ನಾಪೋಕ್ಲು ಜ.17 : ಮಳೆಯಿಂದಾಗಿ ಕಾಫಿನಷ್ಟಕ್ಕೊಳಗಾದ ಕೊಡಗು ಜಿಲ್ಲೆಯ 47 ಸಾವಿರ ಬೆಳೆಗಾರರಿಗೆ 138 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ಹೇಳಿದರು.
ಸಮೀಪದ ಶಾಲಿಮಾರು ಮಿಲ್-ಕೂರುಳಿಯಲ್ಲಿ 2.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಪರಿಹಾರ ದೊರಕದ ಬೆಳೆಗಾರರಿಗೆ ಪರಿಹಾರ ವಿತರಿಸಲೆಂದು ಹೆಚ್ಚುವರಿ ಆರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಬೆಳೆಗಾರರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹದಗೆಟ್ಟ ಗ್ರಾಮೀಣ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು. ಬಿಜೆಪಿ ಸರ್ಕಾರದ ವತಿಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಧರ್ಮಕ್ಕೆ ಕುತ್ತು ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಆ ಬಗ್ಗೆ ಜಾಗೃತಿ ಆಗಿರಬೇಕಾಗಿದೆ. ಮಳೆಹಾನಿ ಪರಿಹಾರದಡಿಯಲ್ಲಿ ಹಲವು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಳೆಹಾನಿ ಪರಿಹಾರದಡಿ 1.25 ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ನಾಪೋಕ್ಲು ವ್ಯಾಪ್ತಿಯ ಗ್ರಾಮೀಣ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು. ಇದಲ್ಲದೆ ಲೋಕೋಪಯೋಗಿ ಇಲಾಖೆ ವತಿಯಿಂದಲೂ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು
ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಚೆರಿಯ ಪರಂಬು ರಸ್ತೆ, ಕಲ್ಲು ಮೊಟ್ಟೆ ರಸ್ತೆ, ಅಜ್ಜಿ ಮುಟ್ಟ ರಸ್ತೆ, ಅಜ್ಜಿ ಮುಟ್ಟ -ಕೂರುಳಿ ಸಂಪರ್ಕ ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಅಧಿಕಾರ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಡಿಕೇರಿ ತಾಲೂಕು ಬಿ.ಜೆ.ಪಿ. ಕೃಷಿ ಮೋರ್ಚಾ ಅಧ್ಯಕ್ಷ ಶಿವಾಚಾಳಿಯಂಡ ಜಗದೀಶ್, ಮಡಿಕೇರಿ ತಾಲೂಕು ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ನಾಪೋಕ್ಲು ಶಕ್ತಿ ಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಎಮ್ಮೆಮಾಡು ಶಕ್ತಿ ಕೇಂದ್ರದ ಪ್ರಮುಖ ಚಂಬಾರಂಡ ಮಾಹಿಣೆ, ಪಂಚಾಯತಿ ಮಾಜಿ ಅಧ್ಯಕ್ಷ ಆಲಿಕುಟ್ಟಿ, ಪ್ರಮುಖರಾದ ಕು0ಡಿಯೋಳಂಡ ರಮೇಶ್ ಮುದ್ದಯ್ಯ, ಚಂಡಿರ ಜಗದೀಶ್, ಮೂವೇರ ರಘು, ಅಪ್ಪಾಜಿ, ಜಫ್ರಿ, ಗ್ರಾ.ಪಂಚಾಯತಿ ಸದಸ್ಯ ಬಿ.ಎಂ ಪ್ರತಿಪ, ಕೇಟೋಳಿರ ಹರೀಶ್ ಪೂವಯ್ಯ, ಅರೆಯಡ ಅಶೋಕ್, ಕನ್ನಂಭೀರ ಸುಧಿ ತಿಮ್ಮಯ್ಯ, ಕಂಗಾಂಡ ಜಾಲಿ ಪೂವಪ್ಪ, ಕುಮ್ಮಂಡ ತಿಮ್ಮಯ್ಯ. ಕೇಶವ, ಚೀಯಕಪೂವಂಡ ಅಪ್ಪಚ್ಚು, ಸತೀಶ್, ಕೋಟೆರ ಚುಬ್ರಿ ಸುಬ್ಬಯ್ಯ , ಶಿವಚಾಳಿಯಂಡ ಪ್ರಸಾದ್, ಶುಭಾಷ್, ಕೊ0ಬಂಡ ವಿಠಲ, ನಂದ, ಸಂಜು, ಅಮ್ಮಂಡ ಜಾಲಿ, ಬಿಲ್ಲವರ ಬಾಬು, ಪ್ರಕಾಶ್, ದಿನೇಶ್, ಅಪ್ಪಿ, ಕಿರಿಯ ಇಂಜಿನಿಯರ್ ಪ್ರಮೋದ್, ಸಹಾಯಕ ಇಂಜಿನಿಯರ್ ಪೂವಯ್ಯ ಕಂಟ್ರಾಕ್ಟರ್ ಬಾಬು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.