಿದರು.