ಮಡಿಕೇರಿ ಜ.25 : ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಬಯಸುವವರು ಫೆಬ್ರವರಿ, 15 ರೊಳಗೆ ಅರ್ಜಿ ಸಲ್ಲಿಸಬಹುದು.
ನಗರ ಪುನರ್ವಸತಿ ಕಾರ್ಯಕರ್ತರು ಮಾಸಿಕ ಗೌರವಧನ 9 ಸಾವಿರ ರೂ., ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮಾಸಿಕ ಗೌರವಧನ 9 ಸಾವಿರ ರೂ. ಎಸ್ಸೆಸ್ಸೆಲ್ಸಿ ಉತ್ತೀರ್ಣ/ ಅನುತ್ತೀರ್ಣ, ಶೇ.40 ಕ್ಕಿಂತ ಮೇಲ್ಪಟ್ಟು ಶೇ.75 ಕ್ಕಿಂತ ಕಡಿಮೆ ಇರಬೇಕು. 18 ರಿಂದ 45 ವರ್ಷದ ವಯೋಮಾನದವರಾಗಿರಬೇಕು.
ಹುದ್ದೆಗಳು ಖಾಲಿ ಇರುವ ವಿವರ ಯುಆರ್‍ಡಬ್ಲ್ಯು:- ನಗರಸಭೆ ಮಡಿಕೇರಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ವಿರಾಜಪೇಟೆ ಪಟ್ಟಣ ಪಂಚಾಯಿತಿ. ವಿಆರ್‍ಡಬ್ಲ್ಯು ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ, ಚೆಂಬು, ಕುಂಜಿಲ, ಕೊಣಂಜಗೇರಿ, ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿ, ಹಂಡ್ಲಿ, ಅಲೂರು ಸಿದ್ದಾಪುರ. ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ, ಬಿರುನಾಣಿ, ದೇವರಪುರ, ಗೋಣಿಕೊಪ್ಪ, ಹಾಲುಗುಂದ, ನಿಟ್ಟೂರು, ನಾಲ್ಕೇರಿ, ಪೊನ್ನಪ್ಪಸಂತೆ, ಕದನೂರು, ಕೆ.ಬಾಡಗ, ಕಿರುಗೂರು, ತಿತಿಮತಿ, ಶ್ರೀಮಂಗಲ.
ಅರ್ಜಿ ನಮೂನೆಗಳನ್ನು ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಗಳಲ್ಲಿರುವ ಎಂಆರ್‍ಡಬ್ಲ್ಯುಗಳಿಂದ ಉಚಿತವಾಗಿ ಪಡೆದು ನಿಗದಿತ ದಿನಾಂಕದೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಅಥವಾ ಎಂಆರ್‍ಡಬ್ಲ್ಯುಗಳಿಗೆ ಸಲ್ಲಿಸಲು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ ಅವರು ತಿಳಿಸಿದ್ದಾರೆ.
Breaking News
- *ಯುವನಿಧಿ ಯೋಜನೆ ಹೆಸರು ನೋಂದಣಿಗೆ ಮನವಿ*
- *ಮಡಿಕೇರಿಯಲ್ಲಿ ಸಹಕಾರ ಸಪ್ತಾಹ : ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಶ್ರಮಿಸಿ : ಎಂ.ಸಿ.ನಾಣಯ್ಯ ಸಲಹೆ*
- *ಗೋಣಿಕೊಪ್ಪಲಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ*
- *ಶ್ರೀ ಕೇತ್ರ ಧರ್ಮಸ್ಥಳದಿಂದ ಕೊಡಗಿನ ಸರ್ಕಾರಿ ಶಾಲೆಗಳಿಗೆ 72 ಲಕ್ಷ ಮೌಲ್ಯದ ಡೆಸ್ಕ್- ಬೆಂಚು ವಿತರಣೆ*
- *ಪೊನ್ನಂಪೇಟೆ : ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಅವಿನ್ಯಂ” ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ*
- *ವಿಹೆಚ್ಪಿಯಿಂದ ನ.15 ರಂದು ಭಾಗಮಂಡಲದಲ್ಲಿ ಕಾವೇರಿ ಆರತಿ*
- *ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಗೋಣಿಕೊಪ್ಪಲಿನಲ್ಲಿ ಏಡ್ಸ್ ಕುರಿತು ಜಾಗೃತಿ : ಜಾಗೃತಿಯಿಂದ ಮಾತ್ರ ಏಡ್ಸ್ ತಡೆಗಟ್ಟಲು ಸಾಧ್ಯ : ಡಾ. ಎಂ.ಬಿ.ಕಾವೇರಿಯಪ್ಪ*
- *ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶಗಳಿಲ್ಲ : ಕೊಡಗು ಬಿಜೆಪಿ ಅಸಮಾಧಾನ*
- *ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ*