Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*
  • *ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*
  • *ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
  • *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
  • *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
  • *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
  • *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಾ.9 ರಂದು ರೆಡ್ ಕ್ರಾಸ್ ನಿಂದ ಕ್ಯಾನ್ಸರ್ ತಪಾಸಣಾ ಶಿಬಿರ : ಮಹಿಳಾ ದಿನಾಚರಣೆ ಅಂಗವಾಗಿ ವೈವಿಧ್ಯಮಯ ಕಾಯ೯ಕ್ರಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಾ.9 ರಂದು ರೆಡ್ ಕ್ರಾಸ್ ನಿಂದ ಕ್ಯಾನ್ಸರ್ ತಪಾಸಣಾ ಶಿಬಿರ : ಮಹಿಳಾ ದಿನಾಚರಣೆ ಅಂಗವಾಗಿ ವೈವಿಧ್ಯಮಯ ಕಾಯ೯ಕ್ರಮ*

ಮಾರ್ಚ್ 6, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK  ಮಾ.6 :  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ಮಾ.9 ರಂದು ಸೋಮವಾರ ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದೆ. ವೈವಿಧ್ಯಮಯ ಕಾಯ೯ಕ್ರಮಗಳೊಂದಿಗೆ ಮಹಿಳಾ ದಿನಾಚರಣೆಯ ಸಂಭ್ರಮಾಚರಣೆ ಜರುಗಲಿದೆ ಎಂದು ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ರವಿಂದ್ರರೈ, ಮಾ.9 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ, ಮತ್ತು ಮಹಿಳಾ ದಿನಾಚರಣೆಯನ್ನು ರೆಡ್ ಕ್ರಾಸ್ ಜಿಲ್ಲಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಉದ್ಘಾಟಿಸಲಿದ್ದಾರೆ.  ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವಯ೯ ಆಶಯ ಭಾಷಣ ಮಾಡಲಿದ್ದಾರೆ.  ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಬಿಂದುಮಣಿ, ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ರಾಷ್ಟ್ರಪ್ರಶಸ್ತಿ ಪಡೆದ ಕೊಟ್ಟುಕೊತ್ತೀರ ಯಶೋಧ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆಯ ಉಪನಿದೇ೯ಶಕ ಪ್ರಸನ್ನ ಕುಮಾರ್   ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.  ಮಡಿಕೇರಿ ತಾಲೂಕಿನ ಅಂಗನವಾಡಿಗಳ 15  ಕಾಯ೯ಕತೆ೯ಯರು, ಸಹಾಯಕಿಯರಿಗೆ ಈ ಸಂದಭ೯ ಸನ್ಮಾನದ ಮೂಲಕ ಗೌರವಿಸಲಾಗುತ್ತದೆ ಎಂದೂ ರವೀಂದ್ರ ರೈ ಹೇಳಿದರು. ಮಹಿಳಾ ದಿನಾಚರಣೆ ಸಂದಭ೯ ಆಯೋಜಿತ ವಿಚಾರಗೋಷ್ಟಿಗಳ ಬಗ್ಗೆ ಮಾಹಿತಿ ನೀಡಿದ ರೆಡ್ ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಹೆಚ್.ಟಿ, ಉದ್ಘಾಟನಾ  ಸಮಾರಂಭದ ಬಳಿಕ ಆಯೋಜಿತ  ವಿಚಾರಗೋಷ್ಟಿಯಲ್ಲಿ  ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿದೇ೯ಶಕಿ ಮಿಲನಾ ಭರತ್  ಅವಳ ಕನಸುಗಳಿಗೊಂದು ರೆಕ್ಕೆ ಕೊಡಿ ವಿಚಾರದ ಬಗ್ಗೆ, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮುಖ್ ಅವರು  ಆರೋಗ್ಯದ ಕಡೆ ಗಮನವಿರಲಿ ವಿಚಾರದ ಬಗ್ಗೆ, ವೀರಾಜಪೇಟೆಯ ಯುವವಕೀಲರಾದ ಸಿಂಧೂರ ಎನ್ ಸ್ವಾಮಿ ಅವರು ಕಾನೂನು ನಿಮಗೂ ಗೊತ್ತಿರಲಿ ವಿಷಯದ ಬಗ್ಗೆ ಮತ್ತು ಮಡಿಕೇರಿಯ ಶಿಲ್ಪಾರೈ ಯೋಘ   ಧ್ಯಾನ ಮತ್ತು ಶಾಂತತೆ ಸಂಬಂಧಿತ ವಿಚಾರದ ಬಗ್ಗೆ ಹಾಗೂ ಕೊಡಗು ವೈದ್ಯಕೀಯ  ವಿಜ್ಞಾನಗಳ ಸಂಸ್ಥೆಯ ಪ್ರಸೂತಿ ತಜ್ಞೆ ಡಾ.ಬಿ.ಕೆ. ರಾಜೇಶ್ವರಿ ನವೀನ್ ಅವರು  ಗಭ೯ಕಂಠ ಕ್ಯಾನ್ಸರ್ ಜಾಗ್ರತಿ ಸಂಬಂಧಿತ  ಮಾತನಾಡಲಿದ್ದಾರೆ. ವಿಚಾರಗೋಷ್ಟಿಯ ನಡುವೇ ವೈವಿಧ್ಯಮಯ ಸಾಂಸ್ಕೖತಿಕ ಕಾಯ೯ಕ್ರಮಗಳೂ ಆಯೋಜಿತವಾಗಿದೆ ಎಂದು ತಿಳಿಸಿದರು. ರೆಡ್ ಕ್ರಾಸ್ ಜಿಲ್ಲಾ ಖಜಾಂಜಿ ಪ್ರಸಾದ್ ಗೌಡ ಮಾಹಿತಿ ನೀಡಿ, ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರದಂದು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉಚಿತವಾಗಿ ರೆಡ್ ಬ್ರಿಕ್ಸ್ ಇನ್ ನಲ್ಲಿ ಆಯೋಜಿಸಲಾಗಿದೆ. ತಜ್ಞ ವೈದ್ಯರು ತಪಾಸಣೆಯನ್ನು ನಡೆಸಲಿದ್ದಾರೆ. 14 ವಷ೯ ಮೇಲ್ಪಟ್ಟವರಲ್ಲಿ ಗಭ೯ಕಂಠ ಕ್ಯಾನ್ಸರ್ ಸಂಂಖ್ಯೆ ಹೆಚ್ಚಾಗುತ್ತಿದ್ದು ಕೇಂದ್ರ ಸಕಾ೯ರವೂ ಈ ನಿಟ್ಟಿನಲ್ಲಿ ಉಚಿತ ಲಸಿಕೆ ಆಂದೋಲನ ಜಾರಿಗೊಳಿಸಿದೆ. ಆಂದೋಲನದ ಮೂಲಕ ಗಭ೯ಕಂಠ ಕ್ಯಾನ್ಸರ್ ಪ್ರಮಾಣವನ್ನು ಶೇ. 95 ರಷ್ಟು ಇಳಿಸುವ ಗುರಿಯಿದೆ ಎಂದರು. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯೂ ಗಭ೯ಕಂಠ ಕ್ಯಾನ್ರರ್ ಮಾಹಿತಿ ಮತ್ತು ಜಾಗ್ರತಿಗೆ ಮಹಿಳಾ ದಿನಾಚರಣೆಯಂದು ಆದ್ಯತೆ ನೀಡಿದೆ ಎಂದೂ ಪ್ರಸಾದ್ ಗೌಡ ಮಾಹಿತಿ ನೀಡಿದರು. ರೆಡ್ ಕ್ರಾಸ್ ಜಿಲ್ಲಾ ಪ್ರಧಾನ ಕಾಯ೯ದಶಿ೯ ಎಂ.ಧನಂಜಯ್ ಮಾತನಾಡಿ, ರೆಡ್ ಕ್ರಾಸ್ ಜಿಲ್ಲೆಯಾದ್ಯಂತಲಿನ 22 ಕಾಲೇಜುಗಳಲ್ಲಿ ಯೂತ್ ರೆಡ್ ಕ್ರಾಸ್ ಹೊಂದಿದ್ದು, ವಿದ್ಯಾಥಿ೯ಗಳಿಗೆ ಪ್ರಥಮ ಚಿಕಿತ್ಸೆ ಮಾಹಿತಿ, ರಕ್ತದಾನ ಶಿಬಿರ, ತುತು೯ ಪರಿಸ್ಥಿತಿ ನಿವ೯ಹಣೆ ಸೇರಿದಂತೆ ಹಲವಾರು ಮಹತ್ವದ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯೂತ್ ರೆಡ್ ಕ್ರಾಸ್ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದೂ ಧನಂಜಯ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರೆಡ್ ಕ್ರಾಸ್ ನಿದೇ೯ಶಕ ಕೆ.ಟಿ. ಉತ್ತಯ್ಯ ಉಪಸ್ಥಿತರಿದ್ದರು.
ಕೊಡಗಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯು 1952 ರಲ್ಲಿಯೇ ಪ್ರಾರಂಭವಾಗಿತ್ತು, ಸಾಕಷ್ಟು ಸಾಮಾಜಿಕ ಸೇವಾ ಕಾಯ೯ಗಳನ್ನು ಕೈಗೊಂಡಿರುವ ರೆಡ್ ಕ್ರಾಸ್ ಕೋವಿಡ್ ಲಾಕ್ ಡೌನ್ ಸಂದಭ೯, ಭೂಕುಸಿತದ ದಿನಗಳಲ್ಲಿಯೂ ಅಗತ್ಯವುಳ್ಳವರಿಗೆ ಸಾಕಷ್ಟು ನೆರವು ನೀಡಿದೆ.  ಮಳೆಗಾಲದಲ್ಲಿ ಮಡಿಕೇರಿಯಲ್ಲಿ 2022 ರಲ್ಲಿ ನಿಮಾ೯ಣಗೊಂಡ ರೆಡ್ ಕ್ರಾಸ್ ಭವನದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗುತ್ತದೆ. ಶ್ವರಣ ದೋಷವುಳ್ಳವರಿಗೆ ಯಂತ್ರದ ನೆರವು, ಅಗತ್ಯವುಳ್ಳವವಿಗೆ ಕಿಟ್ ನೀಡಿಕೆಯೂ ರೆಡ್ ಕ್ರಾಸ್ ವತಿಯಿಂದ  ಆಗಿದೆ.  ರಾಜ್ಯದಲ್ಲಿಯೇ ಕೊಡಗು ರೆಡ್ ಕ್ರಾಸ್ ಸಂಸ್ಥೆಯು ಸಕ್ರಿಯ ಚಟುವಟಿಕೆಗಳಿಗಾಗಿ ಪ್ರಥಮ ಸ್ಥಾನ ಪಡೆದಿದ್ದು ರಾಜ್ಯಪಾಲರಿಂದ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. (ಬಿ.ಕೆ.ರವೀಂದ್ರ ರೈ. ಸಬಾಪತಿ, ರೆಡ್ ಕ್ರಾಸ್ ಕೊಡಗು ಘಟಕ) 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.26 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ…

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*

ಆಗಷ್ಟ್ 26, 2026

*ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 2026

*ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*

ಆಗಷ್ಟ್ 26, 2026

*ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*

ಆಗಷ್ಟ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.