ನಾಪೋಕ್ಲು ಜ.19 : ಉತ್ತಮ ವ್ಯಕ್ತಿತ್ವದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಹೇಳಿದರು.
ಹೊದವಾಡ ರಾಫಲ್ಸ್ ಇಂಟರ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ಕೇವಲ ಶಿಕ್ಷಣ ಪಡೆದರೆ ಸಾಲದು ಎಲ್ಲಾ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ದೇಶ-ವಿದೇಶಗಳಲ್ಲಿ ಇಂಗ್ಲಿಷ್ ಭಾಷೆಯ ಅಗತ್ಯವಿದೆ. ಆಳವಾದ ಅಧ್ಯಯನದಿಂದ ಮುಂದೆ ಬರಲು ಸಾಧ್ಯ ಎಂದ ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಪ್ರತಿಯೊಬ್ಬರು ಧನಾತ್ಮಕ ಚಿಂತನೆ, ಶಿಸ್ತು, ಸಮಯ ಪಾಲನೆ ಇತರ ಮಾತುಗಳನ್ನು ಆಲಿಸುವ ವ್ಯವದಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಅಬ್ದುಲ್ ಅಜೀಜ್, ಖಾಲಿದ್ ಹಾಜಿ ಹಾಕತ್ತೂರು, ಶಿಕ್ಷಕ ಮೆಹಬೂಬ್ ಸಾಬ್ ನಮ್ಮ ಅನಿಸಿಕೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ರಾಫೆಲ್ಸ್ ಇಂಟರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಅಬ್ದುಲ್ಲಾ ಹೆಚ್. ಹಂಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರಮುಖರಾದ ಅಬ್ದುಲ್ ಹಮೀದ್, ಹೊದವಾಡ ಗ್ರಾ.ಪಂ ಸದಸ್ಯ ಹಂಸ, ಹೊದ್ದೂರು ಗ್ರಾ.ಪಂ ಸದಸ್ಯ ಮೊಯಿದು, ಉದ್ಯಮಿ ಮನ್ಸೂರ್ ಆಲಿ ನಾಪೋಕ್ಲು, ಪ್ರಾಂಶುಪಾಲ ಕೆ.ಸಿ.ತನ್ವೀರ್, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ಮತ್ತಿತರರು ಪಾಲ್ಗೊಂಡಿದ್ದರು.
ಈ ಸಂದರ್ಭ ಜಿ. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮೆಹಬೂಬ್ ಸಾಬ್ ಅವರಿಗೆ ಸನ್ಮಾನ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಫಿದಾ ಫಾತಿಮಾ ಸ್ವಾಗತಿಸಿದರು. ಅಫೀಫ ಮತ್ತು ಮುಬಶಿರ ನಿರೂಪಿಸಿ, ಪ್ರಾಂಶುಪಾಲ ಕೆ.ಸಿ.ತನ್ವೀರ್ ವರದಿ ವಾಚಿಸಿದರು. ಕೆ.ಯು.ಮಹಮ್ಮದ್ ಉಫೇಸ್ ವಂದಿಸಿದರು.
ಬಳಿಕ ಅತ್ಯಂತ ಅಧುನಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ವೇಷ ಭೂಷಣ ನೃತ್ಯ ಪ್ರಕಾರಗಳ ಹಿನ್ನೆಲೆ ಸೌಂಡ್, ಲೈಟಿಂಗ್ ಮೂಲಕ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ವರದಿ : ದುಗ್ಗಳ ಸದಾನಂದ.