ಮಡಿಕೇರಿ ಜ.16 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ , ಎನ್.ಎಸ್.ಎಸ್ ಘಟಕ , ರಾಜ್ಯಶಾಸ್ತ್ರ ವಿಭಾಗ ಹಾಗೂ ಉಡುಪಿ ಡಿವೈನ್ ಪಾರ್ಕ್ ಟ್ರಸ್ಟ್ , ವಿವೇಕ ಜಾಗೃತ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ‘ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ‘ ರಾಷ್ಟ್ರೀಯ ಯುವ ದಿನ ‘ ಹಾಗೂ ‘ ಯುವ ಸಪ್ತಾಹದ ‘ಪ್ರಯುಕ್ತ ವಿದ್ಯಾರ್ಥಿಗಳಿಗೆ ‘ಕಿವಿಮಾತು’ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ
ತುಮಕೂರಿನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನಿವೃತ್ತ ಉಪನ್ಯಾಸಕರು ಹಾಗೂ
ಡಿವೈನ್ ಪಾರ್ಕ್ ಟ್ರಸ್ಟನ H2 ಅಧಿಕಾರಿ ಪದ್ಮಲತಾ ರಾವ್ ಮಾತನಾಡಿ, ” ದೇಶ ಭಕ್ತ ಸಂತ
ಎಂದು ಹೆಮ್ಮೆಯಿಂದ ಕರೆಸಿ ಕೊಳ್ಳುವ ಸ್ವಾಮಿ ವಿವೇಕಾನಂದರ ಜೀವನ , ಆದರ್ಶಗಳು , ಯುವ ಜನಾಂಗದ ಬೆಳವಣಿಗೆ, ವಿದ್ಯಾರ್ಥಿಗಳ ಕಲಿಕೆ, ಏಕಾಗ್ರತೆ, ವೈಚಾರಿಕತೆಗಳಿಗೆ ವಿವೇಕವಾಣಿ, ವಿವೇಕ ಸಂದೇಶಗಳ ಅಳವಡಿಕೆ,
ಅಖಂಡ ಭಾರತೀಯತೆಗೆ ಭಾರತೀಯ ವಿವೇಕಾನಂದರ ಕೊಡುಗೆಗಳ ಕುರಿತಂತೆ ವಿವರಿಸಿದರು.
ವಿರಾಜಪೇಟೆ ‘ವಿವೇಕ ಜಾಗೃತ ಬಳಗ’ ಅಧ್ಯಕ್ಷರಾದ ಶಶಿಕಲಾ ಭಾಸ್ಕರ್ ಡಿವೈನ್ ಪಾರ್ಕ್ ಸಂಸ್ಥೆಯ ವಿವಿಧ ಕಾರ್ಯ ಚಟುವಟಿಕೆಗಳು ಹಾಗೂ ವಿವೇಕಾನಂದರ ಕುರಿತಾದ ವಿವಿಧ ಬರವಣಿಗೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ IQAC ಸಂಚಾಲಕ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಎಂ.ಸುನಿತಾ, ನಮ್ಮ ದೈನಂದಿನ ಸಾಮಾಜಿಕ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ವಿವೇಕಾನಂದರ ತತ್ವಗಳನ್ನು ಆದರ್ಶಗಳನ್ನು ವಹಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಎನ್.ಎಸ್.ಎಸ್ . ಯೋಜನಾಧಿಕಾರಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಬಿ.ದಿವ್ಯ, ವಿಭಾಗದ ಉಪನ್ಯಾಸಕರಾದ .ವನೀತ್ ಕುಮಾರ್ ಹಾಜರಿದ್ದರು.
ಕಾರ್ಯಕ್ರಮವನ್ನು ವನೀತ್ ಕುಮಾರ್ ಸ್ವಾಗತಿಸಿ , ಎಂ.ಬಿ.ದಿವ್ಯ ವಂದಿಸಿದರು.