ನಾಪೋಕ್ಲು ಜ.21 : ಕೊಡಗಿನ ಆದಿ ಗ್ರಂಥ ಪಟ್ಟೋಳೆ ಪಳಮೆಯನ್ನು ಆಧರಿಸಿದ ಪೌರಾಣಿಕ ಕೊಡವ ಚಲನಚಿತ್ರ ”ಕಲ್ಲಕೆರೆ ಮಾದೇವಿ” ಜ.23 ರಂದು ಕೋಕೇರಿಯ ಮಹಿಳಾ ಸಮಾಜದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕರಾದ ಬಾಳೆಯಡ ಪ್ರತಿಷ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ತಿಳಿಸಿದರು.
ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಲಕೆರೆ ಮಾದೇವಿ ಪೌರಾಣಿಕ ಕೊಡವ ಚಲನಚಿತ್ರ ಜ.23 ರಂದು ಬಿಡುಗಡೆ ಆಗಲಿದ್ದು, ಸಾರ್ವಜನಿಕರಿಗೆ ಮೂರು ಪ್ರದರ್ಶನಗಳಿವೆ. ಮಧ್ಯಾಹ್ನ 2 ಗಂಟೆಗೆ 4:30ಕ್ಕೆ ಹಾಗೂ 6.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
600 ವರ್ಷದ ಹಳೆಯ ಕಥೆಯನ್ನು ಹೊಂದಿರುವ ಚಲನಚಿತ್ರವು ಜನರನ್ನು ಆಕರ್ಷಿಸಲಿದೆ ಎಂದರು.
ಪಟ್ಟಡ ರೀನಾ ಪ್ರಕಾಶ್ ನಿರ್ಮಿಸಿರುವ ಈ ಚಲನಚಿತ್ರದಲ್ಲಿ ಆರ್. ಉಮೇಶ್ ಸಹ ನಿರ್ಮಾಪಕರಾಗಿದ್ದಾರೆ. ಮುಖ್ಯ ಪಾತ್ರಧಾರಿಗಳಾಗಿ ಕೋಪುಡ ದೇಚ್ನಾ ದೇಚಮ್ಮ, ಚೆರುವಾಳಂಡ ರಾಕೇಶ್, ಮುಂಡಚಾಡಿರಾ ರಿಮ್ಮಿ ಭರತ್, ಚೇನಂಡ ಗಿರೀಶ್, ಮಳ್ಳಮಡ ಶ್ಯಾಮಲ ಹಾಗೂ ವಿಶೇಷ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಾರ್ವಜನಿಕರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಅವರು ಮನವಿ ಮಾಡಿದರು.
ವರದಿ : ದುಗ್ಗಳ ಸದಾನಂದ