ಮಡಿಕೇರಿ ಜ.21 : ಮೈಸೂರು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಹಾಗೂ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಕರ ಸಂಘಟನೆ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ 2022-2023ನೇ ರಾಜ್ಯ ಮಟ್ಟದ ಶಿಕ್ಷಕ ಸೇವಾ ರತ್ನ ಪ್ರಶಸ್ತಿಗೆ ಕೊಡಗಿನ ಐವರು ನಿಕಟಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳು ಆಯ್ಕೆಯಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನಿಂದ ತಿರುನ್ನೆಲ್ಲಿಮಡ ಜೀವನ್, ವಿರಾಜಪೇಟೆ ತಾಲೂಕಿನಿಂದ ವಿ.ಟಿ.ವೆಂಕಟೇಶ್, ಮಡಿಕೇರಿ ತಾಲೂಕಿನಿಂದ ಯು.ಎಸ್.ರೇಖಾ, ಕುಶಾಲನಗರ ತಾಲೂಕಿನಿಂದ ಬಿ.ಎನ್.ಸತ್ಯನಾರಾಯಣ, ಸೋಮವಾರಪೇಟೆ ತಾಲೂಕಿನಿಂದ ಎಸ್.ಎಂ.ಸುರೇಶ್ ಆಯ್ಕೆಯಾಗಿದ್ದು,
ಫೆ.5ರಂದು ಬೆಂಗಳೂರಿನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.