ಕುಶಾಲನಗರ ಜ.23 : ಕುಶಾಲನಗರ ಬಿಜೆಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಕುಶಾಲನಗರದಲ್ಲಿ ‘ಬೂತ್ ವಿಜಯ್ ಸಂಕಲ್ಪ’ ಕಾರ್ಯಕ್ರಮ ನಡೆಸಲಾಯಿತು. ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕೇoದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪುರಸಭೆಯು ಹಮ್ಮಿಕೊಂಡಿರುವ ಜನಪರ ಯೋಜನೆಗಳ ಕರ ಪತ್ರಗಳನ್ನು ಸ್ಥಳೀಯ ಆಟೋಚಾಲಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ವರ್ತಕರಿಗೆ, ಸಾರ್ವಜನಿಕರಿಗೆ ನೀಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಉಮಾಶಂಕರ್, ಸಹ ಪ್ರಮುಖ್‌ಶಿವಾಜಿ, ಪುರಸಭೆಯ ಅಧ್ಯಕ್ಷರಾದ ಜಯವರ್ದನ್, ಪ್ರಬಾರಿಗಳಾದ ವೇದಾವತಿ, ಪುರಸಭೆಯ ಸದಸ್ಯರಾದ ಅಮೃತ್‌ರಾಜ್, ಡಿ.ಕೆ.ತಿಮ್ಮಪ್ಪ, ಕೆ.ಜಿ.ಮನು, ಪುಂಡರಿಕಾಕ್ಷ, ಕುಡ ಅಧ್ಯಕ್ಷರಾದ ಚರಣ್, ವರದ, ಬಾಲಕೃಷ್ಣ, ರಜಿನಿಕಾಂತ, ಸೋಮಣ್ಣ, ಸುಮನ್, ಚಂದ್ರಶೇಖರ್ ಇದ್ದರು.









